ನೂತನ ಟಾಟಾ ನ್ಯಾನೋ ಜೂನ್ ತಿಂಗಳಲ್ಲೇ ಲಾಂಚ್?
ಕಳೆಗುಂದಿರುವ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ಆಲ್ ನ್ಯೂ ಟಾಟಾ ನ್ಯಾನೋ ಕಾರು ಸದ್ಯದಲ್ಲೇ ಲಾಂಚ್ ಆಗಲಿದೆ. ಮೂಲಗಳ ಪ್ರಕಾರ ದೇಶದ ಅತಿ ಅಗ್ಗದ ಕಾರೆಂಬ ಖ್ಯಾತಿ ಪಡೆದಿರುವ ಟಾಟಾ ನ್ಯಾನೋ ಪ್ರಸಕ್ತ ಜೂನ್ ತಿಂಗಳಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.
ಹಿಂದೊಮ್ಮೆ ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಅಲೆಯೆಬ್ಬಿಸಿದ ಮಧ್ಯಮ ವರ್ಗದ ನೆಚ್ಚಿನ ನ್ಯಾನೋ ಕಾರು ಬರ ಬರುತ್ತಾ ತನ್ನ ಆವೇಗವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿತ್ತು. ಈ ನಡುವೆ ಗಂಭೀರ ಚಿಂತನೆ ನಡೆಸಿರುವ ಕಂಪನಿಯು ನೂತನ ಆವೃತ್ತಿಯನ್ನು ಪರಿಚಯಿಸಲು ಹೊರಟಿದೆ.
2013 ನ್ಯಾನೋ ಮಾರುಕಟ್ಟೆ ಪ್ರವೇಶಿಸಲು ಸನ್ನದ್ಧವಾಗಿದೆ. ಇದಾದ ಬೆನ್ನಲ್ಲೇ ಸಿಎನ್‌ಜಿ ವರ್ಷನ್ ಹಾಗೂ ವರ್ಷಾಂತ್ಯದಲ್ಲಿ ನ್ಯಾನೋ ಡೀಸೆಲ್ ವರ್ಷನ್ ಆಗಮನವಾಗುವುದು ಬಹುತೇಕ ಖಚಿತವಾಗಿದೆ.
800ಸಿಸಿ ನ್ಯಾನೋ 2013 ವರ್ಷನ್‌ನಲ್ಲಿ ಹಲವು ಹೊಸ ಫೀಚರ್‌ಗಳಿರಲಿವೆ. ಇಂಟಿರಿಯರ್ ಜತೆಗೆ ಎಕ್ಸ್‌ಟೀರಿಯರ್ ಭಾಗಗಳಲ್ಲೂ ಕೆಲವೊಂದು ಬದಲಾವಣೆ ಕಾಣಿಸಿಕೊಳ್ಳಲಿದೆ.


Click it and Unblock the Notifications
