ನೂತನ ಕಾರುಗಳನ್ನು ಲಾಂಚ್ ಮಾಡಲಿರುವ ಮಾರುತಿ
ದೇಶದ ಆಟೋ ಮಾರುಕಟ್ಟೆಯಲ್ಲಿ ಶೇಕಡಾ 50ರಷ್ಟು ಶೇರುಗಳನ್ನು ಮಾರುತಿ ಸುಜುಕಿ ವಶಪಡಿಸಿಕೊಂಡಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇದು ಕುಂಠಿತವಾಗುತ್ತಲೇ ಸಾಗುತ್ತಿವೆ.
2009ನೇ ಆರ್ಥಿಕ ಸಾಲಿನಲ್ಲಿ ಶೇಕಡಾ 52.2ರಷ್ಟು ವಶಪಡಿಸಿಕೊಂಡಿದ್ದ ಮಾರುತಿ ಮಾರುಕಟ್ಟೆ ಶೇರು 2012ರ ವೇಳೆಗೆ ಶೇಕಡಾ 42.4ಕ್ಕೆ ಕುಸಿತ ಕಂಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕಂಪನಿಯು ನೂತನ ಸಬ್ ಸೆಗ್ಮೆಂಟ್ ಕಾರುಗಳನ್ನು ಪರಿಚಯಿಸಲು ಯೋಜನೆ ಹೊಂದಿದೆ.
ಸದ್ಯ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇಕಡಾ 45ರಷ್ಟು ಮಾರ್ಕೆಟ್ ಶೇರು ಉಳಿಸಿಕೊಳ್ಳುವುದು ಮಾರುತಿ ಗುರಿಯಾಗಿದೆ. ಆದರೆ ಮಾರುತಿಗೆ ತನ್ನ ಸ್ಥಾನ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಈಗಾಗಲೇ ಸಣ್ಣ ಕಾರು ಬಿಡುಗಡೆಗೊಳಿಸುವುದಾಗಿ ಹೋಂಡಾ ಹಾಗೂ ಹ್ಯುಂಡೈ ಘೋಷಿಸಿದೆ. ಈ ನಡುವೆ ಟಾಟಾ ನ್ಯಾನೋ ಡೀಸೆಲ್ ಕಾರು ಕೂಡಾ ಎಂಟ್ರಿ ಕೊಡಲಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಟೋ ಜಗತ್ತಿನಲ್ಲಿ ಮತ್ತಷ್ಟು ಪೈಪೋಟಿ ನಿರೀಕ್ಷಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ


Click it and Unblock the Notifications









