ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ಬ್ರಿಟಿಷ್ ಬೈಕ್ ತಯಾರಕ ಕಂಪನಿ ಟ್ರಯಂಫ್ ದೇಶಿಯ ಮಾರುಕಟ್ಟೆಯಲ್ಲಿ ಬಿಎಸ್-6 ನಿಯಮಗಳಿಗೆ ಅನುಗುಣವಾಗಿ 2019ರ ಡಿಸೆಂಬರ್ ನಲ್ಲಿ ಹೊಸ ಮೋಟಾರ್ ಸೈಕಲ್ ಗಳನ್ನು ಬಿಡುಗಡೆ ಮಾಡಲಿದೆ. ಇದನ್ನು ಸ್ವತಃ ಕಂಪನಿಯ ಶೋಯೆಬ್ ಫಾರೂಖ್ ರವರೇ ಟ್ರಯಂಫ್ ಸ್ಪೀಡಿನ ಟ್ವಿನ್ ಬೈಕ್ ಬಿಡುಗಡೆಯ ವೇಳೆ ಖಚಿತಪಡಿಸಿದ್ದಾರೆ.

ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ಕಾರ್ ಆಂಡ್ ಬೈಕ್. ಕಾಮ್ ವರದಿಯ ಪ್ರಕಾರ, ಬಿಎಸ್-6 ಬೈಕುಗಳ ಬಗ್ಗೆ ಮಾತನಾಡಿರುವ ಫಾರೂಖ್ ರವರು ಈಗಿರುವ ಆವೃತ್ತಿಯಿಂದ ಬಿಎಸ್6 ಆವೃತ್ತಿಗೆ ಬದಲಾಯಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಪ್ರತಿಯೊಬ್ಬ ಬೈಕ್ ತಯಾರಕನು ಬದಲಾವಣೆಯನ್ನು ಮಾಡಲೇಬೇಕಿದೆ. ನಾವೂ ಸಹ ಈ ನಿಟ್ಟಿನಲ್ಲಿ ತಯಾರಾಗಿದ್ದು, ಡಿಸೆಂಬರ್ 2019ರ ವೇಳೆಗೆ ಬಿಎಸ್-6 ಆವೃತ್ತಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡಲಿದ್ದೇವೆ, ಆದಾದ ನಂತರ ಎಲ್ಲಾ ಸರಣಿಯ ವಾಹನಗಳನ್ನು ನಾವು ಬಿಎಸ್-6 ಗೆ ಬದಲಾಯಿಸಲಿದ್ದೇವೆ ಎಂದು ತಿಳಿಸಿದರು.

ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ಟ್ರಯಂಫ್ ಭಾರತದಲ್ಲಿ ಪ್ರೀಮಿಯಂ ಮೋಟಾರ್ ಸೈಕಲ್ ಗಳನ್ನು ಮಾರಾಟ ಮಾಡುತ್ತಿದೆ. ಸದ್ಯಕ್ಕೆ ಸ್ಕ್ರಾಂಬ್ಲರ್ 1200 ಸರಣಿಯ ಬೈಕ್ ಅನ್ನು ಹೊರತು ಪಡಿಸಿ 14 ವಿಧದ ಮಾದರಿಯ ಮೋಟಾರ್ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ನಮ್ಮಲ್ಲಿರುವ ಬೈಕು ಗಳನ್ನು ಆದಷ್ಟು ಮಾರಾಟ ಮಾಡಿ ಯಾವ ರೀತಿಯ ಬೈಕುಗಳು ಇರಬೇಕು ಎಂಬುದನ್ನು ನೋಡುತ್ತೇವೆ. ನಾವು ಮಾರ್ಚ್ 31 ರವರೆಗೂ ಮಾರಾಟ ಮಾಡಲಿದ್ದು, ನಂತರ ನಮ್ಮ ಬಳಿಯೇ ಆಗಲಿ ಅಥವಾ ನಮ್ಮ ಡೀಲರ್ ಗಳ ಬಳಿಯೇ ಆಗಲಿ ಅಗತ್ಯಕ್ಕಿಂತ ಹೆಚ್ಚು ಬೈಕುಗಳು ಇಲ್ಲದೇ ಇರುವಂತೆ ನೋಡಿ ಕೊಳ್ಳುತ್ತೇವೆ ಎಂದು ತಿಳಿಸಿದರು. ಮೋಟಾರ್ ಸೈಕಲ್ ಗಳನ್ನು ಬಿಎಸ್-4 ರಿಂದ ಬಿಎಸ್-6 ನಿಯಮಗಳಿಗೆ ಬದಲಾವಣೆ ಮಾಡುವುದಕ್ಕೆ ಹೆಚ್ಚಿನ ಮಟ್ಟದ ಬಂಡವಾಳ ಹೂಡಿಕೆಯ ಅಗತ್ಯವಿದೆ. ಆದ ಕಾರಣ ಬಹುತೇಕ ಬೈಕ್ ತಯಾರಕರು ತಮ್ಮ ಜನಪ್ರಿಯ ಮೋಟಾರ್ ಸೈಕಲ್ ಗಳ ಎಂಜಿನ್ ಗಳನ್ನು ಅಪ್ ಗ್ರೇಡ್ ಮಾಡಿ, ಜನಪ್ರಿಯವಲ್ಲದ ಬೈಕ್ ಗಳನ್ನು ಕೈ ಬಿಡುವ ಆಲೋಚನೆಯಲ್ಲಿದ್ದಾರೆ.

