ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

2012ರಲ್ಲಿ ಬಿಡುಗಡೆಯಾದ ನಂತರ ಕೆಟಿಎಂ 390, ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಎರಡನೇ ತಲೆಮಾರಿನ ಡ್ಯೂಕ್ 390 ಯನ್ನು 2016 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಮೂರನೇ ತಲೆಮಾರಿನ ಬೈಕ್ ಎನಿಸಿಕೊಳ್ಳುತ್ತಿರುವ ಹೊಸ ಕೆಟಿಎಂ 390 ರನ್ನು ಜರ್ಮನಿಯಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದ್ದು, 2020ರಲ್ಲಿ ಇಟಲಿಯ ಮಿಲಾನ್ ನಲ್ಲಿ ನಡೆಯಲಿರುವ 2020 ಇಐಸಿಎಂಎ ಮೋಟಾರ್ ಸೈಕಲ್ ಶೋ ನಲ್ಲಿ ಅನಾವರಣಗೊಳಿಸುವ ಸಾಧ್ಯತೆ ಇದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ರೈಡ್ ಅಪಾರ್ಟ್ ಸುದ್ದಿಸಂಸ್ಥೆಯ ಪ್ರಕಾರ, ಕೆಟಿಎಂ 390 ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದ್ದು, ನೋಡಿದ ತಕ್ಷಣ ಕೆಟಿಎಂ ನ ಈಗಿರುವ ಮಾದರಿಯನ್ನು ನೋಡಿದಂತೆಯೇ ಕಾಣುತ್ತದೆ. ಇದರಲ್ಲಿರುವ ಸ್ಪ್ಲಿಟ್ ಎಲ್ಇಡಿ ಹೆಡ್ ಲೈಟ್ ಅಸೆಂಬ್ಲಿ ಮತ್ತು ಮಿರರ್ ಗಳು ಈಗಿರುವ ಡ್ಯೂಕ್ 390 ನಂತೆಯೇ ಇವೆ. ಈಗಿರುವ ಕೆಟಿಎಂ ಡ್ಯೂಕ್ 390 ಮತ್ತು ಸ್ಪಾಟ್ ಟೆಸ್ಟ್ ಮಾಡಿರುವ ಡ್ಯೂಕ್ 390 ಗಳ ನಡುವೆ ಇರುವ ದೊಡ್ಡ ವ್ಯತ್ಯಾಸವೆಂದರೆ ಹೊಸ ಚಾಸೀಸ್. ಹೊಸ ಚಾಸೀಸ್ ಅನ್ನು ಮರೆ ಮಾಡಲು ಕೆಟಿಎಂ ಯಾವುದೇ ಹೆಚ್ಚುವರಿ ಶ್ರಮ ಹಾಕಿಲ್ಲ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ಸ್ಪೇಸ್ ಟ್ಯೂಬ್ ಗಳ ಜೊತೆಯಲ್ಲಿ ಟ್ರೆಲ್ಲಿಸ್ ಫ್ರೇಮ್ ನೊಂದಿಗೆ ಮೋಟಾರ್ ಸೈಕಲ್ ಅನ್ನು ಚಲಾಯಿಸಲಾಗುತ್ತಿದೆ. ಈ ಟ್ಯೂಬ್ ಗಳು ಒಂದಕ್ಕೊಂದು ಹೊಂದಿ ಕೊಂಡಂತೆ ಇವೆ. ಫ್ರೆಮ್ ಗಳು ದೊಡ್ಡದಾಗಿ ಇರುವುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಹಿಂಭಾಗದಲ್ಲಿರುವ ಸಬ್ ಫ್ರೇಮ್ ಗಳು ಸ್ಪೈ ಶಾಟ್ ಗಳಂತೆ ವ್ಯತ್ಯಾಸವಾಗಿವೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಿರುವುದು ಹೊಸ ಅಲ್ಯುಮಿನಿಯಂ ಸ್ವಿಂಗ್ ಆರ್ಮ್ ನಲ್ಲಿ ಮಾತ್ರ. ಅಲ್ಯುಮಿನಿಯಂ ಮತ್ತು ಬ್ರೇಸಿಂಗ್ ಎರಡೂ ಬೇರೆ ಬೇರೆಯಾಗಿವೆ. ಸ್ವಿಂಗ್ ಆರ್ಮ್ ಅಗಲವಾದಂತೆಲ್ಲಾ ಹಿಂಭಾಗದಲ್ಲಿರುವ ಟಯರ್ ಎಡ್ಜ್ ಗಳಿಂದ ದೊಡ್ಡದಾಗಿ ಕಾಣುತ್ತದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ಈಗ ಸ್ಪಾಟ್ ಟೆಸ್ಟ್ ಮಾಡಲಾಗಿರುವ ಕೆಟಿಎಂ 390 ಬೈಕಿನಲ್ಲಿ ಮೆಟ್ ಜೆಲೆರ್ ಎಂ5 ಸ್ಪೊರ್ಟ್ ಟೆಕ್ ಟಯರ್ ಗಳನ್ನು ಅಳವಡಿಸಲಾಗಿದೆ. ಕೆಟಿಎಂ ಡ್ಯೂಕ್ 390 ಇನ್ನೂ ಅಭಿವೃದ್ಧಿ ಯ ಹಂತದಲ್ಲಿದ್ದು, ಬಿಡುಗಡೆಯಾದ ನಂತರ ಯಾವ ರೀತಿ ಕಾಣಬಹುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಎಲ್ಇಡಿ ಹೆಡ್ ಲೈಟ್ ಕ್ಲಸ್ಟರ್ ಮತ್ತು ರೇರ್ ವೀವ್ ಮಿರರ್ ಗಳನ್ನು ಬದಲಾಯಿಸುವ ಸಾಧ್ಯತೆಗಳಿವೆ. ಫ್ಯೂಯಲ್ ಟ್ಯಾಂಕ್ ಉದ್ದ ಮತ್ತು ಅಗಲವಾಗಿದ್ದು, ಇವುಗಳನ್ನು ಉತ್ಪಾದನೆಯ ಹಂತದಲ್ಲಿ ಮೋಟಾರ್ ಸೈಕಲ್ ಗಳಲ್ಲಿ ಕಡಿಮೆ ಮಾಡುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ಹಿಂಭಾಗದಲ್ಲಿರುವ ಶಾಕ್ ಅಬ್ಸರ್ ವರ್ ಈಗಿರುವ ಕೆಟಿಎಂ 390ನಲ್ಲಿರುವಂತೆ ಬಿಳಿ ಬಣ್ಣದಲ್ಲಿಯೇ ಇದೆ. ಗಮನಾರ್ಹ ಬದಲಾವಣೆ ಎಂದರೆ ಮುಂಭಾಗದಲ್ಲಿರುವ ಡಬ್ಲೂ ಪಿ ಸಸ್ಪೆಂಷನ್. ಫೋರ್ಕ್ ಗಳು ಒಂದೇ ರೀತಿಯಾಗಿ ಕಂಡರೂ ಮೇಲ್ಭಾಗದಲ್ಲಿ ಅಡ್ಜಸ್ಟ್ ಮಾಡುವಂತಿರುವ ಲೀವರ್ ಗಳನ್ನು ಕಾಣಬಹುದು. ಉತ್ಪಾದನಾ ಹಂತದಲ್ಲಿ ಈ ಬದಲಾವಣೆಯನ್ನು ಅಳವಡಿಸಿಕೊಳ್ಳಲಾಗುವುದೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ಬೈಕಿನ ಕೆಳಭಾಗದಲ್ಲಿರುವ ಎಂಜಿನ್ ಬ್ಲಾಕ್ ಮತ್ತು ಕೇಸಿಂಗ್ ಒಂದೇ ರೀತಿಯಾಗಿ ಕಂಡರೂ ಹೆಡ್ ಮತ್ತು ಎಕ್ಸಾಸ್ಟ್ ಸಿಸ್ಟಂ ನಲ್ಲಿ ಬದಲಾವಣೆಗಳಾಗಿವೆ. ಕಠಿಣ ವಾಯು ಮಾಲಿನ್ಯ ನಿಯಮಗಳಿಂದಾಗಿ ಎಕ್ಸಾಸ್ಟ್ ಸಿಸ್ಟಂ ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಎಂಜಿನಲ್ಲೂ ಬದಲಾವಣೆ ಮಾಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹೊಸ ಮಾದರಿಯ ಕೆಟಿಎಂ ಡ್ಯೂಕ್ 390 ಯಲ್ಲಿ ಯಾವುದೇ ಮೆಕಾನಿಕಲ್ ಬದಲಾವಣೆಗಳನ್ನು ಮಾಡಲಾಗಿಲ್ಲ. ಈಗಿರುವ ಬೈಕ್ 373.2 ಸಿಸಿ ಎಂಜಿನ್ ಹೊಂದಿದ್ದು, 42.9 ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮೊದಲ ತಲೆಮಾರಿನ ಡ್ಯೂಕ್ 390, 43.5 ಬಿಹೆಚ್‍ಪಿ ಉತ್ಪಾದಿಸುತ್ತಿತ್ತು.

