ಗಣೇಶನ ಹಬ್ಬಕ್ಕೆ ಮೆರಗು ತುಂಬಲು ಬರುತ್ತಿದೆ ಮಹೀಂದ್ರ ಸ್ಕಾರ್ಪಿಯೊ

ಈ ಬಾರಿಯ ಗಣೇಶ ಹಬ್ಬ ನಮ್ಮ ನಿಮ್ಮೆಲ್ಲರ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ. ಯಾಕೆಂದರೆ ದೇಶದ ರಸ್ತೆಗಳಲ್ಲಿ ಕಳೆದೊಂದು ದಶಕದಿಂದ ಭಾರಿ ಸದ್ದು ಮಾಡುತ್ತಿರುವ ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಈ ಸಂಬಂಧ ಏಕ್ಸ್‌ಕ್ಲೂಸಿವ್ ಟೀಸರ್ ಚಿತ್ರಣಗಳನ್ನು ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಬಿಡುಗಡೆಗೊಳಿಸಿದೆ.

ಮಹೀಂದ್ರ ಪಾಲಿಗೆ ಅದೃಷ್ಟ ಬದಲಾಯಿಸಿದ ಕಾರು ಎಂದೇ ವಿಶ್ಲೇಷಿಸಬಹುದಾದ ಸ್ಕಾರ್ಪಿಯೊ 2003ರಲ್ಲಿ ಮೊದಲ ಬಾರಿಗೆ ಭಾರತೀಯ ರಸ್ತೆಗೆ ಪ್ರವೇಶಿಸಿತ್ತು. ತದಾ ನಂತರ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಷ್ಟಕ್ಕೂ ನೂತನ ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿಯಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ವೈಶಿಷ್ಟ್ಯಗಳೇನು?

ವೈಶಿಷ್ಟ್ಯಗಳೇನು?

  • ಯುರೋಪಿಯನ್ ಐಷಾರಾಮಿ ಲೆಥರ್ ಇಂಟಿರಿಯರ್,
  • ಇಂಟೆಗ್ರೇಟಡ್ ರೂಫ್ ಮೌಂಟೆಡ್ ಡಿವಿಡಿ ಪ್ಲೇಯರ್ ಜತೆ 9 ಇಂಚು ಸ್ಕ್ರೀನ್,
  • ಅಲಾಯ್ ವೀಲ್ ಜತೆ ಕ್ರೋಮ್ ಫಿನಿಶ್,
  • ಲೆಥರ್ ಹೋದಿಕೆಯ ಗೇರ್ ನಾಬ್ ಮತ್ತು ಗೇರ್ ಶಿಫ್ಟ್,
  • ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್,
  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್ ಮತ್ತು ವುಡ್ ಫಿನಿಶ್ ಸೆಂಟ್ರಲ್ ಕನ್ಸೋಲ್,
  • 500 ಯುನಿಟ್ ಮಾತ್ರ

    500 ಯುನಿಟ್ ಮಾತ್ರ

    ಈ ಬಗ್ಗೆ ಫೇಸ್‌ಬುಕ್ ಅಧಿಕೃತ ಪೇಜ್‌ನಲ್ಲಿ ಘೋಷಣೆ ಮಾಡಿರುವ ಮಹೀಂದ್ರ ಸ್ಕಾರ್ಪಿಯೊ, ನಿಯಮಿತ 500 ಯುನಿಟ್‌ಗಳಷ್ಟೇ ವಿಶೇಷ ಆವೃತ್ತಿಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ.

    ಗಣೇಶ, ದೀಪಾವಳಿ ಹಬ್ಬ

    ಗಣೇಶ, ದೀಪಾವಳಿ ಹಬ್ಬ

    ವಿಶೇಷವಾಗಿಯೂ ಹಬ್ಬದ ಆವೃತ್ತಿಗಾಗಿ ಮಹೀಂದ್ರ ಸ್ಕಾರ್ಪಿಯೊ ಪರಿಷ್ಕೃತಗೊಳಿಸಲಾಗುತ್ತಿದ್ದು, ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

    ಸ್ಕಾರ್ಪಿಯೊ ಪಯಣ

    ಸ್ಕಾರ್ಪಿಯೊ ಪಯಣ

    ಕಳೆದೆರಡು ತಿಂಗಳ ಮಾರಾಟದಲ್ಲಿ ರೆನೊ ಡಸ್ಟರ್ ಮೀರಿಸಿದ್ದ ಸ್ಕಾರ್ಪಿಯೊ ಮುಂಬರುವ ಹಬ್ಬದ ಆವೃತ್ತಿಯಲ್ಲೂ ಇದೇ ಆವೇಗ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.

    ಮಹೀಂದ್ರ ಸ್ಕಾರ್ಪಿಯೊ

    ಮಹೀಂದ್ರ ಸ್ಕಾರ್ಪಿಯೊ

    ಇದೀಗ ದೇಶದ ಅಗ್ರಗಣ್ಯ ಎಸ್‌ಯುವಿ ಮಹೀಂದ್ರ ಸ್ಕಾರ್ಪಿಯೊ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
Mahindra has released a teaser image of the Scorpio Special Edition on its Facebook page. The post also confirms that the car will “come soon” with “some luxurious features”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X