ನಿಸ್ಸಾನ್ ದರ ಏರಿಕೆ ಘೋಷಣೆ
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್, ಭಾರತದಲ್ಲಿ ಮಾರಾಟ ಮಾಡುತ್ತಿರುವ ಮಾಡೆಲ್‌ಗಳ ಪೈಕಿ ಕೆಲವೊಂದು ಆಯ್ದ ಮಾದರಿಗಳಿಗೆ ಬೆಲೆ ಏರಿಕೆಗೊಳಿಸುವುದಾಗಿ ಘೋಷಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ದರ ಏರಿಕೆ ನೀತಿಯು ನಿರ್ದಿಷ್ಟ ಮಾದರಿಗಳನ್ನು ಅವಲಂಬಿಸಿರಲಿದ್ದು, ಶೇಕಡಾ 4ರ ವರೆಗೆ ವರ್ಧನೆ ಕಂಡುಬರಲಿದೆ. ರುಪಾಯಿ ಏರಿಳಿತವು ನಿರ್ಮಾಣ ವೆಚ್ಚ ಮೇಲೆ ನೇರ ಪರಿಣಾಮ ಬೀರಿರುವುದಾಗಿ ನಿಸ್ಸಾನ್ ಪ್ರಕಟಣೆಯಲ್ಲಿ ಘೋಷಿಸಿದೆ. ಹೊಸ ದರ ನೀತಿಯು 2014ರಲ್ಲಿ ಜಾರಿಗೆ ಬರಲಿದೆ.

ಇದರಂತೆ ದೇಶದಲ್ಲಿ ನಿಸ್ಸಾನ್‌ನಿಂದ ಮಾರಾಟವಾಗುತ್ತಿರುವ ಜನಪ್ರಿಯ ಆವೃತ್ತಿಗಳಾದ ಮೈಕ್ರಾ, ಮೈಕ್ರಾ ಆಕ್ಟಿವ್, ಸನ್ನಿ, ಇವಾಲಿಯಾ ಮತ್ತು ಟೆರನೊ ಆವೃತ್ತಿಗಳಲ್ಲಿ ದರ ಏರಿಕೆ ಕಂಡುಬರಲಿದೆ.
ಇತ್ತೀಚೆಗಷ್ಟೇ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್, ಆಡಿ ಮತ್ತು ಬಿಎಂಡಬ್ಲ್ಯು ಬೆಲೆಯೇರಿಕೆ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ನಿಸ್ಸಾನ್‌ನಿಂದಲೂ ಇದಕ್ಕೆ ಸಮಾನವಾದ ನಡೆ ಕಂಡುಬಂದಿದೆ.


Click it and Unblock the Notifications








