ಅಮೇಜ್ ಪ್ರತಿಸ್ಪರ್ಧಿ ಮಾರುತಿ ಡಿಜೈರ್ 'ರಿಗಲ್' ಲಾಂಚ್

By Nagaraja

ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಹೋಂಡಾ ಅಮೇಜ್ ಕಾರನ್ನು ಯಾವುದೇ ಹಂತದಲ್ಲೂ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕಡೆಗಣಿಸಿಲ್ಲ.

ಇದೇ ಕಾರಣಕ್ಕಾಗಿ ಅಮೇಜ್ ಬಿಡುಗಡೆಯಾದ ಬೆನ್ನಲ್ಲೇ ಡಿಜೈರ್ 'ರಿಗಲ್' ಆವೃತ್ತಿಯನ್ನು ಮಾರುತಿ ಬಿಡುಗಡೆಗೊಳಿಸಿದೆ. ಈ ಮೂಲಕ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

ದರ ಮಾಹಿತಿ: 5.95 ಲಕ್ಷ ರು. (ಎಕ್ಸ್ ಶೋ ರೂಂ ದರ ಮುಂಬೈ)

ಜನಪ್ರಿಯ ಡಿಜೈರ್ ಬಿಡುಗಡೆಯಾದ ಐದು ವರ್ಷಗಳ ಬಳಿಕ ಈ ಸಂಭ್ರಮದ ಆವೃತ್ತಿ ಮಾರುಕಟ್ಟೆಗೆ ಅಪ್ಪಳಿಸಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಹೋಂಡಾ ಅಮೇಜ್ ಸ್ಪರ್ಧೆಯನ್ನು ಹೇಗೆ ನಿಭಾಯಿಸಲು ಸಾಧ್ಯವಾಗಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಎಲ್ಲ ವಿಶೇಷ ಆವೃತ್ತಿಗಳ ವೈಶಿಷ್ಟ್ಯಗಳಂತೆ ಮಾರುತಿ ಡಿಜೈರ್ ರಿಗಲ್ ಆವೃತ್ತಿ ಕೂಡಾ ಸಮಾನ ಎಂಜಿನ್ ಹೊಂದಿದ್ದು, ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಕಂಡುಬರಲಿದೆ. ಡಿಜೈರ್ ವಿಎಕ್ಸ್‌ಐ ಪೆಟ್ರೋಲ್ ವೆರಿಯಂಟ್‌ನಲ್ಲಿ ಮಾತ್ರ ರಿಗಲ್ ಮಾಡೆಲ್ ಲಭ್ಯವಿದೆ.

ನೂತನ ಸಿರೇನ್ ಬ್ಲೂ ಬಾಡಿ ಕಲರ್, ಬಾಡಿ ಗ್ರಾಫಿಕ್ಸ್, ಫ್ರಂಟ್ ಗ್ರಿಲ್ ಸಿಲ್ವರ್ ಪೈಂಟ್ ಫಿನಿಶ್, ಫಾಗ್ ಲ್ಯಾಂಪ್, ರಿಯರ್ ವ್ಯೂ ಮಿರರ್ ಹಾಗೂ ಪಾರ್ಕಿಂಗ್ ಸೆನ್ಸಾರ್ ಹೆಚ್ಚು ಆಕರ್ಷಣೆಗೆ ಕಾರಣವಾಗಲಿದೆ. ಇನ್ನು ಕಾರಿನ ಒಳಭಾಗದಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಡಿಯೋ ಸಿಸ್ಟಂ, ಲೆಥರ್ ಸೀಟ್, ಸೀಟ್ ಕವರ್, ಲೆಥರ್ ಸ್ಟೀರಿಂಗ್ ವೀಲ್ ಕವರ್ ಹಾಗೂ ಪ್ಲೋರ್ ಮ್ಯಾಟ್ ಇರಲಿದೆ.

More from DriveSpark

Article Published On: Tuesday, April 16, 2013, 14:22 [IST]
English summary
Maruti Suzuki is celebrating five years of Dzire with a celebratory edition of the compact hatchback, Regal. The launch of the special edition Dzire model comes on the heels of the launch of Honda Amaze, its prime rival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+