ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

ಮಾರುತಿ ಸುಜುಕಿ, ಅತಿ ನೂತನ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯನ್ನು ಕಾರನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ನೂತನ ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿ ಕಾರು ದೇಶದಲ್ಲಿ ರೂ. 5.44 ಲಕ್ಷ ಬೆಲೆ ಪಡೆದುಕೊಂಡಿದೆ.

By Girish

ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯ ಈ ಕಾರು ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು LXi / LDi ಮತ್ತು VXi / VDi ಶ್ರೇಣಿಗಳ ನಡುವೆ ಸ್ಥಾನ ಪಡೆಯಲಿದೆ.

ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

ಲಿಮಿಟೆಡ್ ಆವೃತ್ತಿಯು ಸ್ಟ್ಯಾಂಡರ್ಡ್ ಕಾರಿಗಿಂತ, ಯಾಂತ್ರಿಕವಾಗಿ ಹಾಗು ಕ್ಯಾಬಿನ್ ಒಳಗೆ ಮತ್ತು ಹೊರಭಾಗದ ಹಲವಾರು ಕಾಸ್ಮೆಟಿಕ್ ವರ್ಧನೆಗಳನ್ನು ಹೊಂದಿದೆ. ಲಿಮಿಟೆಡ್ ಆವೃತ್ತಿಯ ಡೀಸೆಲ್ ಕಾರು ರೂ.6.39 ಲಕ್ಷ(ದೆಹಲಿ) ಪಡೆಯಲಿದೆ.

ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

2008ರಲ್ಲಿ ಬಿಡುಗಡೆಯಾದಾಗಿನಿಂದ ಸ್ವಿಫ್ಟ್ ದೇಶದ ಅತ್ಯುತ್ತಮ ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ ಎಂದು ಹೇಳಲು ಅಗತ್ಯವಿಲ್ಲ. ಆದಾಗ್ಯೂ, ಕಳೆದ ಕೆಲವು ತಿಂಗಳುಗಳಿಂದ ಈ ವಾಹನದ ಮಾರಾಟ ಮಂಕಾಗಿರುವುದನ್ನು ಕಾಣಬಹುದಾಗಿದೆ.

ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

ಈ ಹ್ಯಾಚ್‌ಬ್ಯಾಕ್ ಕಾರು, ಕಾಸ್ಮೆಟಿಕ್ ಕಿಟ್ ಜೊತೆಗೆ ಹೆಚ್ಚುವರಿಯಾಗಿ ವಿಶೇಷ ರೀತಿಯ ಡಾಕಲ್ಸ್ ಪಡೆದ ಬಾನೆಟ್, ಬದಿಗಳು ಮತ್ತು ಛಾವಣಿಯನ್ನು ಪಡೆಯುತ್ತದೆ. ಕ್ಯಾಬಿನ್ ಒಳಗಡೆ, ಸ್ಟ್ಯಾಂಡರ್ಡ್ ಕಾರಿನಲ್ಲಿರುವ ಸ್ಟೀರಿಂಗ್ ವೀಲ್ ಮತ್ತು ನವೀನ ಸೀಟ್ ಕವರ್‌ಗಳನ್ನು ಪಡೆಯಲಿದೆ.

ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

ಇದಲ್ಲದೆ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೌಲಭ್ಯಗಳನ್ನು ಪಡೆದ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೂಡಾ ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯಲ್ಲಿ ಲಭ್ಯವಿದೆ. ಈ ಕಾರು, ಕಾರ್ಪೆಟ್ ಮ್ಯಾಟ್‌ಗಳು ಮತ್ತು ಹೆಚ್ಚುವರಿ ಬಾಸ್ ಸ್ಪೀಕರ್‌ಗಳು ಹಾಗು ಇನ್ನಿತರ ಆಂತರಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

ಯಾಂತ್ರಿಕವಾಗಿ, ಲಿಮಿಟೆಡ್ ಆವೃತ್ತಿಯ ಮಾದರಿಯು 1.2 ಮತ್ತು ಕೆ12 ಪೆಟ್ರೋಲ್ ಮತ್ತು 1.3 DDiS ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ ಹಾಗು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅಳವಡಿಕೆಯಾಗಿದೆ.

ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

ಪೆಟ್ರೋಲ್ ಇಂಜಿನ್ ಕಾರು ಲಿಟರಿಗೆ 20.40 ಕಿಲೋಮೀಟರ್ ಇಂಧನ ದಕ್ಷತೆಯನ್ನು ನೀಡುತ್ತದೆ ಹಾಗು ಡೀಸೆಲ್ ಮೋಟಾರ್ ವಾಹನವು 25.20 ಕಿ.ಮೀ(ಎಎಆರ್‌ಐ ಸ್ಪೆಸಿಫೈಡ್) ಹಿಂದಿರುಗಿಸುತ್ತದೆ.

ಮಾರುತಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯು ಭಾರತದಲ್ಲಿ ಬಿಡುಗಡೆ; ರೂ.5.44 ಲಕ್ಷ

2018ರ ಫೆಬ್ರವರಿಯ ಆಟೋ ಎಕ್ಸ್‌ಪೋದಲ್ಲಿ ಹೊಸ ಮಾರುತಿ ಸ್ವಿಫ್ಟ್ ಬಿಡುಗಡೆ ಮಾಡಲಿದೆ. ಈ ಕಾರು 2018ರ ಜನವರಿಯ ನಂತರದ ಗುಜರಾತ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 2018ರ ಮಾರುತಿ ಸ್ವಿಫ್ಟ್ ಕಾರು, ಹ್ಯುಂಡೈ ಐ20, ಹೋಂಡಾ ಜಾಝ್, ಮತ್ತು ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳ ಜೊತೆ ಸ್ಪರ್ಧೆ ನೆಡೆಸಲಿದೆ.

More from DriveSpark

Article Published On: Tuesday, November 21, 2017, 17:45 [IST]
English summary
Maruti Suzuki has silently launched the Swift Limited Edition at a sticker price of Rs. 5.44 Lakhs (Ex. Showroom, Delhi) in the country.
Read more on ಮಾರುತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+