MUST READ: ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ಕೆಟಿಎಂ ತನ್ನ ಸಣ್ಣ ಬೈಕು ಗಳನ್ನು ಮಾರಾಟ ಮಾಡುವ ಮೂಲಕ ಮುಂಚೂಣಿಯಲ್ಲಿದೆ. ಸಸ್ಪೆಂಷನ್ ಅಡ್ಜಸ್ಟಾಬಿಲಿಟಿ ಮತ್ತು ಹೆಚ್ಚಿನ ಸ್ಪೆಸಿಫಿಕೇಷನ್ ಹೊಂದುವ ಮೂಲಕ ಮುಂದೆಯೂ ಮುಂಚೂಣಿಯಲ್ಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಟಿಎಂ ಸಿಇಒ ಆದ ಸ್ಟೀಫನ್ ಪಿಯರರ್ ರವರು ಹಿಂದೊಮ್ಮೆ ಮಾತನಾಡಿ, 125 ಸಿಸಿ ಮಾಡೆಲ್ ಗಳು ಒಳಗೊಂಡಂತೆ ಎಲ್ಲಾ ಕೆಟಿಎಂ ಬೈಕುಗಳಲ್ಲೂ ಕಾರ್ನರಿಂಗ್ ಎಬಿಎಸ್ ನೀಡಲಾಗುವುದು ಎಂದು ತಿಳಿಸಿದ್ದರು, ಅದನ್ನು ಈ ಬೈಕಿನ ಮೂಲಕವೇ ನೀಡುಲಾಗುವುದು ಸಹ ತಿಳಿಸಿದ್ದರು. ಅಪ್ ಡೇಟ್ ಮಾಡಲಾದ ಆರ್‍‍ಸಿ 390 ಯನ್ನು ಸಹ ಇತ್ತೀಚಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಎರಡೂ ಮೋಟಾರ್ ಸೈಕಲ್ ಗಳು ಒಂದೇ ಪ್ಲಾಟ್ ಫಾರ್ಮ್ ಹೊಂದಿದ್ದರೂ ಸಹ, 2ನೇ ತಲೆಮಾರಿನ ಕೆಟಿಎಂ ಆರ್‍‍ಸಿ390 ಬೈಕನ್ನು ಇದುವರೆಗೂ ಅಪ್ ಗ್ರೇಡ್ ಮಾಡಿರಲಿಲ್ಲ. ಮೂಲಗಳ ಪ್ರಕಾರ ಅಪ್ ಡೇಟ್ ಮಾಡಿರುವ 390 ಆರ್‍‍ಸಿ ಯನ್ನು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಆದರೆ ದೊಡ್ಡದಾದ, ವೇಗವಾದ ಮತ್ತು ಹೆಚ್ಚು ಅಡ್ವಾನ್ಸ್ ಆಗಿರುವ, ಮೂರನೇ ತಲೆಮಾರಿನ ಕೆಟಿಎಂ ಡ್ಯೂಕ್ 390, 2021ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ತಲೆಮಾರಿನ ಕೆಟಿಎಂ ಡ್ಯೂಕ್ 390

