ಪ್ರಸಕ್ತ ಸಾಲಿನಲ್ಲೇ ನಿಸ್ಸಾನ್ ಬೇಸ್ ವೆರಿಯಂಟ್ ಆಗಮನ
ಹೋಂಡಾ ಎಂಟ್ರಿ ಲೆವೆಲ್ ಕಾರು ನಿಕಟ ಭವಿಷ್ಯದಲ್ಲಿ ಆಗಮಿಸಲಿದೆ ಎಂಬುದು ಇದೀಗಷ್ಟೇ ಭಾರಿ ಸುದ್ದಿಗೆ ಕಾರಣವಾಗಿತ್ತು. ಈ ನಡುವೆ ನಿಸ್ಸಾನ್ ಕೂಡಾ ಬೇಸ್ ವೆರಿಯಂಟ್ ಪರಿಚಯಿಸುವುದಾಗಿ ತಿಳಿಸಿದೆ. ಮೈಕ್ರಾ ತಲಹದಿಯ ನಿಸ್ಸಾನ್ ಬೇಸ್ ವೆರಿಯಂಟ್ ಕ್ಲಾಸಿಕ್ ಎಂಬುದಾಗಿ ಅರಿಯಲ್ಪಡಲಿದ್ದು, ಪ್ರಸಕ್ತ ಸಾಲಿನಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ನಿಸ್ಸಾನ್ ಮೈಕ್ರಾ ಎಂಟ್ರಿ ಲೆವೆಲ್ ಕಾರು 'ಜಿಒ2ಎ' ಕೋಡ್ ಪಡೆದುಕೊಂಡಿದ್ದು, ಸದ್ಯ ಚಾಲ್ತಿಯಲ್ಲಿರುವ ಮೈಕ್ರಾಗಿಂತಲೂ 50 ಸಾವಿರ ರು.ಗಳಷ್ಟು ಅಗ್ಗವಾಗಿರಲಿದೆ.
ಪವರ್ ಸ್ಟೀರಿಂಗ್, ಸೆಂಟ್ರಲ್ ಲಾಂಕಿಗ್ ಜತೆಗೆ ನೂತನ ಕಲರ್ ವೆರಿಯಂಟ್‌ಗಳು ಹೆಚ್ಚಿನ ಗಮನ ಸೆಳೆಯಲಿದೆ. ಇದು 1.5 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.
ಮೈಕ್ರಾ ಕ್ಲಾಸಿಕ್ ಜತೆಗೆ ಡಟ್ಸನ್ ಕೂಡಾ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಪ್ರೀಮಿಯಂ ಲುಕ್ ಹೊಂದಿದ್ದರೂ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಾಗಲಿದೆ. ಭಾರತ ಸೇರಿದಂತೆ ಚೀನಾ ಹಾಗೂ ದಕ್ಷಿಣ ಪೂರ್ವ ಏಷಿಯಾ ಮಾರುಕಟ್ಟೆಗಳಿಗೂ ಪರಿಚಯವಾಗಲಿದೆ.


Click it and Unblock the Notifications









