ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

Written By:

ಇತ್ತೀಚೆಗೆ ಬೈಕ್‌ಗಳ ಮಾಡಿಫೈಡ್ ಕ್ರೇಜ್ ಹೆಚ್ಚುತ್ತಿದೆ. ಹೀಗಾಗಿ ವಾಹನಗಳ ಬಗೆಗೆ ಯುವ ಸಮುದಾಯವು ಕೂಡಾ ಹೆಚ್ಚು ಆಕರ್ಷಣೆಗೆ ಒಳಾಗುತ್ತಿದ್ದು, ಮಾಡಿಫೈಡ್ ವ್ಯಾಪ್ತಿಯು ವಿಸ್ತಾರವಾಗುತ್ತಿದೆ. ಅಂತದ್ದೇ ಕುತೂಹಲಕಾರಿ ಮಾಡಿಫೈಡ್ ವರದಿಯೊಂದು ಇಲ್ಲದೆ.

To Follow DriveSpark On Facebook, Click The Like Button
ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

ಇಷ್ಟು ದಿನ ನಾವೆಲ್ಲಾ ಸ್ಕೂಟಿ ಪೆಪ್ ಮಾದರಿಯನ್ನು ಕೇವಲ ಮಹಿಳೆಯ ಅಚ್ಚುಮೆಚ್ಚು ಎಂದಷ್ಟೇ ಬಾವಿಸಿದ್ವಿ. ಆದ್ರೆ ಇನ್ಮುಂದೆ ಸ್ಕೂಟಿ ಪೆಪ್ ಮಾದರಿಯನ್ನೇ ಬಳಕೆ ಮಾಡಿಕೊಂಡು ಸೂಪರ್ ಬೈಕ್ ಕೆಟಿಎಂ ಡ್ಯೂಕ್ ಆಗಿ ಪರಿವರ್ತನೆ ಮಾಡಬಹುದು ಎಂದ್ರೆ ನಂಬಲೇಬೇಕು.

ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

ಹೌದು, ಬೆಂಗಳೂರಿನ ಇಂದಿರಾ ನಗರದಲ್ಲಿರುವ ಗ್ಯಾರೇಜ್ ಒಂದರಲ್ಲಿ ಇಂತಹ ಕುತೂಹಲಕಾರಿ ಬೇಬಿ ಡ್ಯೂಕ್ ಬೈಕ್ ಮಾದರಿಗಳನ್ನು ಮಾಡಿಕೊಡಲಾಗುತ್ತಿದ್ದು, ಒಂದಿಷ್ಟು ಹಣ ಖರ್ಚು ಮಾಡಿದ್ರೆ ಸಾಕು ಸಣ್ಣ ಬಜೆಟ್‌ನಲ್ಲಿ ಬೇಬಿ ಡ್ಯೂಕ್ ನಿಮ್ಮ ಕೈ ಸೇರುತ್ತೆ.

ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಸ್ಕೂಟಿ ಪೆಪ್ ಮಾದರಿಯಿಂದ ನಿರ್ಮಾಣ ಮಾಡಲಾಗಿರೋ ಬೇಬಿ ಡ್ಯೂಕ್ ಬೈಕಿಗೆ 'ಡ್ಯೂಕ್ 125' ಎಂದು ಹೆಸರಿಡಲಾಗಿದ್ದು, ಬೈಕ್ ಕ್ರೇಜ್ ಯುವಕರ ಪಾಲಿನ ಸೂಪರ್ ಬೈಕ್ ಆಗಿದೆ.

ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

ಇನ್ನು ಮೂಲ ಸ್ಕೂಟಿ ಪೆಪ್ ಎಂಜಿನ್ ಹೊರತುಪಡಿಸಿ ಉಳಿದೆಲ್ಲಾ ಭಾಗವನ್ನು ಕೆಟಿಎಂ ಡ್ಯೂಕ್ ಮಾದರಿಯಲ್ಲೇ ಸಿದ್ಧಗೊಳಿಸಲಾಗಿದ್ದು, ಸ್ಕೂಟಿ ಗಾತ್ರಕ್ಕೆ ಅನುಗುಣವಾಗಿ ಬೇಬಿ ಮಾದರಿಯಲ್ಲಿ ಮಾಡಿಫೈ ಮಾಡಲಾಗಿದೆ.

ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

ಹೀಗಾಗಿ 88 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಬೇಬಿ ಡ್ಯೂಕ್, 4.93-ಬಿಎಚ್‌ಪಿ ಮತ್ತು 5.8-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

ಇದಲ್ಲದೇ ಹ್ಯಾಂಡಲ್, ಸೀಟುಗಳ ವಿನ್ಯಾಸಗಳು ಸೂಪರ್ ಬೈಕ್ ಪ್ರಿಯರನ್ನು ಸೆಳೆಯುವಂತಿದ್ದು, ಮಾಡಿಫೈಡ್ ಮಾದರಿಯಲ್ಲಿನ ಎಕ್ಸಾಸ್ಟ್ ವಿನ್ಯಾಸ, ಟೈಲ್ ಲೈಟ್, ಪೇಟಿಂಗ್ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕೇವಲ ಒಂದು ತಿಂಗಳ ಅವಧಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಲಾಗಿರೋ ಬೇಬಿ ಡ್ಯೂಕ್ ಕಾರ್ಯವಿಧಾನದ ಬಗೆಗಿನ ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ಸಿದ್ಧವಾಯ್ತು ಸ್ಕೂಟಿ ಪೆಪ್‌ ಮಾಡಿಫೈಡ್ ಕೆಟಿಎಂ 'ಬೇಬಿ ಡ್ಯೂಕ್'

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬೈಕ್ ಮಾಡಿಫೈಡ್ ಮಾಡುವುದರಲ್ಲಿ ದೇಶದಲ್ಲೇ ಬೆಂಗಳೂರು ಮುಂಚೂಣಿಯಲ್ಲಿದ್ದು, ಹೊಸ ಹೊಸ ಬಗೆಯ ಮಾಡಿಫೈಡ್ ಆವೃತ್ತಿಗಳನ್ನು ನಾವು ನೋಡಬಹುದಾಗಿದೆ. ಆದ್ರೆ ಇಂದಿರಾ ನಗರದಲ್ಲಿರುವ ಗ್ಯಾರೇಜ್ ಒಂದು ನಿರ್ಮಾಣ ಮಾಡಿರುವ ಬೇಬಿ ಡ್ಯೂಕ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಎಂದರೇ ತಪ್ಪಾಗಲಾರದು.

English summary
This TVS Scooty Pep + Dresses Up To Look Like A KTM 125 Duke. Read in English.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark