ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಗ್ರೂಪ್ ಇತ್ತೀಚಿಗಷ್ಟೆ ಸ್ಮಾರ್ಟ್ ಫೋನ್ ಎಲೆಕ್ಟ್ರಿಕ್ ವೆಹಿಕಲ್ ಪೇರಿಂಗ್ ಬೇಸ್ಡ್ ಪರ್ಫಾಮೆನ್ಸ್ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿರುವುದಾಗಿ ಘೋಷಿಸಿದೆ. ಈ ಅಪ್ಲಿಕೇಶನ್ ಬಳಸಿ ಹ್ಯುಂಡೈ ಗ್ರಾಹಕರು ಪ್ರೈಮರಿ ಫಂಕ್ಷನ್ ಗಳನ್ನು ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಬಳಸಿ ಉಪಯೋಗಿಸಬಹುದು. ಈ ಟೆಕ್ನಾಲಜಿಯನ್ನು ಕಾರು ಉದ್ಯಮದಲ್ಲಿಯೇ ಮೊದಲ ಬಾರಿಗೆ ಬಳಸಲಾಗಿದೆ.

ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಡ್ರೈವರ್ ಗಳು ಈ ಟೆಕ್ನಾಲಜಿ ಬಳಸಿ 7 ಪರ್ಫಾಮೆನ್ಸ್ ಫೀಚರ್ ಗಳನ್ನು ಅಡ್ಜಸ್ಟ್ ಮಾಡ ಬಹುದು. ಅವುಗಳೆಂದರೆ ಟಾರ್ಕ್ ಔಟ್ ಪುಟ್, ಇಗ್ನಿಷನ್, ಆಕ್ಸೇಲರೇಷನ್- ಡಿಕ್ಸೆಲರೇಷನ್, ಬ್ರೇಕಿಂಗ್ ಕೆಪಾಸಿಟಿ, ಮ್ಯಾಕ್ಸಿಮಂ ಸ್ಪೀಡ್ ಲಿಮಿಟ್, ರೆಸ್ಪಾನ್ಸಿವ್ ನೆಸ್ ಮತ್ತು ಕ್ಲೈಮೇಟ್ ಕಂಟ್ರೋಲ್ ಗಳನ್ನು ಅಡ್ಜಸ್ಟ್ ಮಾಡಬಹುದು. ಈ ಆಪ್ಲಿಕೇಶನ್ ಉತ್ತಮವಾದ ಲಭ್ಯ ಸೆಟ್ಟಿಂಗ್ ಗಳನ್ನು ನೀಡುವುದಲ್ಲದೆ ತಲುಪುವ ಮಾರ್ಗದ ದೂರದ ಅಂತರವನ್ನು ತಿಳಿಸುವುದರ ಜೊತೆಗೆ ಎಷ್ಟು ದೂರ ಕ್ರಮಿಸಲಾಗಿದೆ ಎಂದು ತಿಳಿಸುತ್ತದೆ. ಅಲ್ಲದೇ ಸ್ಪೋರ್ಟ್ಸ್ ಡ್ರೈವ್ ಗಳನ್ನು ಕಸ್ಟಮ್ ಪರ್ಫಾಮೆನ್ಸ್ ಸೆಟ್ಟಿಂಗ್ ಗಳಲ್ಲಿ ನೀಡುತ್ತದೆ.

ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಗ್ರಾಹಕರು ಸೆಟ್ಟಿಂಗ್ ಗಳನ್ನು ಆನ್ ಲೈನ್ ನಲ್ಲಿ ಶೇರ್ ಮಾಡ ಬಹುದು ಮತ್ತು ಬೇರೆ ಗ್ರಾಹಕರು ಶೇರ್ ಮಾಡಿರುವ ಸೆಟ್ಟಿಂಗ್ ಗಳನ್ನು ಸಹ ಟ್ರೈ ಮಾಡ ಬಹುದು. ಸಿಟಿ ರೋಡ್ ಗಳಿಗಾಗಿ ಮತ್ತು ಗುಡ್ಡಗಾಡುಗಳಿಗಾಗಿ ಪ್ರತ್ಯೇಕ ಸೆಟ್ಟಿಂಗ್ ಗಳನ್ನು ಒದಗಿಸುತ್ತದೆ.

ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಗ್ರೂಪ್ ನ ಪ್ರಕಾರ ಗ್ರಾಹಕರು ತಮ್ಮ ಕಸ್ಟಮ್ ಸೆಟ್ಟಿಂಗ್ ಗಳನ್ನು ಸರ್ವರ್ ಗಳಿಗೆ ಅಪ್ ಲೋಡ್ ಅಥವಾ ಡೌನ್ ಲೋಡ್ ಮಾಡುವಾಗ ಭದ್ರತೆ ನೀಡುವ ಸಲುವಾಗಿ ಬ್ಲಾಕ್ ಚೈನ್ ಟೆಕ್ನಾಲಜಿಯನ್ನು ಬಳಸುತ್ತದೆ.

ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಬ್ಲಾಕ್ ಚೈನ್ ಟೆಕ್ನಾಲಜಿ ಗ್ರಾಹಕರು ತಮ್ಮ ಸೆಟ್ಟಿಂಗ್ ಗಳನ್ನು ಅಪ್ ಲೋಡ್ ಮಾಡುವಾಗ ಅವರ ಡೇಟಾವನ್ನು ಎನ್ ಕ್ರಿಪ್ಟ್ ಮಾಡುವುದಲ್ಲದೇ, ಹೊಸ ಡೇಟಾ ಬ್ಲಾಕ್ ಗಳನ್ನು ಸೃಷ್ಠಿಸುತ್ತದೆ ಮತ್ತು ಅವುಗಳನ್ನು ಪ್ರತ್ಯೇಕ ಡೇಟಾ ಸ್ಟೋರೇಜ್ ನಲ್ಲಿ ಸಂಗ್ರಹಿಸಿ ಅನಧಿಕೃತವಾಗಿ ಹರಿದಾಡುವುದನ್ನು ತಡೆಯುತ್ತದೆ. ಸ್ಮಾರ್ಟ್ ಫೋನ್ ಎಲೆಕ್ಟ್ರಿಕ್ ವೆಹಿಕಲ್ ಪೇರಿಂಗ್ ಬೇಸ್ಡ್ ಪರ್ಫಾಮೆನ್ಸ್ ಟೆಕ್ನಾಲಜಿ ಸಾಧ್ಯವಾಗುವುದು ಎಲೆಕ್ಟ್ರಿಕ್ ವಾಹನಗಳಿಂದ, ಅವುಗಳು ಸಾಂಪ್ರಾದಾಯಿಕ ವಾಹನಗಳಿಗಿಂತ ಬೇರೆಯಾಗಿದ್ದು, ಈ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತವೆ. ಶೂನ್ಯ ಮಾಲಿನ್ಯ ವಾಹನಗಳು ಡ್ರೈವಿಂಗ್ ಅನುಭವವನ್ನು ಬದಲಾಯಿಸಲು ಸ್ವತಂತ್ರ ನೀಡುತ್ತವೆ, ಏಕೆಂದರೆ ಕಾರ್ಬನ್ ಫೂಟ್ ಪ್ರಿಂಟ್ ನೊಂದಿಗೆ ಪರ್ಫಾರ್ಮೆನ್ಸ್ ಸೆಟ್ಟಿಂಗ್ ಗಳು ಬದಲಾಗುವುದಿಲ್ಲ.

ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಗ್ರೂಪಿನ ರಿಸರ್ಚ್ ಫೆಲೋ ಜಿಯೊಂಗ್ ಸೂ ಯೋ ರವರು ಮಾತನಾಡಿ, ಹ್ಯುಂಡೈ ಮೋಟಾರ್ ಗ್ರೂಪ್, 2025ರೊಳಗೆ 23 ಎಲೆಕ್ಟ್ರಿಕ್ ವೆಹಿಕಲ್ ಗಳನ್ನು ಒಳಗೊಂಡಂತೆ, 44 ಎಕೋ ಫ್ರೆಂಡ್ಲಿ ಮಾದರಿಗಳನ್ನು ಪರಿಚಯಿಸಲು ಉದ್ದೇಶಿಸಿದೆ. ನಾನ್ ಕಂಬಷನ್ ವೆಹಿಕಲ್ ಗಳಲ್ಲಿ ಹೊಸ ಟೆಕ್ನಾಲಜಿ ಮತ್ತು ಸರ್ವಿಸ್ ಗಳನ್ನು ನೀಡಬಹುದು. ಸುಧಾರಿತ ಮೊಬಿಲಿಟಿ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿ ಎಲೆಕ್ಟ್ರಿಕ್ ವೆಹಿಕಲ್ ಗ್ರಾಹಕರಿಗೆ ಅದ್ಭುತ ಅನುಭವ ನೀಡಲು ಸಾಧ್ಯವಿದೆ ಎಂದು ತಿಳಿಸಿದರು. ಈ ಹೊಸ ಟೆಕ್ನಾಲಜಿಯನ್ನು ಮುಂಬರುವ ಹ್ಯುಂಡೈ ಮತ್ತು ಕಿಯಾ ಮಾಡೆಲ್ ಗಳಲ್ಲಿ ಅಳವಡಿಸ ಬಹುದೆಂದು ನಿರೀಕ್ಷಿಸಲಾಗಿದೆ.

MUST READ: ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಪರ್ಫಾಮೆನ್ಸ್ ಅಲರ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ ಹ್ಯುಂಡೈ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಡಿಜಿಟಲ್ ಕೀಯನ್ನು ಅಭಿವೃದ್ಧಿ ಪಡಿಸಿದ ನಂತರ ಎಲೆಕ್ಟ್ರಿಕ್ ವೆಹಿಕಲ್ ಗಳಿಗಾಗಿ ಈ ಹೊಸ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಹ್ಯುಂಡೈ ಸಂಸ್ಥೆಯಿಂದ ನಾವು ಇನ್ನಷ್ಟು ಸುಧಾರಿತ ಟೆಕ್ನಾಲಜಿಗಳನ್ನು ನಿರೀಕ್ಷಿಸಬಹುದು.

Most Read Articles

Kannada
English summary
Hyundai Develops Performance Altering Application — Use Your Smartphone To Alter Performance Output - Read in Kannada
Story first published: Monday, April 29, 2019, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X