ತ್ವರೆ ಮಾಡಿ; ನಿಮ್ಮ ನೆಚ್ಚಿನ ಸ್ವಿಫ್ಟ್‌ ದರ ಕಡಿತ

Maruti Suzuki Swift Being Offered On Discount
2005ನೇ ಇಸವಿಯಲ್ಲಿ ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್, ಸದಾ ಬೇಡಿಕೆ ಉಳಿಸಿಕೊಳ್ಳುತ್ತಲೇ ಬಂದಿದೆ. ಗ್ರಾಹಕರಿಗೆ ಶ್ರೇಷ್ಠ ನಿರ್ವಹಣೆ ಹಾಗೂ ಗರಿಷ್ಠ ಸೇವೆ ನೀಡುವಲ್ಲಿ ಯಶಸ್ವಿಯಾಗಿರುವುದೇ ಸ್ವಿಫ್ಟ್ ಯಶಸ್ವಿಗೆ ಕಾರಣವಾಗಿತ್ತು.

ಆದರೆ ಸಮಕಾಲೀನ ಪರಿಸ್ಥಿತಿಯಲ್ಲಿ ಮಾರಾಟಕ್ಕೆ ಬಹುದೊಡ್ಡ ಪೆಟ್ಟಾಗಿರುವ ಹಿನ್ನಲೆಯಲ್ಲಿ ದರ ಕಡಿತ ಘೋಷಿಸಲು ಡೀಲರ್‌ಗಳು ಪ್ರೇರಿತರಾಗಿದ್ದಾರೆ. ಈ ಮೂಲಕ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಈ ಹ್ಯಾಚ್‌ಬ್ಯಾಕ್ ಕಾರಿಗೆ ಡಿಸ್ಕೌಂಟ್ ದರ ಘೋಷಿಸಲಾಗುತ್ತಿದೆ.

ಕಳೆದ ಕೆಲವು ವರ್ಷಗಳ ಪೈಕಿ ಪ್ರಸ್ತುತ ಕಠಿಣ ಅವಧಿಯನ್ನು ಎದುರಿಸುತ್ತಿದ್ದೇವೆ. ಇಂಧನ ದರ ಏರಿಕೆ ಹಾಗೂ ಇತ್ತೀಚೆಗಿನ ಕೇಂದ್ರ ಸರಕಾರದ ನಿಲುವು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿತ್ತು. ಇದೇ ಕಾರಣಕ್ಕಾಗಿ 2000 ಡಿಸೆಂಬರ್ ಬಳಿಕ ಹೆಚ್ಚಿನ ಕುಸಿತ ದಾಖಲಾಗಿದೆ ಎಂದು ಮಾರುತಿ ಸುಜುಕಿ ಡೀಲರ್‌ಗಳು ಅಭಿಪ್ರಾಯಪಡುತ್ತಾರೆ.

ಸ್ವಿಫ್ಟ್ ಡೀಸೆಲ್ ವೆರಿಯಂಟ್‌ಗಳಿಗೆ ಡೀಲರ್‌ಗಳಲ್ಲಿ 5,000 ರು.ಗಳ ತನಕ ಡಿಸ್ಕೌಂಟ್ ನೀಡಲಾಗುತ್ತಿದೆ. ಇನ್ನು ಬೆಂಗಳೂರು ಹಾಗೂ ಮುಂಬೈಗಳಲ್ಲಿ ನಿರ್ದಿಷ್ಠ ಸ್ವಿಫ್ಟ್ ಡಿಜೈರ್ ವೆರಿಯಂಟ್‌ಗಳಿಗೆ ರು. 10,000 ತನಕ ದರ ಕಡಿತ ಮಾಡಲಾಗುತ್ತಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಯಾವುದೇ ಕಾಯುವಿಕೆ ಅವಧಿ ಇರುವುದಿಲ್ಲ. ಅಂದರೆ ಗ್ರಾಹಕ ಬುಕ್ಕಿಂಗ್ ಮಾಡಿದ ತಕ್ಷಣ ಕಾರು ಡೆಲಿವರಿ ಮಾಡಲು ಗಮನ ವಹಿಸಲಾಗುತ್ತಿದೆ. ಹಾಗಿದ್ದರೂ ಕಂಪನಿಯಿಂದ ಯಾವುದೇ ಅಧಿಕೃತ ಆಫರ್ ಘೋಷಣೆಯಾಗಿಲ್ಲ ಎಂಬುದನ್ನು ಮಾರುತಿ ಸುಜುಕಿ ಸ್ಪಷ್ಟಪಡಿಸಿದೆ.

More from DriveSpark

Article Published On: Thursday, March 21, 2013, 14:49 [IST]
English summary
Maruti Suzuki Swift, which has always been in demand ever since its launch in 2005, is now showing signs of declining sales. Hence, for the first time in its nearly 8 year long history the automaker is offering discounts on the hatchback.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+