ಸೆಪ್ಟೆಂಬರ್‌ನಿಂದ ದುಬಾರಿಯಾಗಲಿರುವ ಬೆಂಝ್ ಕಾರುಗಳು
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಸೆಪ್ಟೆಂಬರ್ ತಿಂಗಳಿಂದ ತನ್ನೆಲ್ಲ ಆವೃತ್ತಿಯ ಕಾರುಗಳಿಗೆ ದರ ಹೆಚ್ಚಳಗೊಳಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೂತನ ದರ 2013 ಸೆಪ್ಟೆಂಬರ್ 1ರಂದು ಜಾರಿಗೆ ಬರಲಿದ್ದು, ಶೇಕಡಾ 2.5ರಿಂದ ಶೇಕಡಾ 4.5ರಷ್ಟು ದರ ಹೆಚ್ಚಳಗೊಳಿಸಲಾಗಿದೆ. ಎಕ್ಸ್‌ಚೇಂಜ್ ರೇಟ್ ಪ್ರಭಾವ, ಆಮದು ಶುಲ್ಕ ಹೆಚ್ಚಾಗಿರುವುದರಿಂದ ದರ ಏರಿಕೆಗೊಳಿಸಲು ಪ್ರೇರಿತರಾಗಿದ್ದೇವೆ ಎಂದು ಬೆಂಝ್ ತಿಳಿಸಿದೆ.
ರುಪಾಯಿ ದರ ಇಳಿಕೆ ಕಂಡಿರುವುದು ಸಹ ವಾಣಿಜ್ಯದ ಮೇಲೆ ಪ್ರಭಾವ ಬೀರಿರುವುದಾಗಿ ಕಂಪನಿ ತಿಳಿಸಿದೆ. ಸದ್ಯ ದೀರ್ಘ ಕಾಲದ ಮಾರುಕಟ್ಟೆ ದೃಷ್ಟಿಯಲ್ಲಿಟ್ಟುಕೊಂಡು ಬೆಲೆ ಏರಿಕೆಗೊಳಿಸಲಾಗುತ್ತಿದೆ ಎಂದು ವಿವರಿಸಿದೆ. ಹಾಗಿದ್ದರೂ ಗ್ರಾಹಕರಿಗೆ 'Flexinomics', ‘STAR Agility' ಮತ್ತು ‘STAR Supersonic'ಗಳಂತಹ ಹಣಕಾಸು ಯೋಜನೆಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದೆ.
ನೂತನ ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಎ 180 ಸಿಡಿಐ ಲಗ್ಷುರಿ ಕಾಂಪಾಕ್ಟ್: 22.05 ಲಕ್ಷ ರು. (ಶೇ. 4ರಷ್ಟು ಏರಿಕೆ)
ಬಿ 180 ಸಿಡಿಐ ಲಗ್ಷುರಿ ಟೂರರ್: 23.50 ಲಕ್ಷ ರು. (ಶೇ. 4ರಷ್ಟು ಏರಿಕೆ)
ಸಿ ಕ್ಲಾಸ್ 200 ಸಿಜಿಐ ಲಗ್ಷುರಿ ಸೆಡಾನ್: 32.25 ಲಕ್ಷ ರು. (ಶೇ. 2.5ರಷ್ಟು ಏರಿಕೆ)
ಇ ಕ್ಲಾಸ್ 200 ಸಿಜಿಐ ಲಗ್ಷುರಿ ಸೆಲೂನ್: 42.16 ಲಕ್ಷ ರು. (ಶೇ. .3.54ರಷ್ಟು ಏರಿಕೆ)
ಎಂಎಲ್ ಕ್ಲಾಸ್ 250 ಸಿಡಿಐ ಲಗ್ಷುರಿ ಎಸ್‌ಯುವಿ: 50.98 ಲಕ್ಷ ರು. (ಶೇ. 4ರಷ್ಟು ಏರಿಕೆ)


Click it and Unblock the Notifications









