ಅಕ್ಟೋಬರ್‌ನಲ್ಲಿ ಮಾರುತಿ ಕಾರು ದರ ಏರಿಕೆ

By Nagaraja

ಅಕ್ಟೋಬರ್ ಮೊದಲ ವಾರದಿಂದ ತನ್ನೆಲ್ಲ ಮಾದರಿಯ ಕಾರುಗಳಿಗೆ ದರ ಏರಿಕೆಗೊಳಿಸುವುದಾಗಿ ದೇಶದ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತಿಳಿಸಿದೆ.

ರುಪಾಯಿ ಅಪಮೌಲ್ಯ ಕಾರು ಬೆಲೆ ಏರಿಕೆಗಿರುವ ಪ್ರಮುಖ ಕಾರಣವಾಗಿದೆ. ಕಾರಿನ ಒಳಹರಿವು ವೆಚ್ಚ ಈಗಾಗಲೇ ವಿಪರೀತವಾಗಿ ಹೆಚ್ಚಿದೆ. ಹಾಗಾಗಿ ದರ ಏರಿಕೆಗೊಳಿಸುವುದು ಅನಿವಾರ್ಯವಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಮುಖ್ಯ ಕಾರ್ಯನಿರ್ವಾಹಣಧಿಕಾರಿ(ಮಾರಾರ್ಟಿಂಗ್ ಹಾಗೂ ಸೇಲ್ಸ್) ಮಾಯಾಂಕ್ ಪರೀಕ್ ತಿಳಿಸಿದ್ದಾರೆ. ಹಾಗಿದ್ದರೂ ವೆರಿಯಂಟ್ ಆಧಾರಿಸಿ ಬೆಲೆ ಏರಿಕೆ ನಿರ್ಣಯವಾಗಲಿದೆ. ಪ್ರಸ್ತುತ ಹೊಸ ದರ ನೀತಿಯು ಅಕ್ಟೋಬರ್ ಮೊದಲ ವಾರದಿಂದಲೇ ಚಾಲ್ತಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.


3,000 ರು.ಗಳಿಂದ 10,000 ರು.ಗಳ ವರೆಗೆ ದರ ಏರಿಕೆ ಕಂಡುಬರಲಿದೆ ಎಂದು ಪರೀಕ್ ತಿಳಿಸಿದ್ದಾರೆ. ಸದ್ಯ ಮಾರುತಿಯ ಕಾರುಗಳು 2.35 ಲಕ್ಷ ರು.ಗಳಿಂದ ಆರಂಭಿಸಿ 10.21 ಲಕ್ಷ ರು.ಗಳ ವರೆಗಿನ ರೇಂಜ್‌ನಲ್ಲಿ ಲಭ್ಯವಿರಲಿದೆ.

ಪ್ರಸಕ್ತ ತಿಂಗಳಲ್ಲೇ ರು. 20,000 ವರೆಗೆ ದರ ಏರಿಕೆಗೊಳಿಸುವುದಾಗಿ ಹ್ಯುಂಡೈ ಹಾಗೂ ಜನರಲ್ ಮೋಟಾರ್ಸ್ ಘೋಷಿಸಿತ್ತು. ಇದರ ಬೆನ್ನಲ್ಲೇ ಮಾರುತಿ ಕೂಡಾ ದರ ಏರಿಕೆ ನೀತಿ ಅನುಸರಿಸಿದೆ. ಅಷ್ಟೇ ಅಲ್ಲದೆ ಟೊಯೊಟಾ ಕಿರ್ಲೊಸ್ಕರ್ ಕಂಪನಿಯು ಸಹ ರು. 25,000 ವರೆಗೆ ದರ ಹೆಚ್ಚಳಗೊಳಿಸಿತ್ತು.

ಈ ನಡುವೆ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಶೇಕಡಾ 1ರಿಂದ 1.5ರ ವರೆಗೆ ದರ ಹೆಚ್ಚಳಗೊಳಿಸಲು ಯೋಜನೆ ಹಾಕಿಕೊಂಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮಾದರಿ ಆಧಾರದಲ್ಲಿ ಬೆಲೆ ಏರಿಕೆ ನಿರ್ಣಯವಾಗಲಿದೆ.

More from DriveSpark

Article Published On: Thursday, September 26, 2013, 12:44 [IST]
English summary
In October India's largest car maker Maruti Suzuki India said, it will increase the prices of its entire range of models by up to Rs 10,000 from October first week, mainly due to depreciation of rupee.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+