ಮಾರುತಿ ಗೇರ್ ಚೇಂಜ್; ಬೆಲೆಯೇರಿಕೆ ಬಿಸಿ

By Nagaraja

ತನ್ನ ಜನಪ್ರಿಯ ವ್ಯಾಗನಾರ್ ಅಪ್‌ಗ್ರೇಡ್ ವರ್ಷನ್ ಬಿಡುಗಡೆ ಶುಭ ಸುದ್ದಿ ಗ್ರಾಹಕರನ್ನು ತಲುತ್ತಿರುವಂತೆಯೇ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಗೇರ್ ಚೇಂಜ್ ಮಾಡಿದ್ದು, ಬೆಲೇಯೇರಿಕೆ ಬಿಸಿ ಮುಟ್ಟಿಸಿದೆ.

ನಾಳೆಯಿಂದಲೇ (ಬುಧವಾರ) ಪರಿಷ್ಕೃತ ದರ ಜಾರಿಗೆ ಬರಲಿದೆ. ರುಪಾಯಿ ದರ ಏರಿಳಿತವು ಪ್ರತಿಕೂಲವಾಗಿ ಬಾಧಿಸುವುದರ ಹಿನ್ನಲೆಯಲ್ಲಿ ಇದನ್ನು ನಿಯಂತ್ರಿಸಲು ಕಾರು ದರಗಳಲ್ಲಿ 20 ಸಾವಿರ ರುಪಾಯಿಗಳ ವರೆಗೆ ವರ್ಧನೆ ಕಂಡುಬರಲಿದೆ.

ಈ ಬಗ್ಗೆ ವಿವರಣೆ ನೀಡಿರುವ ಮಾರುತಿ ಸುಜುಕಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಮಾರ್ಕೆಟಿಂಗ್ & ಸೇಲ್ಸ್) ಮಾಯಾಂಕ್ ಪರೀಕ್, ನಾಳೆಯಿಂದಲೇ ಪರಿಷ್ಕೃತ ದರ ಏರಿಕೆ ಜಾರಿಗೆ ಬರಲಿದೆ ಎಂದಿದ್ದಾರೆ.

ಕಳೆದ ತಿಂಗಳಷ್ಟೇ ಮಾರುತಿ ಸುಜುಕಿ ಕಾರು ದರಗಳನ್ನು ಶೇಕಡಾ 1-3ರಷ್ಟು ಏರಿಕೆಗೊಳಿಸುವುದಾಗಿ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಘೋಷಿಸಿತ್ತು. ಈ ಒತ್ತಡದ ಪರಿಸ್ಥಿತಿಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಸಹ ಕಂಪನಿ ಪ್ರತಿಪಾದಿಸಿದೆ.

ದೇಶದ ಮಾರುಕಟ್ಟೆಯಲ್ಲಿ ಅಗ್ಗದ ಎಂ800 (2.09 ಲಕ್ಷ ರು.) ಕಾರಿನಿಂದ ಹಿಡಿದು ಆಮದು ಮಾಡಿರುವ ದುಬಾರಿ ಕಿಜಾಶಿ (17.52 ಲಕ್ಷ ರು.) ವರೆಗಿನ ಮಾಡೆಲ್‌ಗಳ ದರಗಳಲ್ಲಿ ಏರಿಕೆ ಕಂಡುಬರಲಿದೆ.

ಪ್ರಸಕ್ತ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಮಾರುತಿ ಸುಜುಕಿ ಶೇಕಡಾ 5.41ರಷ್ಟು ಕುಸಿತ ಕಂಡು ಒಟ್ಟು ನಿವ್ವಳ ಲಾಭಾಂಶ 227.45 ಕೋಟಿ ರುಪಾಯಿಗಳಿಗೆ ತಲುಪಿತ್ತು.

More from DriveSpark

Article Published On: Tuesday, January 15, 2013, 15:55 [IST]
English summary
Country's largest car maker Maruti Suzuki India today said it will increase prices of its vehicles across models by up to Rs 20,000 from tomorrow to offset pressure of adverse currency fluctuation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+