ಬೆಂಝ್‌ನಿಂದ ಬರುತ್ತಿದೆ ಅಗ್ಗದ ಎ-ಕ್ಲಾಸ್ ಕಾರು
ಭಾರತೀಯ ಮಾರುಕಟ್ಟೆಗೆ ಒಂದರ ಬಳಿಕ ಒಂದರಂತೆ ಅತ್ಯಾಕರ್ಷಕ ಐಷಾರಾಮಿ ಕಾರುಗಳನ್ನು ಪರಿಚಯಿಸುತ್ತಾ ಬಂದಿರುವ ಜರ್ಮನಿಯ ಪ್ರಮುಖ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಹೊಸ ವರ್ಷದಲ್ಲಿ ಮತ್ತೊಂದು ಆಕರ್ಷಕ ಕಾರೊಂದನ್ನು ಅನಾವರಣಗೊಳಿಸಲಿದೆ.
ಮೂಲಗಳ ಪ್ರಕಾರ ಮರ್ಸಿಡಿಸ್ ಎ-ಕ್ಲಾಸ್ ಹ್ಯಾಚ್‌ಬ್ಯಾಕ್ ಕಾರು ಸದ್ಯದಲ್ಲಿ ದೇಶದ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದು ಮರ್ಸಿಡಿಸ್‌ನಿಂದ ಬಿಡುಗಡೆಯಾಗುತ್ತಿರುವ ಅತಿ ಅಗ್ಗದ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ನಿಮ್ಮ ಮಾಹಿತಿಗಾಗಿ ಈ ಹಿಂದೆ ದೇಶದಲ್ಲಿ ಬಿಡುಗಡೆಗೊಂಡ ಬಿ-ಕ್ಲಾಸ್ ಮಾದರಿಯ ಕಾರುಗಳಿಗೆ 26 ಲಕ್ಷ ರು.ಗಳಿದ್ದವು. ಆದರೆ ಇದೀಗ ಬರಲಿರುವ ಎ-ಕ್ಲಾಸ್ ಇದಕ್ಕಿಂತಲೂ ಕಡಿಮೆ ದುಬಾರಿಯಾಗಲಿದೆ. ಹಾಗಿದ್ದರೂ ದರದ ಬಗ್ಗೆ ಯಾವುದೇ ಗುಟ್ಟನ್ನು ಕಂಪನಿ ಇದವರೆಗೆ ಬಹಿರಂಗಪಡಿಸಿಲ್ಲ. ಆದರೆ ದೇಶದ ಯುವ ಗ್ರಾಹಕರವನ್ನು ಪ್ರಮುಖವಾಗಿಯೂ ಗುರಿಯಾಗಿರಿಸಿಕೊಂಡು ನಿರ್ಮಾಣವಾಗಿರುವ ಈ ಕಾರು 20 ಲಕ್ಷ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.
ಮರ್ಸಿಡಿಸ್‌ಗಳಂತಹ ಲಗ್ಷುರಿ ಕಾರುಗಳ ಮಾಲಿಕರಾಗ ಬಯಸುವವರು ಕೈ ಸುಟ್ಟುಕೊಳ್ಳುವಂತಹ ಬೆಲೆಯಿಂದಾಗಿ ತಮ್ಮ ಯೋಜನೆಯನ್ನು ಮೂಲೆಗುಂಪಾಗಿಸುತ್ತಿದ್ದರು. ಆದರೆ ಈ ಹ್ಯಾಚ್‌ಬ್ಯಾಕ್ ಕಾರು ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮರ್ಸಿಡಿಸ್ ಮಾಡುತ್ತಿದೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ದೇಶದ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್‌ನಿಂದ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷಿತ ಕಾರು ಎ-ಕ್ಲಾಸ್ ಹ್ಯಾಚ್‌ಬ್ಯಾಕ್ ಆಗಿದೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಅಂದ ಹಾಗೆ 2016ರ ವೇಳೆಗೆ ಲಗ್ಷುರಿ ಸೆಗ್ಮೆಂಟ್‌ನಲ್ಲಿ ದೇಶದ ಮಾರುಕಟ್ಟೆಯಲ್ಲಿ ನಂ.1 ಪಟ್ಟ ಮರಳಿ ಪಡೆಯುವುದು ಬೆಂಝ್ ಗುರಿಯಾಗಿದೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಅತ್ಯಾಕರ್ಷಕ ವಿನ್ಯಾಸ ಹಾಗೂ ಅತ್ಯುತ್ತಮ ಇಂಧನ ಕ್ಷಮತೆ ಹೊಂದಿರಲಿದೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಫ್ರಂಟ್ ವ್ಯೂ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಸೈಡ್ ವ್ಯೂ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಸೈಡ್ ವ್ಯೂ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಫ್ರಂಟ್ ವ್ಯೂ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಇಂಟಿರಿಯರ್ ವ್ಯೂ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಆಕರ್ಷಕ ನೋಟ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಸ್ಟೈಲಿಷ್ ವಿನ್ಯಾಸ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್
ಲಗ್ಷುರಿ ಸೆಗ್ಮೆಂಟ್‌ನಲ್ಲಿ ಅಗ್ಗದ ಕಾರು


Click it and Unblock the Notifications