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಬೈಕ್ ತನ್ನಲಿರುವ ರಾ ಪವರ್ ನಿಂದಾಗಿ ಹೆಚ್ಚು ಖ್ಯಾತಿಯನ್ನು ಪಡೆದಿದೆ. ಪ್ರತಿ ತಲೆಮಾರಿನ ಕೆಟಿಎಂ ಗಳು ಉತ್ತಮ ಫೀಚರ್, ಉತ್ತಮ ಪರ್ಫಾಮೆನ್ಸ್ ನಿಂದಾಗಿ ಜನಪ್ರಿಯವಾಗಿವೆ. ಇದರಿಂದ ಹೊಸ ಡ್ಯೂಕ್ 390 ಸಹ ಹೊರತಾಗಿಲ್ಲ. ಕೆಟಿಎಂ ವೇಗವಾಗಿ ಗ್ರಾಹಕರಿಗೆ ಡಿಲೆವರಿ ಮಾಡುವುದನ್ನು ಕಲಿಯಬೇಕಿದೆ. ಕೆಟಿಎಂ ವೇಗಕ್ಕೆ ಪ್ರಸಿದ್ಧಿ ಪಡೆದಿದ್ದರೂ ನಿಧಾನ ಡಿಲೆವರಿಯಿಂದಾಗಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕೆಟಿಎಂ ಇನ್ನಾದರೂ ತನ್ನ ಬೈಕಿನ ವೇಗದಂತೆ ಡೆಲಿವರಿ ಮಾಡಬೇಕಿದೆ.

Most Read Articles

Kannada
English summary
Next Gen KTM Duke 390 Spotted Testing — Getting Race Ready Again - Read in Kannada
Story first published: Monday, April 29, 2019, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X