ಶಕ್ತಿಶಾಲಿ ರೇವಾ ಲಾಂಚ್ ಮಾಡಲಿರುವ ಮಹೀಂದ್ರ

By Nagaraja

ದೇಶದ ಪ್ರಮುಖ ವಿದ್ಯುತ್ ಚಾಲಿತ ಕಾರು ಉತ್ಪಾದಕ ಸಂಸ್ಥೆಯಾಗಿರುವ ಮಹೀಂದ್ರ, ಸದ್ಯದಲ್ಲೇ ಅತ್ಯಂತ ಶಕ್ತಿಶಾಲಿ ರೇವಾ ಎಲೆಕ್ಟ್ರಿಕ್ ಕಾರನ್ನು ಯುರೋಪ್‌ನಲ್ಲಿ ಲಾಂಚ್ ಮಾಡಲಿದೆ ಎಂಬುದಾಗಿ ವರದಿಗಳು ತಿಳಿಸಿವೆ. ಇದು ಭಾರತದಲ್ಲಿ ಬಿಡುಗಡೆಯಾಗಿರುವ ರೇವಾ ಇ2ಒ (e20) ಆವೃತ್ತಿಯ ಪರರ್‌ಫುಲ್ ವರ್ಷನ್ ಆಗಿರಲಿದೆ. ಕೆಲವು ದಿನಗಳ ಹಿಂದೆಯಷ್ಟೇ ನೇಪಾಳದಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಕಾರನ್ನು ರೇವಾ ಲಾಂಚ್ ಮಾಡಿತ್ತು.

ವರದಿಗಳ ಪ್ರಕಾರ ಮಹೀಂದ್ರ ಆಂಡ್ ಮಹೀಂದ್ರ ಮತ್ತು ಇದರ ಅಂಗಸಂಸ್ಥೆಯಾಗಿರುವ ರೇವಾ ಜಂಟಿಯಾಗಿ ಹೆಚ್ಚು ಶಕ್ತಿಶಾಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ಕಾರ್ಯಮಗ್ನವಾಗಿದೆ.


ಸದ್ಯ ಮಿಡ್ ರೇಂಜ್ (50-60 kW ಅಥವಾ 67-81bhp) ಹಾಗೂ ಹೈ ರೇಂಜ್ (80 kW ಅಥವಾ 107bhpಗಿಂತ ಮೇಲ್ಪಟ್ಟ) ಎಂಜಿನ್‌ಗಳು ಅಭಿವೃದ್ಧಿ ಹಂತದಲ್ಲಿವೆ. ಯುರೋಪ್ ವರ್ಷನ್ ಇ2ಒ ಮಿಡ್ ರೇಂಜ್‌ನಿಂದ ನಿಯಂತ್ರಿಸಲ್ಪಡಲಿದೆ. ಸದ್ಯ ಭಾರತದಲ್ಲಿರುವ ಇ2ಒ 19kW ಪವರ್ ಹೊಂದಿದೆ. ಹಾಗೆಯೇ ಹೈ ರೇಂಜ್ ಪವರ್‌ಟ್ರೇನ್ ಮೂಖಾಂತರ ಸೆಡಾನ್ ಹಾಗೂ ಮಿನಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಉತ್ಪಾದಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಈ ಹಿಂದೆ 2009ರ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಬೆಂಗಳೂರು ಮೂಲದ ಮಹೀಂದ್ರ ರೇವಾ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯು, ಯುರೋಪ್ ಮಾದರಿಯ ಮುಂದಿನ ಜನರೇಷನ್ ರೇವಾ ಎನ್‌ಎಸ್‌ಎಕ್ಸ್ ಕಾನ್ಸೆಪ್ಟ್ ಪ್ರದರ್ಶಿಸಿತ್ತು. ಆದರೆ ಕಾರಣಾಂತರಗಳಿಂದ ಈ ಯೋಜನೆಯನ್ನು ಕೈಬಿಡಲಾಗಿತ್ತು.


ಹಾಗಿದ್ದರೂ ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಮಹೀಂದ್ರ ನಮ್ಮೆಲ್ಲರನ್ನು ಮಗದೊಮ್ಮೆ ಅಚ್ಚರಿಪಡಿಸಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ನಿರೀಕ್ಷಿದಷ್ಟು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವ ರೇವಾ ಬಹುತೇಕ ವೈಫಲ್ಯ ಅನುಭವಿಸಿದೆ. ಹಾಗಾಗಿ ನೂತನ ಮಾರಾಟ ತಂತ್ರದ ಭಾಗವಾಗಿ ಹೆಚ್ಚು ಶಕ್ತಿಶಾಲಿ ವಿದ್ಯುತ್ ಚಾಲಿತ ಕಾರನ್ನು ಅನವಾರಣಗೊಳಿಸಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

More from DriveSpark

Article Published On: Thursday, August 29, 2013, 10:34 [IST]
English summary
Mahindra will start offering a more powerful version of Reva e2o in Europe soon, reports AutocarIndia. The e2o is a pure electric car that was launched by the Reva brand owned by Mahindra & Mahindra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+