ಕಳಪೆ ಪ್ರದರ್ಶನ; ಮಹೀಂದ್ರ ರೇಸಿಂಗ್ ತಂಡದಿಂದ ಚಂದೋಕ್ ಔಟ್
ಚೊಚ್ಚಲ ಎಫ್‌ಐಎ ಫಾರ್ಮುಲಾ ಎಲೆಕ್ಟ್ರಿಕ್ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಿದ ದೇಶದ ಮೊದಲ ರೇಸರ್ ಎನಿಸಿಕೊಂಡಿದ್ದ ಕರುಣ್ ಚಂದೋಕ್ ಅವರನ್ನು ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಮಹೀಂದ್ರ ರೇಸಿಂಗ್ ತಂಡದಿಂದ ಕೈಬಿಡಲಾಗಿದೆ.
ನಿಮ್ಮ ಮಾಹಿತಿಗಾಗಿ, ಕಳೆದ ಸಾಲಿನಲ್ಲಿ ನಡೆದ ಮೊದಲ ಫಾರ್ಮುಲಾ ಎಲೆಕ್ಟ್ರಿಕ್ ಅಥವಾ ಇ ಚಾಂಪಿಯನ್ ಶಿಪ್ ನಲ್ಲಿ ಚಂದೋಕ್ ಅವರು ಮಹೀಂದ್ರ ತಂಡವನ್ನು ಪ್ರತಿನಿಧಿಸಿದ್ದರು.

ಈಗ ಸ್ಪರ್ಧಾತ್ಮಕ ರೇಸಿಂಗ್ ಜಗತ್ತಿನಲ್ಲಿ ಹೊಸ ರೇಸರುಗಳ ಹುಡುಕಾಟದಲ್ಲಿರುವ ಮಹೀಂದ್ರ ರೇಸಿಂಗ್ ತಂಡವು ಈ ಭಾರತೀಯ ಚಾಲಕನನ್ನು ಕೈಬಿಡಲು ನಿರ್ಧರಿಸಿದೆ.
ಅಲ್ಲದೆ ಎರಡನೇ ಆವೃತ್ತಿಗಾಗಿ ತನ್ನ ಹೊಸ ತಂಡವನ್ನು ಆಗಸ್ಟ್ 10ರಂದು ಮಹೀಂದ್ರ ಘೋಷಣೆ ಮಾಡಲಿದೆ. ಈ ರೇಸಿಂಗ್ ಸ್ಪರ್ಧಾ ಕೂಟವು ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನೆರವೇರಲಿದೆ.


Click it and Unblock the Notifications








