ವಿಶ್ವದ ಪರಿಸರ ದಿನದಂದು ಮಹೀಂದ್ರ ಫ್ರಿ ಟೆಸ್ಟಿಂಗ್
ಇಂದು ವಿಶ್ವದೆಲ್ಲೆಡೆ ಪರಿಸರ ದಿನವನ್ನು ಬಹಳ ವಿಂಜೃಭಣೆಯಿಂದ ಆಚರಿಸುತ್ತಿರುವ ನಡುವೆ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುವ ನಿಟ್ಟಿನಲ್ಲಿ ಮಹೀಂದ್ರ ಆಂಡ್ ಮಹೀಂದ್ರ ವಿನೂತನ ಕಾರ್ಯಕ್ರಮ ಹಮ್ಮಕೊಂಡಿದೆ.
ಈಗಾಗಲೇ ಪರಿಸರ ಸ್ನೇಹಿ ಭಾಗವಾಗಿ ದೇಶಕ್ಕೆ ವಿದ್ಯುತ್ ಚಾಲಿತ ವಾಹನಗಳನ್ನು ಪರಿಚಯಿಸಿರುವ ಮಹೀಂದ್ರ ಕಂಪನಿಯು ಇದೀಗ ಉಚಿತ ಎಮಿಷನ್ ಟೆಸ್ಟ್ (ಪಿಯುಸಿ) ಹಮ್ಮಕೊಂಡಿದೆ.
ದೇಶದ್ಯಾಂತ ಹರಡಿರುವ ಮಹೀಂದ್ರ ಖಾಸಗಿ ಹಾಗೂ ವಾಣಿಜ್ಯ ವಾಹನ ಹೊಂದಿರುವ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಇತ್ತೇಚೆಗಷ್ಟೇ ನಗರ ಸಂಚಾರಕ್ಕೆ ಅನುಕೂಲಕವಾಗುವ ನಿಟ್ಟಿನಲ್ಲಿ ನಾಲ್ಕು ಸೀಟಿನ ಎಲೆಕ್ಟ್ರಿಕ್ ಕಾರನ್ನು ಮಹೀಂದ್ರ ಪರಿಚಯಿಸಿತ್ತು. ಇದರ ಬೆನ್ನಲ್ಲೇ ಪರಿಸರ ಸ್ನೇಹಿ ಕಾರ್ಯಕ್ರಮಗಳು ಮೆಚ್ಚುಗಗೆ ಪಾತ್ರವಾಗುತ್ತಿದೆ.


Click it and Unblock the Notifications









