ಅಗ್ಗವಾಗಲಿದೆ ಮಹೀಂದ್ರ ಎಕ್ಸ್‌ಯುವಿ500 ದರ

By Nagaraja

ಹ್ಹಾಂ..! ಅದೇಗೆ ಅಂತೀರಾ? ಹೌದು, ಎಸ್‌ಯುವಿ ದೈತ್ಯ ಮಹೀಂದ್ರ ಎಕ್ಸ್‌ಯುವಿ ದರ ಸದ್ಯದಲ್ಲೇ ಅಗ್ಗವಾಗಲಿದೆ. ಮಹೀಂದ್ರ ಎಸ್‌ಯುವಿ ಇದಕ್ಕೊಂದು ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.

ವಿಶೇಷ ಇಷ್ಟೇ, ಗ್ರೌಂಡ್ ಕ್ಲಿಯರನ್ಸ್ ಕಡಿಮೆ ಮಾಡುವ ಮೂಲಕ ತೆರಿಗೆ ರಿಯಾಯಿತಿ ಪಡೆದುಕೊಳ್ಳುವುದು ಮಹೀಂದ್ರ ಯೋಜನೆಯಾಗಿದೆ. ಈ ಮೂಖಾಂತರ ದರದಲ್ಲೂ ವ್ಯತ್ಯಾಸ ಕಂಡುಬರಲಿದೆ. ಅಂದರೆ ಗ್ರಾಹಕರಿಗೆ ಕೊಂಚ ಕಡಿಮೆ ದರದಲ್ಲಿ ಎಸ್‌ಯುವಿ ತಲುಪಲಿದೆ.


ಕಳೆದ ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಸುಂಕಗಳನ್ನು ಹೆಚ್ಚಳಗೊಳಿಸಲಾಗಿತ್ತು. 1700ಎಂಎಂಗಿಂತಲೂ ಹೆಚ್ಚು ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಕಾರುಗಳು, ನಾಲ್ಕು ಮೀಟರ್‌‌ಗಿಂತ ಹೆಚ್ಚು ಉದ್ದವಿರುವ ಕಾರುಗಳು ಹಾಗೂ 1500ಸಿಸಿಗಿಂದ ದೊಡ್ಡ ಎಂಜಿನ್‌ ಪಡೆದ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 3ರಷ್ಟು ಹೆಚ್ಚಳಗೊಳಿಸಲಾಗಿತ್ತು. ಇದು ಮಹೀಂದ್ರ ಎಕ್ಸ್‌ಯುವಿ 500 ಎಸ್‌ಯುವಿಗೆ ಮಾರಕ ಹೊಡೆತ ನೀಡುವಂತಾಗಿತ್ತು. ಪರಿಣಾಮವೆಂಬಂತೆ ಮಾರಾಟದಲ್ಲಿ ಭಾರಿ ಕುಸಿತ ಕಂಡಿತ್ತು.

ಇದೀಗ ತಮ್ಮ ನೀತಿ ಬದಲಾಯಿಸಿರುವ ಮಹೀಂದ್ರ, ಎಕ್ಸ್‌ಯುವಿ500 ಗ್ರೌಂಡ್ ಕ್ಲಿಯರನ್ಸ್ 200 ಎಂಎಂನಿಂದ 160ಎಂಎಂಗೆ ಇಳಿಸಲು ನಿರ್ಧರಿಸಿದೆ. ಈ ಮೂಲಕ 30,000ದಷ್ಟು ದರ ಇಳಿಕೆ ಕಂಡುಬರಲಿದೆ.

ಕಂಪನಿಯ ಪ್ರಕಾರ ಮಹೀಂದ್ರ ಎಕ್ಸ್‌ಯುವಿ ವಿ6 ವೆರಿಯಂಟ್‌ಗೆ 27,000 ಹಾಗೂ ಟಾಪ್ ಎಂಡ್ ವಿ8 ವೆರಿಯಂಟ್‌ಗೆ 33,000 ವರೆಗೂ ದರ ಇಳಿಕೆ ಕಂಡುಬರಲಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯುವ ಇರಾದೆಯನ್ನು ಕಂಪನಿ ಹೊಂದಿದೆ.

More from DriveSpark

Article Published On: Monday, July 8, 2013, 14:58 [IST]
English summary
In the face of declining sales of its SUVs, particularly the XUV500, due to this year's price hike caused by the higher excise duty, Mahindra has been forced to compromise. India's leading SUV manufacturer will soon start selling its flagship XUV500 with a new, lowered ground clearance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+