MUST READ: ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ಆದರೆ ಟ್ರಯಂಫ್ ಕಂಪನಿಯು ಈ ರೀತಿಯ ಯಾವುದೇ ಯೋಜನೆಯನ್ನು ಹೊಂದಿಲ್ಲ. ಈ ಬಗ್ಗೆ ಫಾರೂಖ್ ರವರ್ ಬಳಿ ವಿಚಾರಿಸಿದಾಗ ನಾವು ನಮ್ಮ ಬಳಿಯಿರುವ ಎಲ್ಲಾ ಸರಣಿಯ ಎಲ್ಲಾ ಬೈಕುಗಳನ್ನು ಬಿಎಸ್-6 ಗೆ ಬದಲಾಯಿಸುತ್ತೇವೆ. ಕೆಲವು ಮಾದರಿಯ ಬೈಕುಗಳಿಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಆದರೆ ನಾವು ಖಂಡಿತವಾಗಿ ನಮ್ಮ ಎಲ್ಲಾ ಬೈಕುಗಳನ್ನು ಬಿಎಸ್-6 ಆವೃತ್ತಿಗೆ ಬದಲಾಯಿಸುತ್ತೇವೆ ಎಂದು ತಿಳಿಸಿದರು.

ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ಟ್ರಯಂಫ್ ಕಂಪನಿಯು ಈ ವರ್ಷದ ಮೊದಲ ಆರು ತಿಂಗಳಲ್ಲಿ ಐದು ಬೈಕುಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಈಗಾಗಲೇ 2019 ಸ್ಟ್ರೀಟ್ ಟ್ವಿನ್, 2019 ಸ್ಟ್ರೀಟ್ ಸ್ಕ್ರಾಂಬ್ಲರ್, ಟೈಗರ್ ಎಕ್ಸ್ ಸಿಎ ಮತ್ತು ಇನ್ನು ಇತ್ತೀಚಿಗಷ್ಟೆ ಬಿಡುಗಡೆಯಾದ ಸ್ಪೀಡ್ ಟ್ವಿನ್ ಸೇರಿದಂತೆ ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡಿದೆ. ಸ್ಕ್ರಾಂಬ್ಲರ್ 1200 ಸರಣಿಯ ಬೈಕ್ ಅನ್ನು ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು.

ಬಿಎಸ್-6 ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಟ್ರಯಂಫ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟ್ರಯಂಫ್ ಅತಿ ಹೆಚ್ಚು ಮೋಟಾರ್ ಸೈಕಲ್ ತಯಾರಿಸುವ ಕಂಪನಿಗಳ ಪೈಕಿ ಒಂದಾಗಿದ್ದು, ಹೊಸ ವಾಯು ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಎಸ್6 ಗೆ ಬದಲಾವಣೆ ಮಾಡಿಕೊಳ್ಳಲು ಸ್ವತಃ ತಾನೇ ಗಡುವು ವಿಧಿಸಿಕೊಂಡಿದೆ. ಬಿಎಸ್6 ಗೆ ಬದಲಾಯಿಸಿಕೊಂಡ ನಂತರ ಮೋಟಾರ್ ಸೈಕಲ್ ಗಳ ಪರ್ಫಾರ್ಮೆನ್ಸ್ ನಲ್ಲಿ ಯಾವ ರೀತಿಯ ಬದಲಾವಣೆಗಳಾಗಬಹುದು ಎಂಬುದರ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.

Article Published On: Monday, April 29, 2019, 12:00 [IST]
English summary
Triumph Launching BS-VI Compliant Motorcycles In December — A Cleaner Christmas Gift! - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+