ಬಡವರ ಮೆಚ್ಚಿನ ಮಾರುತಿ ಆಲ್ಟೊ K10 ಕಾರಿನ ಬೆಲೆ ಕಡಿತ: 33 Km ಮೈಲೇಜ್

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ ಮಾದರಿ ಮಾರುತಿ ಆಲ್ಟೋ K10 ಕಾರಿನ ಬೆಲೆಯನ್ನು ಪರಿಷ್ಕರಿಸಿದೆ. ಮಾರುತಿ ಸುಜುಕಿ ಆಲ್ಟೋ K10 (Maruti Suzuki Alto K10) ಕಾರಿನ ರೂಪಾಂತರದ ಆಯ್ಕೆಯ ಆಧಾರದ ಮೇಲೆ ಬೆಲೆಗಳ ಪರಿಷ್ಕರಣೆಯಾಗಿದೆ.

ಮಾರುತಿ ಆಲ್ಟೋ K10 ಕಾರಿನ VXi AGS ಮತ್ತು VXi+ AGS ರೂಪಾಂತರಗಳ ಬೆಲೆಗಳು ರೂ.5,000 ಕಡಿತಗೊಳಿಸಿದೆ. ಇದಿಗ ಆಲ್ಟೋ K10 ಕಾರಿನ VXi AGS ರೂಪಾಂತರದ ಬೆಲೆಯು ರೂ.5.56 ಲಕ್ಷವಾದರೆ, VXi+ AGS ರೂಪಾಂತರದ ಬೆಲೆಯು ರೂ.5.85 ಲಕ್ಷವಾಗಿದೆ. ಮಾರುತಿ ಆಲ್ಟೊ K10 ಕಾರಿನ ಎಲ್ಲಾ ಇತರ ರೂಪಾಂತರಗಳ ಬೆಲೆಗಳು ಬದಲಾಗದೆ ಇರುವುದರಿಂದ, ಅದರ Std, LXi, VXi, ಮತ್ತು VXi+. ರೂಪಾಂತರಗಳಿಗೆ ಅದೇ ಬೆಲೆಯಲ್ಲಿ ಲಭ್ಯವಿರುತ್ತದೆ.

Maruti Suzuki Alto K10

ಈ ಮಾರುತಿ ಆಲ್ಟೋ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಪ್ಲಸ್ ಸೇರಿದಂತೆ 4 ರೂಪಾಂತರ, ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಒಳಗೊಂಡಂತೆ 7 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಆಲ್ಟೊ ಕೆ10 ವಿನ್ಯಾಸ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಇನ್ನ್ನು ಮಾರುತಿ ಸುಜುಕಿ ಆಲ್ಟೊ ಕೆ10 ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1 - ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 67 PS ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 - ಸ್ವೀಡ್ ಮ್ಯಾನುವಲ್, 5 - ಸ್ವೀಡ್ ಎಎಂಟಿ (ಆಟೋಮೆಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

Maruti Suzuki Alto K10

ಈ ಸಿಎನ್‌ಜಿ ಕಾರು ಸಹ ಇದೇ ಎಂಜಿನ್ ಒಳಗೊಂಡಿದೆ. ಆದರೆ, 57 PS ಪವರ್, 82 Nm ಪೀಕ್ ಟಾರ್ಕ್ ಮಾತ್ರ ಉತ್ಪಾದಿಸುತ್ತದೆ. ಕೇವಲ 5 - ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರಗಳು 24.39 kmpl - 24.90 kmpl, ಸಿಎನ್‌ಜಿ ರೂಪಾಂತರಗಳು 33.40 km/kg - 33.85 km/kg ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಈ ಮಾರುತಿ ಸುಜುಕಿ ಆಲ್ಟೊ ಕೆ10 ಕಾರು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕೀಲೆಸ್ ಎಂಟ್ರಿ, ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್‌, ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ಪಡೆದಿದೆ. ಜೊತೆಗೆ 214 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಒಳಗೊಂಡಿದೆ.

Maruti Suzuki Alto K10

ಈ ಮಾರುತಿ ಸುಜುಕಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರಿವರ್ಸಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ. ಈ ಕಾರಿಗೆ ರೆನಾಲ್ಟ್ ಕ್ವಿಡ್ (Renault Kwid) ಪ್ರಬಲ ಪ್ರತಿಸ್ಪರ್ಧಿಯಾಗಿದೆ.

ಇನ್ನು ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬ ಅಧಿಕವಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಒಂದು ಕುಟುಂಬ ಸಮೇತರಾಗಿ ಹೋಗಬಹುದಾದಂತಹ ಕಾರುಗಳನ್ನೇ ನೋಡುತ್ತಾರೆ. ಹಾಗಾಗಿಯೇ ಮಾರುತಿ ಸುಜುಕಿ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು. ಭಾರತೀಯರ ನಾಡಿಮಿಡಿತವನ್ನು ಅರಿತಿರುವ ಮಾರುತಿ ಸುಜುಕಿ, ಅವರಿಗೆ ಬೇಕಾದ ಬಜೆಟ್‌ನಲ್ಲಿ ಕಾರುಗಳನ್ನು ಒದಗಿಸುತ್ತುದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 16, 2024, 13:48 [IST]
English summary
Maruti suzuki alto k10 gets price cut for some select variants details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+