ಮಾರುತಿ ಡಿಜೈರ್ ಮೈಲೇಜ್ 45.8 kmpl - ನಂಬ್ತೀರಾ?

By Nagaraja

ಹೌದು, ಮಾರುತಿ ಡಿಜೈರ್ ಕಾರಿನ ಮೈಲೇಜ್ 45.8 kmpl ಅಂದರೆ ನೀವು ನಂಬ್ತೀರಾ? ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂತಹದೊಂದು ವಾದ ಮುಂದಿಟ್ಟಿದೆ. ಇತ್ತೀಚೆಗಷ್ಟೇ 31 ನಗರಗಳಲ್ಲಾಗಿ ಮಾರುತಿ ಸುಜುಕಿ 'ಡಿಜೈರಬಲ್ ಮೈಲೇಜ್ ರಾಲಿ' ಹಮ್ಮಿಕೊಂಡಿತ್ತು. ಇದರಲ್ಲಿ 62 ಡಿಜೈರ್ ಮಾಲಿಕರು ಸ್ಪರ್ಧಿಸಿದ್ದರು.

ಮಾರುತಿ ಡಿಜೈರ್ ಶ್ರೇಷ್ಠ ಮೈಲೇಜ್ ಸಾಬೀತುಪಡಿಸುವುದೇ Rally ಉದ್ದೇಶವಾಗಿತ್ತು. ಹಾಗೆಯೇ ಸ್ಪರ್ಧೆಯಲ್ಲಿ ಭಾಗಿಯಾದವರಿಗೆ ಪೂರ್ವ ನಿರ್ಧರಿತ ರಸ್ತೆಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು.


ಆದರೆ ಇಲ್ಲಿ ಕಂಡುಬಂದಿರುವ ಅಚ್ಚರಿಯ ಅಂಶ ಏನೆಂದರೆ ಗುರ್ದಿಪ್ ಸಿಂಗ್ ಮಾಲಿಕತ್ವದ ಡಿಜೈರ್ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 45.8 ಕೀ.ಮೀ ಮೈಲೇಜ್ ನೀಡುವಲ್ಲಿ ಸಾಧ್ಯವಾಗಿತ್ತು. ಇನ್ನು ಚಿಂದಾರ್ಕರ್ ಎಂಬವರ ಡಿಜೈರ್ ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 42.1 ಕೀ.ಮೀ ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಿತ್ತು.

ಎಆರ್‌ಎಐ ಮಾನ್ಯತೆ ಪಡೆದಂತೆ ಮಾರುತಿ ಡಿಜೈರ್ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 23.4 ಹಾಗೂ ಪೆಟ್ರೋಲ್ ಆವೃತ್ತಿ ಪ್ರತಿ ಲೀಟರ್‌ಗೆ 19.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ಇಲ್ಲಿ ನೇರ ದ್ವಿಗುಣವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂಪನಿ, 50ಕೀ.ಮೀ ಅಸುಪಾಸಿನಲ್ಲಿ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಂಡು ಡ್ರೈವಿಂಗ್ ಮಾಡಿರುವುದು, ಬ್ರೇಕಿಂಗ್ ಹಾಗೂ ಅಗತ್ಯಕ್ಕಾನುಸಾರವಾದ ಗೇರ್ ಬಳಕೆಯಿಂದಾಗಿ ಇದು ಸಾಧ್ಯವಾಗಿದೆ ಎಂದಿದೆ.

More from DriveSpark

Article Published On: Thursday, May 2, 2013, 12:41 [IST]
English summary
Maruti Suzuki held the 'Dzirable Mileage Rally' in 31 cities across the country over the weekend in which over 62 Dzire owners participated. As the name clearly says, the purpose of the event was to demonstrate the Dzire's ‘incredible' mileage. Participants were provided with maps and were asked to follow a predefined route in and around cities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+