ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿರುವ ಮಹೀಂದ್ರ

By Nagaraja

ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ಚೊಚ್ಚಲ ಎಫ್‌ಐಎ ಫಾರ್ಮುಲಾ ಇ (ಎಲೆಕ್ಟ್ರಿಕ್ ) ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹೀಂದ್ರ ರೇಸಿಂಗ್ ತಂಡ ಭಾಗವಹಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ನಿಮ್ಮ ಮಾಹಿತಿಗಾಗಿ 2014ರಿಂದ 2015ರ ನಡೆಯಲಿರುವ ಚೊಚ್ಚಲ ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯುತ್ ಚಾಲಿತ ಸಿಂಗಲ್ ಸೀಟಿನ ರೇಸಿಂಗ್ ಕಾರುಗಳು ಭಾಗವಹಿಸಲಿದೆ. ಒಟ್ಟು ಭಾಗವಹಿಸಲಿರುವ 10 ತಂಡಗಳ ಪೈಕಿ ಎಂಟನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, ಇದರದಲ್ಲಿ ಮಹೀಂದ್ರ ರೇಸಿಂಗ್ ಕಾಣಿಸಿಕೊಂಡಿದೆ. ಈ ಮೂಲಕ ಜಾಗತಿಕವಾಗಿ 'ಇ' ಚಾಂಪಿಯನ್‌ಶಿಪ್‌ನಲ್ಲೂ ಭಾರತ ಗುರುತಿಸಿಕೊಳ್ಳಲಿದೆ.

ಸ್ಟ್ರೀಟ್ ಸರ್ಕ್ಯೂಟ್

ಸ್ಟ್ರೀಟ್ ಸರ್ಕ್ಯೂಟ್

ಅಂದ ಹಾಗೆ ಫಾರ್ಮುಲಾ ಒನ್ ಇ ಚಾಂಪಿಯನ್‌ಶಿಪ್ ವಿವಿಧ ದೇಶಗಳ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ನಡೆಯಲಿದೆ. ಇಲ್ಲಿ ಸ್ಟ್ಟೀಟ್ ಸರ್ಕ್ಯೂಟ್ ಅಂದರೆ ನಗರದಲ್ಲಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಸಾರ್ವಜನಿಕ ಸಾರಿಗೆಗೆ ಮುಚ್ಚಲಾಗಿರುತ್ತದ್ದಲ್ಲದೆ ಮೋಟಾರು ರೇಸ್‌ಗಳಿಗಾಗಿ ಬಳಕೆ ಮಾಡಲಾಗುತ್ತದೆ.

ಆತಿಥ್ಯ ನಗರಗಳು

ಆತಿಥ್ಯ ನಗರಗಳು

ಜಗತ್ತಿನ 10 ರಾಷ್ಟ್ರಗಳ ನಗರಗಳು ಫಾರ್ಮುಲಾ ಇ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲಿದೆ. ಅವುಗಳೆಂದರೆ

ಬೀಜಿಂಗ್, ಪುಟ್ರಜಯ, ಹಾಂಕಾಂಗ್, ಪುಂಟ ಡೆಲ್ ಎಸ್ಟೆ, ಬ್ಯುನಸ್ ಐರಿಸ್, ಲಾಸ್ ಏಂಜಲೀಸ್, ಮಿಯಾಮಿ, ಮೊಟೆ ಕಾರ್ಲೊ, ಬರ್ಲಿನ್ ಮತ್ತು ಲಂಡನ್.

ದಿನಾಂಕ

ದಿನಾಂಕ

2014 ಸೆಪ್ಟೆಂಬರ್ 20ರಂದು ಚೀನಾದ ಬೀಜಿಂಗ್‌ನಿಂದ ಆರಂಭವಾಗಲಿರುವ ಮೊದಲ ಫಾರ್ಮುಲಾ ಇ ಚಾಂಪಿಯನ್‌ಶಿಪ್ ಸೀಸನ್ 2015 ಜೂನ್ 27ರಂದು ಲಂಡನ್‌ನಲ್ಲಿ ಕೊನೆಗೊಳ್ಳಲಿದೆ.

ಪಕ್ಷಿನೋಟ

ಪಕ್ಷಿನೋಟ

  • ಒಟ್ಟು 10 ತಂಡಗಳು, 20 ಚಾಲಕರು ಹಾಗೂ 40 ಕಾರುಗಳು,
  • ಪ್ರತಿ ತಂಡಗಳಲ್ಲೂ ಇಬ್ಬರು ಚಾಲಕರು ಹಾಗೂ 4 ಕಾರುಗಳು,
  • ಜಗತ್ತಿನ 10 ನಗರಗಳಲ್ಲಿ ಇ-ಪ್ರಿ ಆಯೋಜನೆ
  • ಪ್ರತಿ ರೇಸಿಂಗ್ ಸರ್ಕ್ಯೂಟ್ 2.5 ರಿಂದ 3 ಕೀ.ಮೀ. ದೂರ ಹೊಂದಿರಲಿದೆ,
  • ಕಾರುಗಳು ಕೇವಲ 3 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸಲಿದೆ,
  • ಕಾರುಗಳ ಗರಿಷ್ಠ ವೇಗ ಗಂಟೆಗೆ 220 ಕೀ.ಮೀ.
  • ಭಾಗವಹಿಸಲಿರುವ ತಂಡಗಳು

    ಭಾಗವಹಿಸಲಿರುವ ತಂಡಗಳು

    • ಡ್ರೆಯ್ಸನ್ ರೇಸಿಂಗ್ - ಬ್ರಿಟನ್
    • ಚೀನಾ ರೇಸಿಂಗ್ - ಚೀನಾ
    • ಆಂಡ್ರೆಟ್ಟಿ ಆಟೋಸ್ಪೋರ್ಟ್ - ಅಮೆರಿಕ
    • ಡ್ರಾಗನ್ ರೇಸಿಂಗ್ - ಅಮೆರಿಕ
    • ಇ.ಡ್ಯಾಮ್ಸ್ - ಫ್ರಾನ್ಸ್
    • ಸೂಪರ್ ಆಗುರಿ - ಜಪಾನ್
    • ಆಡಿ ಸ್ಪೋರ್ಟ್ ಆಬ್ಟ್ ಫಾರ್ಮುಲಾ ಇ ಟೀಮ್ - ಜರ್ಮನಿ
    • ಮಹೀಂದ್ರ ರೇಸಿಂಗ್ - ಭಾರತ
    • ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿರುವ ಮಹೀಂದ್ರ

      ಅಂದ ಹಾಗೆ ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿರುವ ದೇಶದ ಮೊದಲ ತಂಡವೆಂಬ ಖ್ಯಾತಿಗೆ ಮಹೀಂದ್ರ ರೇಸಿಂಗ್ ಪಾತ್ರವಾಗಲಿದೆ.

More from DriveSpark

Article Published On: Friday, November 29, 2013, 12:19 [IST]
English summary
Only about couple of months after the first report about Mahindra's interest in being a part of the inaugural 2014 Formula E Championship emerged, the Indian auto giant has officially signed a contract with Formula E Holdings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+