ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಹ್ಯುಂಡೈ ಮೋಟಾರ್ಸ್ 2019ರ ಎಲಾಂಟ್ರಾ ಆವೃತ್ತಿಯನ್ನು ಮಲೇಷಿಯಾದಲ್ಲಿ ಅನಾವರಣ ಮಾಡಿದೆ. ಆಸಿಯಾನ್ ಮಾದರಿಯು ಕಳೆದ ವರ್ಷ ಅಮೆರಿಕಾದಲ್ಲಿ ಅನಾವರಣಗೊಂಡ ಆವೃತ್ತಿಯನ್ನೆ ಹೋಲುತ್ತದೆ. 2019ರ ಎಲಾಂಟ್ರಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಬಿಡುಗಡೆಯಾಗವ ಸಾಧ್ಯತೆಗಳಿವೆ. ಈ ಮಾದರಿಯನ್ನು ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ.

ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿಯು ಎಲಾಂಟ್ರ ಮಾದರಿಯ ಆರನೇ ತಲೆಮಾರಿನ ವಾಹನವಾಗಿದೆ. ಅದು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪುನರ್ ವಿನ್ಯಾಸಗೊಳಿಸಲಾಗಿರುವ ಪ್ರೊಫೈಲ್ ಹೊಂದಿದೆ. ಮುಂಭಾಗವು ಟ್ರಾಂಗ್ಯುಲರ್ ಎಲ್ಇಡಿ ಹೆಡ್ ಲ್ಯಾಂಪ್, ಟ್ರಪೆಜ್ ಶೇಪಿನ ಗ್ರಿಲ್, ಹೊಸ ಬಂಪರ್ ಡಿಸೈನ್ ಮತ್ತು ಹೊಸ ಶೈಲಿಯ ಫಾಗ್ ಲ್ಯಾಂಪ್ ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿರುವ ಹೊಸ ವಿನ್ಯಾಸವು ಹೊಸ ಬೂಟ್ ಲ್ಯಾಂಪ್, ಹೊಸ ಟೇಲ್ ಲ್ಯಾಂಪ್, ಹೊಸ ಬಂಪರ್ ಡಿಸೈನ್, ಬೂಟ್ ಲಿಪ್ ನ ಬಳಿ ಎಲಾಂಟ್ರಾ ಲೋಗೊ ಒಳಗೊಂಡಿದೆ. ಹಿಂಭಾಗದಲ್ಲಿರುವ ಲ್ಯಾಂಪ್ ಜಿಯೊಮ್ಯಾಟ್ರಿಕ್ ಡಿಸೈನ್ ಒಳಗೊಂಡಿದೆ. ರಿಜಿಸ್ಟ್ರೇಷನ್ ಪ್ಲೇಟ್ ಅನ್ನು ಬಂಪರ್ ನಲ್ಲಿ ಅಳವಡಿಸಲಾಗಿದೆ. 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿಯು 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಹೊಸ 2019ರ ಹ್ಯುಂಡೈ ಎಲಾಂಟ್ರಾದಲ್ಲಿ ಅನೇಕ ಅಪ್ ಗ್ರೇಡ್ ಗಳನ್ನು ಮಾಡಲಾಗಿದೆ. ಈ ಕಾರಿನಲ್ಲಿ ಹೊಸ ಸ್ಟೀಯರಿಂಗ್ ವ್ಹೀಲ್ ಡಿಸೈನ್ ಇದ್ದು, ಹೊಸದಾಗಿ ವಿನ್ಯಾಸ ಮಾಡಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್ ಗೇರ್ ಗಳಿವೆ.

ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಬ್ರೆಥೆಬಲ್ ಲೆದರ್ ಅಪ್ ಹೋಲ್ ಸ್ಟರಿ ಮತ್ತು 7 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಮ್ ಹೊಂದಿದ್ದು ಅವುಗಳು ಆಂಡ್ರಾಯಿಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿವೆ. ಆಸಿಯಾನ್ ಮಾದರಿಯ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿಯು ಅನೇಕ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ.

ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಇದರಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮರಾ, 6 ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಮತ್ತು ವಾಹನ ಸ್ಥಿರತೆಯನ್ನು ನಿಯಂತ್ರಣ ಮಾಡುವ ಡಿವೈಸ್ ಗಳಿವೆ. 2019ರ ಎಲಾಂಟ್ರದಲ್ಲಿ ಯಾವುದೇ ಮೆಕಾನಿಕಲ್ ಬದಲಾವಣೆಗಳು ಆಗಿರುವುದಿಲ್ಲ. ಮಲೇಷಿಯನ್ ಮಾರುಕಟ್ಟೆಗಾಗಿ 2.0 ಲೀಟರಿನ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಈ ವರ್ಷದ ಕೊನೆಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಆವೃತ್ತಿಯ ಕಾರಿನಲ್ಲಿ 2.0 ಲೀಟರಿನ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 152 ಬಿಹೆಚ್‍ಪಿ ಮತ್ತು 192 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MUST READ: ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಈ ಮಾದರಿಯ ಡೀಸೆಲ್ ಆವೃತ್ತಿಯಲ್ಲಿ 1.6 ಲೀಟರಿನ ಎಂಜಿನ್ ಇರಲಿದ್ದು 128 ಬಿ ಹೆಚ್‍ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 6 ಸ್ಪೀಡಿನ ಮ್ಯಾನುವಲ್ ಮತ್ತು 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಗಳಿವೆ. ಹ್ಯುಂಡೈ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಉತ್ಪಾದಿಸುತ್ತದೋ ಇಲ್ಲವೋ ಎಂಬುದರ್ ಬಗ್ಗೆ ಖಚಿತತೆ ಇಲ್ಲ.

ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಹೊಸ ಹ್ಯುಂಡೈ ಎಲಾಂಟ್ರಾ ದ ದರಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಿಡುಗಡೆಯ ಸಮಯದಲ್ಲಿ ಬೆಲೆಗಳ ಬಗ್ಗೆ ಮಾಹಿತಿ ಲಭ್ಯವಾಗುವ ಸಾಧ್ಯತೆಗಳಿವೆ.

ಅನಾವರಣಗೊಂಡ 2019ರ ಹ್ಯುಂಡೈ ಎಲಾಂಟ್ರಾ ಆವೃತ್ತಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ತನ್ನ ಹೊಸ ವಿನ್ಯಾಸದಿಂದ ಹೊಸ ಆವೃತ್ತಿಯ ಕಾರು ಗಮನ ಸೆಳೆಯುತ್ತದೆ. ಈ ಮೊದಲೇ ಮಾರುಕಟ್ಟೆಯಲ್ಲಿ ಇದ್ದ ಕಾರನ್ನು ಅಪ್ ಗ್ರೇಡ್ ಮಾಡಲಾಗಿದೆ. ಇದರ್ ಪರ್ಫಾಮೆನ್ಸ್ ನ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.

Article Published On: Monday, April 29, 2019, 10:44 [IST]
English summary
India Bound 2019 Hyundai Elantra Revealed — New Thinking. New Possibilities - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+