ಬೆಂಝ್‌ನಿಂದ ಇನ್ನೊಂದು ಪವರ್‌ಫುಲ್ ಗಾಡಿ ಬಿಡುಗಡೆಗೆ ಸಿದ್ಧ
ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯತ್ತ ಸಂಪೂರ್ಣ ಗಮನ ಕೇಂದ್ರಿಕರಿಸಿರುವ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಇನ್ನೊಂದು ಪವರ್‌ಫುಲ್ ವಾಹನ ಲಾಂಚ್ ಮಾಡುವ ಇರಾದೆ ಹೊಂದಿದೆ.
ಹೌದು, ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಕೆ 55 ಎಎಂಜಿ ಕಾರು ಡಿಸೆಂಬರ್ 2ರಂದು ಲಾಂಚ್ ಆಗಲಿದೆ. ಇದರೊಂದಿಗೆ ಇದೀಗಷ್ಟೇ ಬಿಡುಗೆಯಾಗಿರುವ ಸಿ ಕ್ಲಾಸ್ ಸೆಲೆಬ್ರೇಷನ್ ಎಡಿಷನ್ ಬೆನ್ನಲ್ಲೇ ಬೆಂಝ್‌ನಿಂದ ಇನ್ನೊಂದು ಶಕ್ತಿಶಾಲಿ ಕಾರು ಎಂಟ್ರಿ ಕೊಡಲಿದೆ.

ನೂತನ ಬೆಂಝ್ ಎಸ್‌ಎಲ್‌ಕೆ 55 ಎಎಂಜಿ 5.5 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 421 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.
ಪ್ರಸ್ತುತ ಗಾಡಿ ಕೇವಲ 4.6 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ 250 ಕೀ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಇನ್ನು ಎಎಂಜಿ ಸ್ಪೀಡ್ ಶಿಫ್ಟ್ 7 ಜಿ ಟ್ರಾನಿಕ್ ಪ್ಲಸ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಖಾಂತರ ಪವರ್ ವಿತರಣೆಯಾಗಲಿದೆ.



Click it and Unblock the Notifications