Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೂಪರ್ ಕ್ಯಾರಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ
ಮಾರುತಿ ಕಂಪನಿಯ ಸೂಪರ್ ಕ್ಯಾರಿ ಎಲ್‍ಸಿವಿ (ಲೈಟ್ ಕಮರ್ಷಿಯಲ್ ವೆಹಿಕಲ್)ಯನ್ನು 2016ರ ಜುಲೈ ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದ ನಂತರ ಸುಮಾರು 23,000 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಮಾರುತಿ ಕಂಪನಿಯು 1ನೇ ಏಪ್ರಿಲ್ 2019ರಿಂದ ಈ ಡೀಸೆಲ್ ವಾಹನದ ಉತ್ಪಾದನೆಯನ್ನು ನಿಲ್ಲಿಸಿರುವುದಾಗಿ ಘೋಷಿಸಿದೆ.

ಮೋಟಾರ್ ಬೀಮ್ ಸುದ್ದಿ ಸಂಸ್ಥೆಯ ಪ್ರಕಾರ, ಬಿಎಸ್6 ವಾಯು ಮಾಲಿನ್ಯಕ್ಕೆ ಅನುಗುಣವಾಗಿ ಈ ಡೀಸೆಲ್ ವಾಹನವನ್ನು ಅಪ್ ಗ್ರೇಡ್ ಮಾಡುವುದು ಮಾರುತಿ ಕಂಪನಿಗೆ ದುಬಾರಿಯಾಗುವುದರಿಂದ ಸೂಪರ್ ಕ್ಯಾರಿಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಡೀಸೆಲ್ ಮಾದರಿಯ ಬೆಲೆಯು ಭಾರತದಲ್ಲಿನ ಎಕ್ಸ್ ಶೋ ರೂಂ ದರದಂತೆ ರೂ. 4.71 ಲಕ್ಷಗಳಾಗಿದೆ. ಡೀಸೆಲ್ ಎಂಜಿನನ್ನು ಅಪ್ ಗ್ರೇಡ್ ಮಾಡುವುದರ ಪರಿಣಾಮ ವಾಹನದ ಬೆಲೆಗಳ ಮೇಲೆ ಆಗುವುದರಿಂದ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಆದರೆ ಪೆಟ್ರೋಲ್ ಮತ್ತು ಸಿಎನ್‍ಜಿ ಆವೃತ್ತಿಗಳು ಮೊದಲಿನಂತೆ ಮಾರಾಟವಾಗಲಿವೆ.

ಮಾರುತಿ ಸೂಪರ್ ಕ್ಯಾರಿ ಎಲ್‍ಸಿವಿ ಯು 793 ಸಿಸಿಯ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದ್ದು, 32 ಬಿಹೆಚ್‍ಪಿ ಮತ್ತು 75 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ನೀಡಲಾಗಿದೆ. ಎಆರ್‍ಎಐ ಸರ್ಟಿಫಿಕೇಟ್ ನಲ್ಲಿ ತಿಳಿಸಿರುವಂತೆ ಈ ಎಲ್‍ಸಿವಿ ಒಂದು ಲೀಟರ್ ಡೀಸೆಲ್ ಗೆ 22.07 ಕಿ.ಮೀ ಗಳ ಮೈಲೇಜ್ ನೀಡುತ್ತದೆ.

ಈ ವಾಹನವು ಸುಪಿರಿಯರ್ ವೈಟ್ ಮತ್ತು ಸುಪಿರಿಯರ್ ಸಿಲ್ವರ್ ಎಂಬ ಎರಡು ಬಣ್ಣಗಳಲ್ಲಿ ದೊರೆಯುತ್ತದೆ. ಈ ಸೂಪರ್ ಕ್ಯಾರಿ ವಾಹನದ ತೂಕ ಸಾಮರ್ಥ್ಯವು 740 ಕಿಲೋಗ್ರಾಂ ಆಗಿದ್ದರೆ, ಲೋಡಿಂಗ್ ಬೇ 3.25 ಚದುರ ಮೀಟರ್ ಗಳಷ್ಟಿದೆ.

