ಬೆಂಗಳೂರಿನಲ್ಲಿ ಒಪೆಲ್ ಟೆಸ್ಟಿಂಗ್; ಭಾರತಕ್ಕೆ ರಿ ಎಂಟ್ರಿ?
ಜರ್ಮನಿಯ ಕಾರು ತಯಾರಕ ಸಂಸ್ಥೆಯಾದ ಒಪಲ್, ಭಾರತಕ್ಕೆ ಮತ್ತೆ ರಿ ಎಂಟ್ರಿ ಕೊಡುತ್ತಿದೆಯೇ? ಇತ್ತೀಚೆಗಿನ ಬೆಳವಣಿಗೆಗಳು ಇದಕ್ಕೆ ಪೂರಕವಾಗಿದೆ.
ಒಪೆಲ್ ಕೋರ್ಸಾ ನೂತನ ಬ್ರಾಂಡ್ ಬೆಂಗಳೂರಿನಲ್ಲಿ ಟೆಸ್ಟಿಂಗ್ ನಡೆಸುತ್ತಿದ್ದ ವೆಳೆ ಕ್ಯಾಮೆರಾ ಕಣ್ಣುಗಳಿಗೆ ಸೆರೆಸಿಕ್ಕಿರುವುದು ಹೊಸ ನಿರೀಕ್ಷೆಗಳಿಗೆ ಕಾರಣವಾಗಿದೆ.
ನಗರದ ಆಡುಗೋಡಿಯಲ್ಲಿ ಸುತ್ತಾಡುತ್ತಿದ್ದ ಒಪೆಲ್ ಕಾರನ್ನು ಟೀಮ್ ಬಿಎಚ್‌ಪಿ ತಂಡವು ಸೆರೆಹಿಡಿದಿದೆ. ಸಂಪೂರ್ಣ ನೂತನ ವಿನ್ಯಾಸ ಹೊಂದಿರುವ ಈ ಎರಡು ಡೋರಿನ ಕಾರಿನ ಇಂಟಿರಿಯರ್ ಭಾಗಗಳ ಕುರಿತು ಹೆಚ್ಚಿನ ಮಾಹಿತಿ ದೊರಕಿಲ್ಲ.
ಈ ಎಲ್ಲ ಬೆಳವಣಿಗೆಯು ಅಮೆರಿಕದ ಜನರಲ್ ಮೋಟಾರ್ಸ್ ಸಹ ಸಂಸ್ಥೆಯಾಗಿದ್ದ ಒಪೆಲ್ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸುತ್ತಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.


Click it and Unblock the Notifications









