ಪ್ರೀತಿ ಕಣ್ಮುಂದೆಯೇ ಅಂಬುಲೆನ್ಸ್ ಹಿಟ್ ಆಂಡ್ ರನ್ ಕೇಸ್!

By Nagaraja

ಎರಡು ದಿನಗಳ ಹಿಂದೆ ಅಂದರೆ ಭಾನುವಾರ ಮುಂಬೈನಿಂದ ಪಂಜಾಬ್‌ಗೆ ಪಯಣ ಬೆಳೆಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ ಕ್ರಿಕೆಟ್ ತಂಡದ ಮಾಲಕಿ ಪ್ರೀತಿ ಜಿಂಟಾ ಕಣ್ಮುಂದೆಯೇ ಅಂಬುಲೆನ್ಸ್ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ.

ಇಂಡಿಯನ್ ಪ್ರೀಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಮುಂಬೈ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ಬಗ್ಗೆ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಪ್ರೀತಿ ಜಿಂಟಾ ಬರೆದುಕೊಂಡಿದ್ದಾರೆ. ಪ್ರಾಣ ರಕ್ಷಿಸಬೇಕಾಗಿದ್ದ ಅಂಬುಲೆನ್ಸ್ ವ್ಯಕ್ತಿಯೊಬ್ಬರನ್ನು ಹೊಡೆದುರುಳಿಸಿ ಪಲಾಯನ ಗೈದಿತ್ತು.

ಈ ಸಂದರ್ಭದಲ್ಲಿ ಅಂಬುಲೆನ್ಸ್ ಅಟ್ಟಾಡಿಸಿದ ಪ್ರೀತಿ, ನಂಬರ್ ಪ್ಲೇಟ್ ನೋಟ್ ಮಾಡುವುದಲ್ಲಿ ಯಶಸ್ವಿಯಾಗಿದ್ದಾರೆ. 'MH-04-FP-1634' ಎಂಬ ನಂಬರ್ ಪ್ಲೇಟ್ ಹೊಂದಿದ್ದ ಅಂಬುಲೆನ್ಸ್ ವ್ಯಕ್ತಿಗೆ ಢಿಕ್ಕಿ ಹೊಡೆದಿತ್ತು.

ಆ ಬಳಿಕ ಸ್ಥಳೀಯರು ಸೇರಿ ಆತನನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ಬೇಗನೇ ಚೇತರಿಸಿಕೊಳ್ಳಲಿ ಎಂದು ಬಾಲಿವುಡ್‌ ನಟಿ ಕೂಡಾ ಆಗಿರುವ ಪ್ರೀತಿ ಜಿಂಟಾ ಶುಭ ಹಾರೈಸಿದ್ದಾರೆ.

More from DriveSpark

Article Published On: Tuesday, April 23, 2013, 14:23 [IST]
English summary
Actress Preity Zinta played the good Samaritan on Sunday on the way to the airport when she spotted a man being struck down by an ambulance in a case of hit and run.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+