ಮಹೀಂದ್ರ ಥಾರ್ ಪರಿಷ್ಕೃತ ಆವೃತ್ತಿ ಮಾರುಕಟ್ಟೆಗೆ
ಗ್ರಾಹಕರಿಂದ ವಿಮರ್ಶೆಯನ್ನು ಸಂಗ್ರಹ ಮಾಡಿರುವ ಮಹೀಂದ್ರ, ನೂತನ ಥಾರ್ ಪರಿಷ್ಕೃತ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎ ಹಾಗೂ ಬಿ ಪಿಲ್ಲರ್ ನಡುವೆ ಹೊಸತಾದ ಕ್ರಾಸ್ ಬಾರ್ ಆಳವಡಿಸಿರುವುದು ನೂತನ ಥಾರ್‌ನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಇದು ಥಾರ್ ಆವೃತ್ತಿಯನ್ನು ಇನ್ನಷ್ಟು ಗಟ್ಟಿಮುಟ್ಟು ಮಾಡಲು ನೆರವಾಗಲಿದೆ. ಅದೇ ರೀತಿ ಫ್ರಂಟ್ ಎಕ್ಸೆಲ್ ಆಟೋ ಲಾಕಿಂಗ್ ಹಬ್ಸ್‌ನಲ್ಲಿ ಬದಲಾವಣೆ ತರಲಾಗದೆ.
ಹಾಗೆಯೇ ಇಂಟಿರಿಯರ್ ಭಾಗಗಳನ್ನು ಪರಿಷ್ಕೃತಗೊಳಿಸಲಾಗುತ್ತಿದೆ. ಇಲ್ಲೂ ಹಿಂಭಾಗದ ಸೀಟಿನ ಹೆಡ್ ರೂಂ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸೀಟು ಎತ್ತರವನ್ನು 6ರಿಂದ 7ಎಂಎಂಗಳಷ್ಟು ತಗ್ಗಿಸಲಾಗಿದೆ.
ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ಸದ್ಯ ನಿಮ್ಮಲ್ಲಿರುವ ಮಹೀಂದ್ರ ಥಾರ್‌ನಲ್ಲಿ ಈ ಎಲ್ಲ ತೊಂದರೆಗಳು ಕಾಣಿಸಿಕೊಂಡಲ್ಲಿ ಸರಿಪಡಿಸಿಕೊಡಲಾಗುವುದು. ಹಾಗೆಯೇ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.
2.5 ಲೀಟರ್ ಸಿಆರ್‌ಡಿಇ ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಥಾರ 105 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡುತ್ತದೆ.
ಇತರ ಪ್ರಮುಖ ಬದಲಾವಣೆಗಳು
- ಎಸಿ ಸ್ವಿಚ್,
- ಡೋರ್ ಹ್ಯಾಂಡಲ್
- ಫ್ರಂಟ್ ಕೆನೊಪಿ
- ಆಟೋ ಲಾಕಿಂಗ್ ಹಬ್ಸ್


Click it and Unblock the Notifications
