ಮಾರುತಿಯಿಂದ ರಸ್ತೆಗೆ ಬರಲಿದೆ ಹಗುರ ವಾಣಿಜ್ಯ ವಾಹನ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಹಗುವ ವಾಣಿಜ್ಯ ವಾಹನಗಳ (ಎಲ್‌ಸಿವಿ) ಉತ್ಪಾದನೆಯನ್ನು ಆರಂಭಿಸಲಿದೆ. ನೂತನ ಎಲ್‌ಸಿವಿ ವಾಹನ Y9T ಕೋಡ್ ಹೆಸರು ಪಡೆದುಕೊಂಡಿದ್ದು, ಈಗಾಗಲೇ ಅಭಿವೃದ್ಧಿ ಹಂತದಲ್ಲಿದೆ.
ಪ್ರಮುಖವಾಗಿಯೂ ಘನ ವಾಣಿಜ್ಯ ವಾಹನಗಳಲ್ಲಿ ಭದ್ರ ನೆಲೆ ಸ್ಥಾಪಿಸಿರುವ ಟಾಟಾ ಮೋಟಾರ್ಸ್‌ನ ಏಸ್ ಆವೃತ್ತಿಗೆ ಪ್ರತಿಸ್ಫರ್ದಿಯಾಗಿ ಕಾಣಿಸಿಕೊಳ್ಳಲಿರುವ ಮಾರುತಿ ಸುಜುಕಿ ಹಗುರ ವಾಣಿಜ್ಯ ವಾಹನವು, 3 ಸಿಲಿಂಡರ್ 800 ಸಿಸಿ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.
ಬಲ್ಲ ಮೂಲಗಳ ಪ್ರಕಾರ ಮಾರುತಿಯ ಗುಜರಾತ್ ಘಟಕದಲ್ಲಿ ಸಿದ್ಧಗೊಳ್ಳಲಿರುವ ಈ ವಾಹನವು 2016ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ. ಇದು ಮಾರುತಿಯ ಅಧ್ಯಯನ ಹಾಗೂ ಅಭಿವೃದ್ಧಿ ಘಟಕದಲ್ಲಿ ತಯಾರುಗೊಳ್ಳಲಿದೆ.
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಮಾಕ್ಸಿಮೊ ಇದೇ ಸೆಗ್ಮೆಂಟ್‌ನಲ್ಲಿರುವ ಮತ್ತೊಂದು ಪ್ರತಿಸ್ಪರ್ಧಿಯಾಗಿದೆ. ಹಾಗಾಗಿ ಈ ಎರಡು ಆವೃತ್ತಿಗಳಿಗೆ ಮಾರುತಿ ಹೇಗೆ ಸವಾಲಾಗಲಿದೆ ಎಂಬುದಕ್ಕೆ ಭವಿಷ್ಯದಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications
