ಗುಜರಾತ್ ಪೊಲೀಸ್ ತೆಕ್ಕೆಗೆ ಪೊಲರಿಸ್ ಗಾಡಿ
ನಿಮ್ಮಲ್ಲಿ ಎಷ್ಟು ಮಂದಿಗೆ ಪೊಲರಿಸ್ ಆಫ್ ರೋಡ್ ಟ್ರ್ಯಾಕ್ ನಮ್ಮ ಬೆಂಗಳೂರಿನಲ್ಲಿ ಸ್ಥಿತಗೊಂಡಿದೆ ಎಂಬುದರ ಬಗ್ಗೆ ಮಾಹಿತಿಯಿದೆ? ವಿಷಯ ಏನೇ ಆಗಿರಲಿ ಈಗಿನ ಪ್ರಮುಖ ಸುದ್ದಿ ಏನೆಂದರೆ ಪೊಲರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಮೊದಲ ವಾಣಿಜ್ಯ ಆದೇಶವನ್ನು ಸ್ವೀಕರಿಸಿಕೊಂಡಿದ್ದು, ಗುಜರಾತ್ ಪೊಲೀಸ್ ಜತೆ ಕೈಜೋಡಿಸಿಕೊಳ್ಳಲಿದೆ.
ಪೊಲರಿಸ್ ರೇಂಜರ್ ಆರ್‌ಝಡ್‌ಆರ್ ಎಸ್ 800 ಆಲ್ ಟರೈನ್ ವಾಹನ ಖರೀದಿಸಲು ಗುಜರಾತ್ ಪೊಲೀಸ್ ನಿರ್ಧರಿಸಿದೆ. ಈ ವಾಹನಗಳನ್ನು ದೈನಂದಿನ ಪೆಟ್ರೋಲಿಂಗ್ ಜತೆಗೆ ರಹಸ್ಯ ಕಾರ್ಯಾಚರಣೆ, ಇಕ್ಕಟ್ಟಿನ ಪ್ರದೇಶ ಸೇರಿದಂತೆ ತೀರಾ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಬಳಸಿಕೊಳ್ಳಲಿದೆ.
ಈ ಪೊಲರಿಸ್ ಎಟಿವಿ ರೇಂಜ್ ವಾಹನ 760 ಸಿಸಿ ಫ್ಯೂಯಲ್ ಇಂಜೆಕ್ಟಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 53 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 4.5 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.
ಅಂದ ಹಾಗೆ ವಿದೇಶಿ ಪೊಲೀಸರು ಪೊಲರಿಸ್ ಎಟಿವಿ ವಾಹಗಳನ್ನು ಬಳಸಲಾಗುತ್ತಿದ್ದರೂ ಇದೇ ಮೊದಲ ಬಾರಿಗೆ ಭಾರತೀಯ ರಕ್ಷಣಾ ಸಂಸ್ಥೆಯೊಂದು ಪೊಲರಿಸ್ ಗಾಡಿಯನ್ನು ಖರೀದಿಸುತ್ತಿದೆ.


Click it and Unblock the Notifications









