ನಿಸ್ಸಾನ್ ಸನ್ನಿ ಸದ್ಯದಲ್ಲೇ ಆಗಮನ; ಇವಾಲಿಯಾ ದರ ಕಡಿತ!
ಭಾರತದಲ್ಲಿ ಸ್ಥಿರ ಮಾರುಕಟ್ಟೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವ ನಿಸ್ಸಾನ್ ಸನ್ನಿ ಸದ್ಯದಲ್ಲೇ ಫೇಸ್‌ಲಿಫ್ಟ್ ವರ್ಷನ್ ಪಡೆದುಕೊಳ್ಳಲಿದೆ. ಮೂಲಗಳ ಪ್ರಕಾರ ಈ ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯ ನೂತನ ಸನ್ನಿ ವರ್ಷನ್ ಭಾರತ ಪ್ರವೇಶ ಪಡೆಯಲಿದೆ.
ಚೀನಾದಲ್ಲಿ ಈಗಾಗಲೇ ರಹಸ್ಯ ಕ್ಯಾಮೆರಾದ ಸೆರೆ ಸಿಕ್ಕಿರುವ ಸನ್ನಿ ಭಾರತ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದು ಹ್ಯುಂಡೈ ವರ್ನಾ, ಫೋಕ್ಸ್‌ವ್ಯಾಗನ್ ವೆಂಟೊ ಹಾಗೂ ಹೋಂಡಾ ಸಿಟಿ ಕಾರುಗಳಿಗೆ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.
ಹೊಸ ಸನ್ನಿ ವರ್ಷನ್ ಎಕ್ಸ್‌ಟೀರಿಯರ್ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬರಲಿದೆ. ಇದು ಪರಿಷ್ಕೃತ ಫ್ರಂಟ್ ಹಾಗೂ ಹೆಡ್‌ಲೈಟ್ ಪಡೆದುಕೊಳ್ಳಲಿದೆ. ಇನ್ನು ಇಂಟಿರಿಯರ್ ಭಾಗಗಳಲ್ಲೂ ಬದಲಾವಣೆ ಕಂಡುಬರುವ ನಿರೀಕ್ಷೆಯಿದೆ.
ನಿಸ್ಸಾನ್ ಇವಾಲಿಯಾ ದರ ಕಡಿತ...
ಈ ನಡುವೆ ನಿಸ್ಸಾನ್ ಇವಾಲಿಯಾ ದರವನ್ನು 1.15 ಲಕ್ಷ ರು.ಗಳಷ್ಟು ಕಡಿತಗೊಳಿಸಲಾಗಿದ್ದು, 7.99 ಲಕ್ಷ ರು.ಗಳಿಗೆ ಗ್ರಾಹಕರ ಕೈ ಸೇರಲಿದೆ ಎಂದು ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗಿದ್ದ ನಿಸ್ಸಾನ್ ಇವಾಲಿಯಾ ಮಲ್ಟಿ ಪರ್ಪಸ್ ವಾಹನ ನಿರೀಕ್ಷಿದಷ್ಟು ಯಶ ಸಾಧಿಸಿರಲಿಲ್ಲ. ಅಲ್ಲದೆ ಕಳೆದ ಆರು ತಿಂಗಳಲ್ಲಿ ಕೇವಲ 921 ಯುನಿಟ್‌ಗಳಷ್ಟೇ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಹಾಗಿರುವ ದರ ಕಡಿತ ಮಾಡುವ ಮೂಲಕ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ಯೋಜನೆ ಹೊಂದಿದೆ.


Click it and Unblock the Notifications










