ಮಾರುತಿ ಸ್ವಿಫ್ಟ್ ಡಿಜೈರ್ ದೇಶದ ನಂ.2 ಮಾರಾಟದ ಕಾರು
ಮಾರುತಿ ಸ್ವಿಫ್ಟ್ ಡಿಜೈರ್ ಭಾರತಂದ ನಂ. ಮಾರಾಟದ ಕಾರು ಎಂದೆನಿಸಿಕೊಂಡಿದೆ. 2013 ಎಪ್ರಿಲ್ ತಿಂಗಳಲ್ಲಿ 19,446 ಯುನಿಟ್ ಮಾರಾಟ ಕಂಡುಕೊಂಡಿರುವ ಸ್ವಿಫ್ಟ್ ಡಿಜೈರ್ ಈ ಖ್ಯಾತಿಗೆ ಪಾತ್ರವಾಗಿದೆ.
ನಂ.1 ಸ್ಥಾನದಲ್ಲಿರುವ ಆಲ್ಟೊ 800ಗಿಂತಲೂ ಕೇವಲ 401 ಯುನಿಟ್‌ಗಳ ಮಾರಾಟದ ಕೊರತೆಯನ್ನು ಅನುಭವಿಸಿದ್ದ ಸ್ವಿಫ್ಟ್ ಡಿಜೈರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇದೇ ಅವಧಿಯಲ್ಲಿ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ 2,916 ಯುನಿಟ್‌ಗಳು ಮಾತ್ರ ಸೇಲಾಗಿದ್ದವು. ಆದರೆ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತಿರುವ ಸಬ್ ಫೋರ್ ಮೀಟರ್ ಕಾಂಪಾಕ್ಟ್ ಸೆಡಾನ್ ಕಾರಾದ ಸ್ವಿಫ್ಟ್ ಡಿಜೈರ್ ದ್ವಿತೀಯ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಇನ್ನು ಅಂಕಿಅಂಶ ಪ್ರಕಾರ 2012 ಫೆಬ್ರವರಿ ಬಳಿಕ ಎರಡು ಲಕ್ಷಕ್ಕೂ ಹೆಚ್ಚು ಸ್ವಿಫ್ಟ್ ಡಿಜೈರ್ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಪ್ರಸ್ತುತ ಕಾರಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ.


Click it and Unblock the Notifications









