2014ರಲ್ಲಿ ಸದ್ದು ಮಾಡಲಿರುವ ಮಾರುತಿ ಎಸ್‌ಎಕ್ಸ್4

By Nagaraja

ದೀರ್ಘಾವಧಿ ಯೋಜನೆಯನ್ನು ಹೊಂದಿರುವ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ 2014ನೇ ಇಸವಿಯಲ್ಲಿ ಎಸ್‌ಎಕ್ಸ್4 ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ನಿಮ್ಮ ಮಾಹಿತಿಗಾಗಿ, ಈ ಹಿಂದೆಯೇ ಎಸ್‌ಎಕ್ಸ್4 ಡೀಸೆಲ್ ಆವೃತ್ತಿಯನ್ನು ಲಾಂಚ್ ಮಾಡಲಾಗಿತ್ತು. ಆದರೆ ಮಾರುತಿಯ ಈ ನಿರ್ದಿಷ್ಟ ಆವೃತ್ತಿ ದೇಶದ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಅಂಕಿಅಂಶ ಪ್ರಕಾರ 2012ನೇ ಸಾಲಿನಲ್ಲಿ ಕೇವಲ 4,577 ಯುನಿಟ್‌ಗಳಷ್ಟೇ ಸೇಲ್ ಆಗಿದ್ದವು.

ಇದರಿಂದ ಎಸ್‌ಎಕ್ಸ್4 ಆವೃತ್ತಿಗೆ ಬಲವಾದ ಪೆಟ್ಟಾಗಿತ್ತು. ಆದರೂ ಹಿಂಜರಿಯದ ಮಾರುತಿ ಪರಿಷ್ಕೃತ ಎಸ್‌ಎಕ್ಸ್4 ಸೆಡಾನ್ ಕಾರನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಕಂಪನಿಯ ಮಾನೇಸರ್ ಪ್ಲಾಂಟ್‌ನಲ್ಲಿ ವೈಎಲ್1 ಯೋಜನೆಯಡಿಯಲ್ಲಿ ಈಗಾಗಲೇ ಕಾರಿನ ಅಭಿವೃದ್ಧಿ ಕಾರ್ಯ ಆರಂಭಗೊಂಡಿದೆ.

ಪರಿಷ್ಕೃತ ಎಸ್‌ಎಕ್ಸ್4 ಆವೃತ್ತಿ ಸ್ಕೋಡಾ ರ‌್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ, ಹೊಂಡಾ ಸಿಟಿ, ಟೊಯೊಟಾ ಕರೊಲ್ಲಾ ಹಾಗೂ ನಿಸ್ಸಾನ್ ಸನ್ನಿ ಆವೃತ್ತಿಗಳಿಗೆ ಪೈಪೋಟಿಯೆನಿಸಲಿದೆ. ಎಸ್‌ಎಕ್ಸ್4 ಅಪ್‌ಡೇಟಡ್ ವರ್ಷನ್ ನೂತನ ಫ್ರಂಟ್ ಗ್ರಿಲ್ ಸೇರಿದಂತೆ ಹೆಡ್‌ಲೈಟ್ ಬದಲಾವಣೆಗಳನ್ನು ಪಡೆಯಲಿದೆ.

ಹೆಚ್ಚುವರಿ ಫೀಚರ್‌ಗಳೊಂದಿಗೆ ಎಸ್‌ಎಕ್ಸ್4 ಆಗಮನವಾಗಲಿದ್ದು, ಇಂಟಿರಿಯರ್ ಭಾಗಗಳು ಹೆಚ್ಚು ತಾಜಾ ಲುಕ್ ಹೊಂದಿರಲಿದೆ. ಡ್ಯಾಶ್‌ಬೋರ್ಡ್‌ನಲ್ಲೂ ಪ್ರಮುಖ ಬದಲಾವಣೆ ಕಂಡುಬರಲಿದೆ. ಈ ಎಲ್ಲ ಹೊಸ ಸೌಲಭ್ಯಗಳು ಪ್ರಸ್ತುತವಿರುವ ಮಿಡ್ ಸೆಡಾನ್ ಕಾರುಗಳಿಗೆ ಕಠಿಣ ಪೈಪೋಟಿ ನೀಡಲಿದೆ.

ಅಂದ ಹಾಗೆ ಎಸ್‌ಎಕ್ಸ್4 ಎಂಜಿನ್ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಡೀಸೆಲ್ ಆವೃತ್ತಿಯು 1.3 ಲೀಟರ್ ಹಾಗೂ ಪೆಟ್ರೋಲ್ ಆವೃತ್ತಿ 1.6 ಲೀಟರ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.

More from DriveSpark

Article Published On: Friday, January 4, 2013, 10:38 [IST]
English summary
Maruti Suzuki, the leading Indian carmaker has now decided to make amends by working an a refreshed new SX4 sedan. Maruti Suzuki is reportedly developing this new car under the project name YL1 in its Manesar plant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+