ಈ ವಾಹನದ ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ಸ್ ನ ಜೊತೆಯಲ್ಲಿರುವ ಮ್ಯಾಕ್ ಫರ್ ಸನ್ ಸ್ಟ್ರಟ್ಸ್ ಮತ್ತು ಹಿಂಭಾಗದಲ್ಲಿ ಲೀಫ್ ಸ್ಪ್ರಿಂಗ್ಸ್ ಜೊತೆಯಲ್ಲಿರುವ ರಿಜಿಡ್ ಆಕ್ಸೆಲ್ ಗಳಿವೆ. ಮಾರುತಿ ಸೂಪರ್ ಕ್ಯಾರಿ ಎಲ್‍ಸಿಎ ಯು 17 ಎಂಎಂ ನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2110 ಎಂಎಂ ನ ವ್ಹೀಲ್ ಬೇಸ್ ಗಳನ್ನು ಹೊಂದಿದೆ. ಇದರ ಜೊತೆಗೆ ಲೈಟ್ ಸ್ಟಿಯರಿಂಗ್ ವ್ಹೀಲ್, ಡ್ಯುಯಲ್ ಅಸಿಸ್ಟ್ ಗ್ರಿಪ್, ಮಲ್ಟಿ ಪರ್ಪಸ್ ಸ್ಟೋರೆಜ್ ಸ್ಪೇಸ್ ಗಳು, ಲಾಕೇಬಲ್ ಗ್ಲವ್ ಬಾಕ್ಸ್ ಮತ್ತು ಬಾಟಲ್ ಹೊಲ್ಡರ್ ಗಳನ್ನು ಒಳಗೊಂಡಿದೆ.
MUST READ: ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ಈ ವಾಹನದಲ್ಲಿ ಯಾವುದೇ ಏರ್ ಕಂಡಿಷನ್ ಇರುವುದಿಲ್ಲ. ಈ ವಾಹನದ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳಿವೆ. ಮಿನಿಮಂ ಟರ್ನಿಂಗ್ ರೇಡಿಯಸ್ 4.3 ಮೀಟರ್ ಗಳಾಗಿದೆ.

ಮಾರುತಿ ಕಂಪನಿಯು ಸೂಪರ್ ಕ್ಯಾರಿ ವಾಹನದ ಬಿಡುಗಡೆಯೊಂದಿಗೆ ಕಮರ್ಷಿಯಲ್ ವೆಹಿಕಲ್ ಸೆಗ್ ಮೆಂಟಿಗೆ ಕಾಲಿಟ್ಟಿತು. ದೇಶದ್ಯಾಂತ ಸೂಪರ್ ಕ್ಯಾರಿ ವಾಹನಕ್ಕಾಗಿಯೇ ಅಧಿಕೃತ ಡೀಲರ್ ಗಳಿದ್ದಾರೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಅನೇಕ ವಾಹನ ತಯಾರಕರು ಈಗಿರುವ ಎಂಜಿನನ್ನು ಬಿಎಸ್ 6 ಟೆಕ್ನಾಲಜಿಗೆ ಅಪ್ ಡೇಟ್ ಮಾಡಲು ಸಾಧ್ಯವಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಹೀಗೆ ಅಪ್ ಡೇಟ್ ಮಾಡುವುದು ದುಬಾರಿಯಾಗಿದ್ದು, ಇದರ ಪರಿಣಾಮ ವಾಹನಗಳ ಬೆಲೆಯ ಮೇಲೆ ಆಗುವುದರಿಂದ ಎಂಜಿನ್ ಅಪ್ ಡೇಟ್ ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮಾರುತಿ ಕಂಪನಿಯು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದು, ಕಂಪನಿಗೆ ಮಾತ್ರವಲ್ಲದೇ ಗ್ರಾಹಕರಿಗೂ ತೊಂದರೆಯಾಗದಂತಹ ಕ್ರಮ ಕೈಗೊಂಡಿದೆ. ಯಾವುದೇ ವಾಹನಕ್ಕೆ ಹೆಚ್ಚುವರಿ ಹಣ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ವಾಹನದ ಬೆಲೆ ಜಾಸ್ತಿ ಆದಂತೆಲ್ಲಾ ಆದಾಯವು ಕಡಿಮೆಯಾಗುವುದಲ್ಲದೇ ಸಾಲದ ಹೊರೆಯು ಹೆಚ್ಚಾಗುತ್ತದೆ.