ಮಹೀಂದ್ರ ರೇವಾಗೆ ಸಿಐಐ ಡಿಸೈನ್ ಪ್ರಶಸ್ತಿಯ ಗರಿ
ತನ್ನದೇ ಆದ ವಿಶೇಷ ವಿನ್ಯಾಸ ಕಾಪಾಡಿಕೊಂಡು ಬಂದಿರುವ ಮಹೀಂದ್ರ ರೇವಾ ವಿದ್ಯುತ್ ಚಾಲಿತ ಕಾರಿಗೆ ಶ್ರೇಷ್ಠತೆಯ ಪ್ರಶಸ್ತಿ ಲಭಿಸಿದೆ. ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ನಾಲ್ಕು ಚಕ್ರದ ಮೊಬಿಲಿಟಿ ವಿನ್ಯಾಸ ವಿಭಾಗದಲ್ಲಿ ಮಹೀಂದ್ರ ರೇವಾ ಇ2ಒ ಉತ್ಕೃಷ್ಟತೆಯ ಪ್ರಶಸ್ತಿಗೆ ಭಾಜನವಾಗಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಭೇಟಿ ಕೊಡುತ್ತಿರಿ
2011ರಲ್ಲಿ ಸಿಐಐ ದೇಶಿಯವಾಗಿ ಪ್ರಶಸ್ತಿ ವಿಭಾಗವನ್ನು ಆರಂಭಿಸಲಾಗಿತ್ತು. ಇದು ದೇಶದ ವಾಹನ ಜಗತ್ತಿನ ಆಟೋ ಕಂಪನಿಗಳಿಗೆ ಉತ್ತೇಜನವನ್ನು ನೀಡುತ್ತಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ, ಪ್ರತಿಷ್ಠಿತ ಪ್ರಶಸ್ತಿ ದೊರಕಿರುವುದು ಸಂತಸ ತಂದಿರುವುದಾಗಿ ತಿಳಿಸಿದರು. ಮಹೀಂದ್ರ ಇ2ಒ ಅಭಿವೃದ್ಧಿಯಲ್ಲಿ ವಿನ್ಯಾಸ ಬಹುದೊಡ್ಡ ಪಾತ್ರ ವಹಿಸುತ್ತಿದ್ದು, ಭವಿಷ್ಯದ ಸಂಚಾರ ವಾಹಕದ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದರು.
ನಿಮ್ಮ ಮಾಹಿತಿಗಾಗಿ ಫಾಸ್ಟ್ ಕಂಪನಿ ನಿಯತಕಾಲಿಕದ 2013ನೇ ಸಾಲಿನ ಅತಿ ಹೆಚ್ಚು ನಾವೀನ್ಯತೆಯ ಜಾಗತಿಕ ಕಂಪನಿಗಳ ಅಗ್ರ 50ರ ಪಟ್ಟಿಯಲ್ಲೂ ಮಹೀಂದ್ರ ರೇವಾ 22ನೇ ಸ್ಥಾನ ಗಿಟ್ಟಿಸಿಕೊಂಡಿದೆ.


Click it and Unblock the Notifications








