ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ ಲಾಂಚ್

Posted By:

ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ, ನೂತನ ಸ್ಕಾರ್ಪಿಯೊ ವಿಶೇಷ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಕಂಪನಿ ಇದುವರೆಗೆ ದರ ಮಾಹಿತಿ ಹೊರಗೆಡವಿಲ್ಲ. ಬಲ್ಲ ಮೂಲಗಳ ಪ್ರಕಾರ ಸಾಮಾನ್ಯ ಟಾಪ್ ಎಂಡ್ ಆವೃತ್ತಿಗಿಂತಲೂ ನೂತನ ಸ್ಪೆಷಲ್ ಎಡಿಷನ್ 20,000 ರು.ಗಳಿಂದ 30,000 ರು.ಗಳಷ್ಟು ದುಬಾರಿಯೆನಿಸಿಕೊಳ್ಳಲಿದೆ.

ವೈಶಿಷ್ಟ್ಯಗಳೇನು?

  • ಯುರೋಪಿಯನ್ ಐಷಾರಾಮಿ ಲೆಥರ್ ಇಂಟಿರಿಯರ್,
  • ಇಂಟೆಗ್ರೇಟಡ್ ರೂಫ್ ಮೌಂಟೆಡ್ ಡಿವಿಡಿ ಪ್ಲೇಯರ್ ಜತೆ 9 ಇಂಚು ಸ್ಕ್ರೀನ್,
  • ಅಲಾಯ್ ವೀಲ್ ಜತೆ ಕ್ರೋಮ್ ಫಿನಿಶ್,
  • ಚರ್ಮದ ಹೋದಿಕೆಯ ಗೇರ್ ನಾಬ್ ಮತ್ತು ಗೇರ್ ಶಿಫ್ಟ್,
  • ಚರ್ಮದ ಹೋದಿಕೆಯ ಸ್ಟೀರಿಂಗ್ ವೀಲ್,
  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್ ಮತ್ತು ವುಡ್ ಫಿನಿಶ್ ಸೆಂಟ್ರಲ್ ಕನ್ಸೋಲ್,

500 ಯುನಿಟ್ ಮಾತ್ರ...

ಆದರೆ ಸೀಮಿತ 500 ಯುನಿಟ್ ಮಾತ್ರ ಮಾರಾಟಕ್ಕೆ ಲಭ್ಯವಿರಲಿದೆ. ಇದರಂತೆ ಆಸಕ್ತ ಗ್ರಾಹಕರು ಬೇಗನೇ ಬುಕ್ಕಿಂಗ್ ಕಾಯ್ದುಕೊಳ್ಳಲು ವಿನಂತಿಸಿಕೊಳ್ಳಲಾಗಿದೆ.

ಟೀಕೆಗೆ ಗುರಿ...

ಇನ್ನೊಂದೆಡೆ 2010ರಲ್ಲಿ ಬಿಡುಗಡೆಯಾದ ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿಗೂ ಹಾಗೂ ಇದೀಗ ಆಗಮನವಾಗಿರುವ ಸ್ಪೆಷಲ್ ಎಡಿಷನ್‌ಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂಬುದು ಆಟೋ ವಿಶ್ಲೇಷಕರ ಟೀಕೆಗೆ ಗುರಿಯಾಗಿದೆ.

ಎಂಜಿನ್...

ನೂತನ ಸ್ಕಾರ್ಪಿಯೊ ವಿಶೇಷ ಆವೃತ್ತಿಯೂ 2.2 ಲೀಟರ್ mHawk ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 120 ಪಿಎಸ್ ಪವರ್ (290 ಎನ್‌ಎಂ) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಫೇಸ್‌ಲಿಫ್ಟ್...

ಅಷ್ಟಕ್ಕೂ ನೂತನ ಫೇಸ್‌ಲಿಫ್ಟ್ ಸ್ಕಾರ್ಪಿಯೊ ಸಿದ್ಧತೆಯಲ್ಲಿರುವ ಮಹೀಂದ್ರ, 2014ರ ಅಂತ್ಯದ ವೇಳೆ ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ. ಪ್ರಸ್ತುತ ಕಾರು ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ಹಮ್ಮಿಕೊಂಡಿದೆ.

English summary
Mahindra has launched a special edition of the popular Scorpio SUV. Mahindra has not revealed the prices of the Scorpio Special Edition but we expect it to be around Rs 20,000-30,000 more than the current top-end variant.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark