ಡಿಸ್‌ಪ್ಲೇ ಕಾರ್ಡ್ ಲಗತ್ತಿಸಲು ಮೇ 31 ಕೊನೆ ದಿನ

By Nagaraja

ಮ್ಯಾಕ್ಸಿ ಕ್ಯಾಬ್ ಹಾಗೂ ಅಧಿಕೃತ ರಹದಾರಿ ಪಡೆದು ಪ್ರಯಾಣಿಕರನ್ನು ಸಾಗಿಸುವ ವಾಹನಗಳು ಮಾಹಿತಿ ಫಲಕ (ಡಿಸ್‌ಪ್ಲೇ ಕಾರ್ಡ್) ಗಳನ್ನು ಆಳವಡಿಸಲು ಮೇ 31 ಕೊನೆ ದಿನಾಂಕವಾಗಿದ್ದು, ತಪ್ಪದೇ ಮಾಹಿತಿ ಫಲಕ ಲಗತ್ತಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಒಂದು ವೇಳೆ ಡಿಸ್‌ಪ್ಲೇ ಕಾರ್ಡ್ ಆಳವಡಿಸದಿದ್ದಲ್ಲಿ ಜೂನ್ 1ರಿಂದ ಅಂತಹ ವಾಹನಗಳ ವಿರುದ್ಧ ದೂರು ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಾರ್ಚ್ 31ಕ್ಕೆ ಡೆಡ್ ಲೈನ್ ಘೋಷಿಸಿದ್ದರೂ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಎರಡು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು.

ಆಟೋರಿಕ್ಷಾಗಳಲ್ಲಿ ಆಳವಡಿಸಿರುವಂತೆ ವಾಹನಗಳಲ್ಲೂ ಮಾಹಿತಿ ಫಲಕ ಲಗತ್ತಿಸಬೇಕು. ಮಹಿಳೆಯರ ಹಿತದೃಷ್ಟಿಯಿಂದ ಈ ಡಿಸ್‌ಪ್ಲೇ ಕಾರ್ಡ್ ಆಳವಡಿಸಲಾಗುತ್ತಿದ್ದು, ಮುಂದೆ ಉಂಟಾಗುವ ಅನಾಹುತ ತಪ್ಪಿಸಬಹುದಾಗಿದೆ ಎಂದು ಪೊಲೀಸರು ವಿವರಣೆ ನೀಡುತ್ತಾರೆ.

10 ನಿಮಿಷಗಳಲ್ಲೇ ಸಿದ್ಧ...
ವಾಹನ ಮಾಲಿಕರು ಅಥವಾ ಚಾಲಕರು ತಮ್ಮ ಚಾಲನಾ ಪರವಾಣಗಿ ತೆಗೆದುಕೊಂಡು ಹೋದರೆ ಅದರಲ್ಲಿರುವ ಮಾಹಿತಿ ಆಧರಿಸಿ ಕೇವಲ 10 ನಿಮಿಷದೊಳಗೆ ಮಾಹಿತಿ ಫಲಕ ಸಿದ್ಧಪಡಿಸಿ ಕೊಡಲಾಗುತ್ತದೆ. ಉಪ ಪೊಲೀಸ್ ಆಯುಕ್ತರ ಕಚೇರಿ ಶಿವಾಜಿನಗರ ಹಾಗೂ ಯಶವಂತಪುರ, ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಬಸವನಗುಡಿ ಹಾಗೂ ಆಡುಗೋಡಿ ಮತ್ತು ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣೆಗಳಲ್ಲಿ ಇದರ ವಿತರಣೆ ನಡೆಯುತ್ತದೆ.

ನಗರದಲ್ಲಿ ಸಂಚರಿಸಲು ಅಧಿಕೃತ ರಹದಾರಿ ಪಡೆದಿರುವ ಟ್ಯಾಕ್ಸಿಂಗಳು, ಏರ್ ಪೋರ್ಟ್ ಟ್ಯಾಕ್ಸಿಗಳು, ಬಿಪಿಒ ವಾಹನಗಳು, ಐಟಿ-ಬಿಟಿ ಕಂಪನಿ ಸಿಬ್ಬಂದಿಗಳನ್ನು ಕರೆದೊಯ್ಯುವ ವಾಹನಗಳು ಕಡ್ಡಾಯವಾಗಿ ಇದನ್ನು ಆಳವಡಿಸಬೇಕಾಗಿದೆ. ಮಾಹಿತಿ ಫಲಕದಲ್ಲಿ ಚಾಲಕನ ಭಾವಚಿತ್ರ, ಪರವಾನಗಿ ಹಾಗೂ ಇತರ ಅಗತ್ಯ ವಿವರಗಳ ಗುರುತಿನಿ ಚೀಟಿ ಹೊಂದಿರುತ್ತದೆ.

More from DriveSpark

Article Published On: Saturday, May 18, 2013, 13:02 [IST]
English summary
The process of affixing display cards in taxis with details of the driver is gaining momentum with the May 31 deadline fast approaching.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+