ಮಾರುತಿ, ಮಹೀಂದ್ರ, ಟೊಯೊಟಾ ಡೌನ್; ರೆನೊ, ಹೋಂಡಾ ಏರಿಕೆ

By Nagaraja

2013 ಮೇ ತಿಂಗಳು ಆಟೋ ಜಗತ್ತಿನ ಮಾರಾಟದ ಪಾಲಿಗೆ ಮಿಶ್ರ ಪ್ರತಿಕ್ರಿಯೆ ಲಭಿಸಿದೆ. ಒಂದೆಡೆ ದೇಶದ ನಂ.1 ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸೇರಿಂದಂತೆ ದೇಶದ ಮುಂಚೂಣಿಯ ಸಂಸ್ಥೆಗಳಾದ ಮಹೀಂದ್ರ ಆಂಡ್ ಮಹೀಂದ್ರ ಹಾಗೂ ಟೊಯೊಟಾ ಹಿನ್ನಡೆ ಅನುಭವಿಸಿದ್ದರೆ ಮತ್ತೊಂದೆಡೆ ರೆನೊ ಇಂಡಿಯಾ, ಹೋಂಡಾ ಹಾಗೂ ಜನರಲ್ ಮೋಟಾರ್ಸ್ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ವರ್ಷ ಇದೇ ಅವಧಿಗೆ (2012 ಮೇ) ಹೋಲಿಸದರೆ ರೆನೊ ಇಂಡಿಯಾ ಮಾರಾಟದಲ್ಲಿ ಭರ್ಜರಿ 13 ಪಟ್ಟು ಏರಿಕೆ ಕಂಡಿದ್ದು, ಒಟ್ಟು 6,300 ಯುನಿಟ್‌ಗಳನ್ನು ಸೇಲ್ ಮಾಡಿದೆ. ಈ ಪೈಕಿ ಎಸ‌್‌ಯುವಿ ದೈತ್ಯ ಡಸ್ಟರ್ ಮಾತ್ರವಾಗಿ 5,146 ಯುನಿಟ್‌ಗಳ ಸೇಲ್ಸ್ ಗಿಟ್ಟಿಸಿಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರನೊ ಮಾರಾಟವು ಕೇವಲ 482 ಯುನಿಟ್ ಮಾತ್ರವಾಗಿದ್ದವು.

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕೂಡಾ 2013 ಮೇ ತಿಂಗಳಲ್ಲಿ 11,242 ಯುನಿಟ್‌ಗಳ ಮಾರಾಟ ದಾಖಲಿಸಿಕೊಂಡಿದೆ. ಈ ಮೂಲಕ ಶೇಕಡಾ 9.8ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10,334 ಯುನಿಟ್ ಮಾತ್ರ ಮಾರಾಟವಾಗಿದ್ದವು.

ರೆನೊ ಹಾಗೂ ಹೋಂಡಾ ಹಾದಿಯನ್ನೇ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಹಿಡಿದಿದ್ದು, ಶೇಕಡಾ 40ರಷ್ಟು ಪ್ರಗತಿ ಸಾಧಿಸಿದೆ. ಇತ್ತೀಚೆಗಷ್ಟೇ ಲಾಂಚ್ ಆಗಿದ್ದ ಎರಡು ನೂತನ ಕಾರುಗಳ ಸಂಪೂರ್ಣ ಬೆಂಬಲ ಪಡೆದಿರುವ ಜಿಎಂ ದಿಟ್ಟವಾದ ಹೆಜ್ಜೆಯನ್ನಿಟ್ಟಿದೆ. ಮೇ ತಿಂಗಳಲ್ಲಿ ಷೆವರ್ಲೆ ಸೈಲ್ ಹಾಗೂ ಷೆವರ್ಲೆ ಎಂಜಾಯ್ ಕ್ರಮವಾಗಿ 2,851 ಹಾಗೂ 2,177 ಯುನಿಟ್ ಮಾರಾಟವಾಗಿದೆ.

ಮಾರುತಿ, ಮಹೀಂದ್ರ, ಟೊಯೊಟಾ ಕುಸಿತ...
ಈ ನಡುವೆ 2013 ಮೇ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ, ಮಹೀಂದ್ರ ಹಾಗೂ ಟೊಯೊಟಾ ಕುಸಿತವನ್ನು ಅನುಭವಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಶೇಕಡಾ 14.4 ರಷ್ಟು ಕುಸಿತ ಅನುಭವಿಸಿರುವ ಮಾರುತಿ ಒಟ್ಟು 84,677 ಯುನಿಟ್‌ಗಳ ಮಾರಾಟವನ್ನು ಕಂಡಿದೆ. ಇದು ಕಳೆದ ಬಾರಿ 98,884 ಯುನಿಟ್‌ಗಳಾಗಿದ್ದವು. ರಫ್ತು ವಿಭಾಗದಲ್ಲಿ ಮಾರುತಿ ಶೇ. 27ರಷ್ಟು ಹಿನ್ನಡೆ ಅನುಭವಿಸಿದ್ದು, 6,856 ಯುನಿಟ್ ಮಾತ್ರ ಸೇಲ್ಸ್ ಕಂಡಿದೆ.

ಟೊಯೊಟಾ ಕಿರ್ಲೊಸ್ಕರ್ ಶೇಕಡಾ 35ರಷ್ಟು ಕುಸಿತ ಕಾಣುವ ಮೂಲಕ 10,023 ಯುನಿಟ್‌ಗೆ ಇಳಿಕೆ ಕಂಡಿದೆ. ಕಳೆದ ಬಾರಿಯಿದು 15,501 ಯುನಿಟ್‌ಗಳಾಗಿದ್ದವು. ಇನ್ನು ಮಹೀಂದ್ರ ಆಂಡ್ ಮಹೀಂದ್ರ ಕೂಡಾ ಶೇಕಡಾ 1.2ರಷ್ಟು ಕುಸಿತ ಕಂಡಿದೆ. ಕಳೆದ ಬಾರಿ 43,989ರಷ್ಟಿದ್ದ ಸೇಲ್ಸ್ ಈ ಬಾರಿ 43,460 ಯುನಿಟ್‌ಗಳಿಗೆ ಇಳಿಕೆ ಕಂಡಿವೆ.

More from DriveSpark

Article Published On: Monday, June 3, 2013, 15:06 [IST]
English summary
Car sales in May witnessed a mixed trend after decline of 10.43 per cent year-on-year in April 2013, with sales at Renault, Honda and GM India rising in contrast to fall in Maruti, M&M and Toyota Kirloskar in comparison to May 2012 sales.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+