ಮಾರುತಿ ಗುರ್ಗಾಂವ್, ಮಾನೇಸರ್ ಘಟಕಕ್ಕೆ ಬೀಗ!
ಇದರಂತೆ ಜೂನ್ 7, 8 ಹಾಗೂ 17ರಿಂದ 22ರ ವರೆಗೆ ಮೇಲೆ ಸೂಚಿಸಲಾದ ಎರಡು ಘಟಕಗಳಲ್ಲಿ ಉತ್ಪಾದನೆ ಸಂಪೂರ್ಣ ಸ್ಥಗಿತವಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಮಾರುಕಟ್ಟೆ ಕುಸಿದಿರುವುದು ಹಾಗೂ ಉತ್ಪಾದಕ ವರ್ಷನ್ ಪಡೆದ ಸ್ಟಾಕ್‌ಗಳು ಇನ್ನು ಖಾಲಿಯಾಗದೇ ಉಳಿದಿರುವುದು ಘಟಕ ಮುಚ್ಚಿಡಲು ಪ್ರಮುಖ ಕಾರಣವಾಗಿದೆ.
ಇದರಿಂದ ಸಹಜವಾಗಿಯೇ ಮಾರುತಿ ಉತ್ಪಾದನೆ ಕುಂಠಿತವಾಗಲಿದೆ. ಕಳೆದ ಮೇ ತಿಂಗಳಲ್ಲಿ ಮಾರಾಟದಲ್ಲಿ ಶೇಕಡಾ 14ರಷ್ಟು ಕುಸಿತ ಅನುಭವಿಸಿದ್ದ ಮಾರುತಿ ಸುಜುಕಿ 84,677 ಯುನಿಟ್ ಕಾರುಗಳನ್ನು ಮಾತ್ರ ಸೇಲ್ ಮಾಡಿತ್ತು.
ವಾರ್ಷಿಕವಾಗಿ 15 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಮಾರುತಿ ಹೊಂದಿದೆ. ಅಂದ ಹಾಗೆ ಇದು ಎರಡನೇ ಬಾರಿಗೆ ತನ್ನ ಘಟಕವನ್ನು ಮಾರುತಿ ಮುಚ್ಚುಗಡೆಗೊಳಿಸುತ್ತಿದೆ. ಈ ಹಿಂದೆ ಮಾರ್ಚ್ 9ರಂದು ಆಲ್ಟೊ ಹಾಗೂ ವ್ಯಾಗನಾರ್‌ಗಳಂತಹ ಪೆಟ್ರೋಲ್ ಆವೃತ್ತಿಗಳು ಕುಸಿತ ಅನುಭವಿಸಿದಾಗ ಉತ್ಪಾದನೆ ಸ್ಥಗಿತಗೊಳಿಸಿತ್ತು.
ಪ್ರಸ್ತುತ ಉತ್ಪಾದನೆ ಸ್ಥಗಿತಗೊಳಿಸುವ ಮೂಲಕ ಪ್ರತಿನಿತ್ಯ 5,000ದಷ್ಟು ಕಾರುಗಳ ಉತ್ಪಾದನೆ ಕಡಿತವಾಗಲಿದೆ. ಈ ಪೈಕಿ ಗುರ್ಗಾಂವ್‌ನಲ್ಲಿ 3,000 ಹಾಗೂ ಉಳಿದ 2,000 ಯುನಿಟ್ ಮಾನೇಸರ್‌ನಿಂದ ಕಡಿತಗೊಳ್ಳಲಿದೆ ಎಂದು ಕಂಪನಿ ವಕ್ತಾರರು ವಿವರಣೆ ನೀಡಿದ್ದಾರೆ.
2013ನೇ ಆರ್ಥಿಕ ಸಾಲಿನಲ್ಲಿ ಮಾರುತಿ ಇದುವರೆಗೆ 11.68 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಿದ್ದು, ಈ ಪೈಕಿ ಭಾರತದಲ್ಲಿ 10.51 ಲಕ್ಷ ಯುನಿಟ್ ಹಾಗೂ ವಿದೇಶದಲ್ಲಿ 1.20 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಈ ಎಲ್ಲದರ ನಡುವೆಯೂ ತನ್ನು ಮಾನೇಸರ್‌ನಲ್ಲಿ ಮೂರನೇ ಘಟಕ ಆರಂಭಿಸಲು ಮಾರುತಿ ಯೋಜನೆ ಮುಂದಿಟ್ಟಿದ್ದು, ಸೆಪ್ಟೆಂಬರ್ ವೇಳೆಗೆ ತೆರೆದುಕೊಳ್ಳುವ ನಿರೀಕ್ಷೆಯಿದೆ.


Click it and Unblock the Notifications









