ಹಿಂದಿನಿಂದಲೂ ನಿಸ್ಸಾನ್ ಟೆರನೊ ಲುಕ್ ಸೂಪರ್
ಕೆಲವು ದಿನಗಳ ಹಿಂದೆಯಷ್ಟೇ ನಿಸ್ಸಾನ್ ಟೆರನೊ ಮುಂಭಾಗದ ಚಿತ್ರ ಬಿಡುಗಡೆಗೊಂಡಿತ್ತು. ಇದೀಗ ಕಂಪನಿಯು ಹಿಂಭಾಗದ ಟೀಸರ್ ಇಮೇಜ್ ಕೂಡಾ ರಿಲೀಸ್ ಮಾಡಿದೆ. ಪ್ರಸ್ತುತ ಎಸ್‌ಯುವಿ ಕಾರು ಎದುರುಗಡೆ ಸೇರಿದಂತೆ ಹಿಂದುಗಡೆಯಿಂದಲೂ ಪ್ರೀಮಿಯಂ ಲುಕ್ ಪಡೆದುಕೊಂಡಿದೆ.
ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ರೆನೊ ಡಸ್ಟರ್‌ಗೆ ಹೋಲಿಸಿದಾಗ ನಿಸ್ಸಾನ್ ಟೆರನೊ ವಿಭಿನ್ನ ಲುಕ್ ಪಡೆದುಕೊಂಡಿದೆ. ಇದನ್ನು ವಿಭಿನ್ನ ವಿನ್ಯಾಸ ಪಡೆದ ಟೈಲ್ ಲ್ಯಾಂಪ್ ಸಾರುತ್ತಿದೆ. ಒಟ್ಟಾರೆಯಾಗಿ ಹೆಚ್ಚಿನ ಪ್ರೀಮಿಯಂ ಲುಕ್ ಪಡೆದುಕೊಂಡಿದೆ.
ಟೆರನೊ ಯಾವಾಗ ಲಾಂಚ್ ಆಗಲಿದೆ ಎಂಬುದಕ್ಕೆ ನಿಸ್ಸಾನ್ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ. ಹಾಗಿದ್ದರೂ ಡಸ್ಟರ್‌ಗಿಂತಲೂ ದುಬಾರಿಯಾಗಿರಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಲಭ್ಯವಿರುವ ಮಾಹಿತಿ ಪ್ರಕಾರ ಟೆರನೊ ಹೆಚ್ಚು ಕ್ರೀಡಾ ವೈಶಿಷ್ಟ್ಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಭಾರತ ಮಾರುಕಟ್ಟೆಯಲ್ಲಿ ನಿಸ್ಸಾನ್ ಹೊಸ ಆವೃತ್ತಿ ಟೆರನೊ ಎಷ್ಟರ ಮಟ್ಟಿಗೆ ಯಶ ಗಳಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ನಿಸ್ಸಾನ್ ಟೆರನೊ ರಿಯರ್ ಲುಕ್



Click it and Unblock the Notifications