ಮಹೀಂದ್ರದಿಂದ ಅಗ್ಗದ ಎಕ್ಸ್‌ಯುವಿ 500 ನಿರೀಕ್ಷಿಸಿ
ಕ್ರೀಡಾ ಬಳಕೆಯ ವಾಹನಗಳ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಸದ್ಯದಲ್ಲೇ ಅಗ್ಗ ದರದಲ್ಲಿ ಎಕ್ಸ್‌ಯುವಿ500 ಬೇಸ್ ವೆರಿಯಂಟ್ ಲಾಂಚ್ ಮಾಡಲಿದೆ. ಮೂಲಗಳ ಪ್ರಕಾರ ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದೊಳಗೆ ಮಹೀಂದ್ರ ಎಕ್ಸ್‌ಯುವಿ 500 ಬೇಸ್ ವೆರಿಯಂಟ್ ಆಗಮನವಾಗಲಿದೆ.
ಈ ಹಿಂದೆ 2011 ಮಧ್ಯಂತರ ಅವಧಿಯಲ್ಲಿ ಲಾಂಚ್ ಆಗಿದ್ದ ಮಹೀಂದ್ರ ಎಕ್ಸ್‌ಯುವಿ 500 ಗ್ರಾಹಕರ ನಿರೀಕ್ಷೆ ಮುಟುವಲ್ಲಿ ಯಶಸ್ವಿಯಾಗಿತ್ತು. ಹಾಗಿದ್ದರೂ ಕಾಯುವಿಕೆ ಅವಧಿ ಆರು ತಿಂಗಳ ವರೆಗೂ ವಿಸ್ತರಣೆಯಾಗಿರುವುದು ಸ್ವಲ್ಪ ಹಿನ್ನಡೆಯನ್ನುಂಟು ಮಾಡಿತ್ತು.
ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಕಳೆದ ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಏರಿಕೆಗೊಳಿಸಿರುವುದು ಮಹೀಂದ್ರ ಎಕ್ಸ್‌ಯುವಿ ಮಾರಾಟ ಕುಸಿತಕ್ಕೆ ಎಡೆಮಾಡಿಕೊಟ್ಟಿತ್ತು. ಲಾಂಚ್ ಆದ ಬಳಿಕ ಈ ವರೆಗೆ ಒಟ್ಟು 63,000 ಯುನಿಟ್ ಸೇಲ್ ಮಾಡುವಲ್ಲಿ ಕಂಪನಿಯು ಯಶಸ್ವಿಯಾಗಿದೆ.
ಪ್ರಸ್ತುತ ಮಹೀಂದ್ರ ಎಕ್ಸ್‌ಯುವಿ 500 ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 12.13 ಲಕ್ಷ ರು.ಗಳಿಂದ 14.78 ಲಕ್ಷ ರು.ಗಳ ವರೆಗಿದೆ.
ಕಂಪನಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇದೇ ಕಾರಣಕ್ಕಾಗಿ ನೂತನ ಬೇಸ್ ವೆರಿಯಂಟ್ ಲಾಂಚ್ ಮಾಡಲು ಯೋಜನೆ ಹಾಕಲಾಗಿದೆ.
ಕಳೆದ 12 ತಿಂಗಳಲ್ಲಿ ಮಹೀಂದ್ರ ಮಾರಾಟ ಅಂಕಿಅಂಶ ಇಂತಿದೆ:
2012 ಜುಲೈ: 4,007 ಯುನಿಟ್
2012 ಆಗಸ್ಟ್: 3,979 ಯುನಿಟ್
2012 ಸೆಪ್ಟೆಂಬರ್: 4,603 ಯುನಿಟ್
2012 ಅಕ್ಟೋಬರ್: 4,320 ಯುನಿಟ್
2012 ನವೆಂಬರ್: 4,237 ಯುನಿಟ್
2012 ಡಿಸೆಂಬರ್: 3,566 ಯುನಿಟ್
2013 ಜನವರಿ: 3,721 ಯುನಿಟ್
2013 ಫೆಬ್ರವರಿ: 3,472 ಯುನಿಟ್
2013 ಮಾರ್ಚ್: 3,187 ಯುನಿಟ್
2013 ಎಪ್ರಿಲ್: 2,253 ಯುನಿಟ್
2013 ಮೇ: 2,144 ಯುನಿಟ್


Click it and Unblock the Notifications









