ರೋಲ್ಸ್ ರಾಯ್ಸ್ ಫೇಸ್ ಬದಲಾಗಲ್ಲ..!
2020ರ ವರೆಗೆ ರೋಲ್ಸ್ ರಾಯ್ಸ್ ಐಷಾರಾಮಿ ಕಾರುಗಳ ಮುಖಛಾಯೆ ಬದಲಾಗಲ್ಲ. ಹೌದು, ಈ ಬ್ರಿಟನ್ ಮೂಲದ ಲಗ್ಷುರಿ ಕಾರು ತಯಾರಕ ಸಂಸ್ಥೆಯಾದ ರೋಲ್ಸ್ ರಾಯ್ಸ್ ನಿಕಟ ಭವಿಷ್ಯದಲ್ಲಿ ದುಬಾರಿ ಫಾಟಂ ಆವೃತ್ತಿಯ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಜಾಗತಿಕ ಮಾರುಕಟ್ಟೆಗೆ 2003ನೇ ಇಸವಿಯಲ್ಲಿ ಪರಿಯಚಗೊಂಡಿದ್ದ ರೋಲ್ಸ್ ರಾಯ್ಸ್ ಫಾಟಂ 2012ರಲ್ಲಿ ಮೊದಲ ಬಾರಿಗೆ ಫೇಸ್‌ಲಿಫ್ಟ್ ಪಡೆದುಕೊಂಡಿತ್ತು. ಅಂತೆಯೇ 2020ರ ವರೆಗೆ ಯಾವುದೇ ಬದಲಿ ಆವೃತ್ತಿಗಳನ್ನು ಪರಿಚಯಿಸದಿರಲು ಕಂಪನಿ ಯೋಜನೆ ಹಾಕಿಕೊಂಡಿದೆ.

ಸಾಂಪ್ರದಾಯಿಕ ವಿನ್ಯಾಸ ಹೊಂದಿರುವ ರೋಲ್ಸ್ ರಾಯ್ಸ್ ಫಾಟಂ 12 ಸಿಲಿಂಡರ್ ಎಂಜಿನ್ ಹೊಂದಿದ್ದು 453 ಅಶ್ವಶಕ್ತಿ (531 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಟ್ಟಿದೆ.
ಅಂದ ಹಾಗೆ ರೋಲ್ಸ್ ರಾಯ್ಸ್ ಕೇವಲ ಆರು ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.


Click it and Unblock the Notifications








