ಮಾರುತಿ ಕಾರು ಖರೀದಿಸಿ; 100 ಲೀಟರ್ ಡೀಸೆಲ್ ಸಂಪೂರ್ಣ ಉಚಿತ..!

Posted By:

ನೂತನ ಕಾರು ಖರೀದಿ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿರುವ ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತಮ್ಮ ಬ್ರಾಂಡ್‌ಗಳ ಕಾರು ಖರೀದಿ ವೇಳೆಗೆ 100 ಲೀಟರ್ ಉಚಿತ ಡೀಸೆಲ್ ನೀಡುವುದಾಗಿ ಘೋಷಿಸಿದೆ.

ಮಾರುತಿಯ ಜನಪ್ರಿಯ ಆವೃತ್ತಿಗಳಾದ ರಿಟ್ಜ್, ಸ್ವಿಫ್ಟ್, ಸ್ವಿಫ್ಟ್ ಡಿಜೈರ್ ಹಾಗೂ ಎರ್ಟಿಗಾ ಬ್ರಾಂಡ್‌ಗಳಿಗೆ ಇದು ಅನ್ವಯವಾಗಲಿದೆ. ಇದರ ಜತೆಗೆ ಈ ಎಲ್ಲ ಮಾಡೆಲ್‌ಗಳಿಗೆ ರು. 20,000ಗಳಷ್ಟು ಎಕ್ಸ್‌ಜೇಂಜ್ ಬೋನಸ್ ನೀಡಲಾಗುತ್ತದೆ.

ಈ ಮುಖಾಂತರ ಕಳೆಗುಂದಿರುವ ದೇಶದ ಕಾರು ಮಾರಾಟವನ್ನು ಉತ್ತೇಜಿಸಲು ಮಾರುತಿಯಿಂದ ಇಂತಹದೊಂದು ಪ್ರಯತ್ನ ನಡೆಯುತ್ತಿದೆ. ಹಾಗಿದ್ದರೂ ಈ ಆಫರ್‌ಗಳನ್ನು ಮಾರುತಿ ಅಥವಾ ಡೀಲರ್‌ಗಳು ಮುಂದಿಡುತ್ತಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಆಫರ್ ನಿಗದಿತ ಅವಧಿಯ ತನಕ ಮಾತ್ರವಾಗಿರುವುದರಿಂದ ಗ್ರಾಹಕರು ತ್ವರೆ ಮಾಡಿಕೊಳ್ಳಲು ವಿನಂತಿಸಲಾಗಿದೆ.

ಇತರ ಮಾರುತಿ ಸುಜುಕಿ ಮಾಡೆಲ್‌ಗಳ ರಿಯಾಯಿತಿ ದರ ಇಂತಿದೆ:

ಎಸ್ಟಿಲೋ: ರು. 30,000 ವರೆಗೆ

ವ್ಯಾಗನಾರ್ ಸಿಎನ್‌ಜಿ: ರು. 28,000 ವರೆಗೆ

ಆಲ್ಟೊ ಕೆ10: ರು. 20,000 ವರೆಗೆ

ಇಕೊ: ರು. 15,000 ವರೆಗೆ

ಎಸ್‌ಎಕ್ಸ್4 ಡೀಸೆಲ್: ರು. 35,000 ವರೆಗೆ

English summary
Maruti Suzuki offers 100 liters free diesel and 20,000 rupees exchange bonus on the Swift, Dzire, Ritz and Ertiga.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark