ಮಾಧ್ಯಮದವರ ಮೇಲೆ ಪ್ರೀತಿ ಜಿಂಟಾಳಿಗೇಕೆ ಮುನಿಸು?

ಆಕೆಯ ಬದುಕಿನ ಆರಂಭದಲ್ಲಿ ಕಷ್ಟಗಳ ಸರಮಾಲೆಯೇ ಇತ್ತು. 9 ನೇ ವರ್ಷಕ್ಕೆ ಅತ್ಯಾಚಾರಕ್ಕೆ ಒಳಗಾಗಿದ್ದಳು. 14ನೇ ವರ್ಷಕ್ಕೆ ಗರ್ಭಿಣಿಯಾಗಿದ್ದಳು. ಕೆಲವೇ ಸಮಯದಲ್ಲಿ ಮಗನನ್ನು ಕಳೆದುಕೊಂಡಿದ್ದಳು. ಇಂತಹ ಕಷ್ಟಗಳ ನಡುವೆ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ವಿನ್ ಫ್ರೇ ಲಕ್ಷಲಕ್ಷ ಜನರ ಹೃದಯದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಳು.
ನಿಜಹೇಳಬೇಕೆಂದರೆ ಈಗ ನಾವು ಹೇಳಹೊರಟದ್ದು Oprah Winfrey ಬಗ್ಗೆಯಲ್ಲ. ನಮ್ಮ ಬಾಲಿವುಡ್ ನಟಿ ಪ್ರೀತಿ ಜಿಂಟಾ ಬಗ್ಗೆ. ಕೆಲವು ದಿನದ ಹಿಂದೆ ಪರಮೇಶ್ವರ್ ಗೋಡ್ರೆಜ್ ಓಪ್ರಾ ವಿನ್ ಫ್ರೇ ಭಾರತಕ್ಕೆ ಕರೆಸಿದ್ದರು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೂಡ ಬಂದಿದ್ದರು ಎಂಬಲ್ಲಿಂದ ನಿಜವಾದ ಡ್ರೈವ್ ಸ್ಪಾರ್ಕ್ ಸ್ಟೋರಿ ಆರಂಭವಾಗುತ್ತದೆ.
ಎಲ್ಲರೂ ಓಪ್ರಾ ಮಾತುಗಳನ್ನು ಕೇಳಿ ಸಂತೃಪ್ತಿಯಿಂದ ಮನೆಗೆ ಹೋದರೆ ಪ್ರೀತಿ ಜಿಂಟಾ ಮಾತ್ರ ಅತೀವ ದುಃಖದಿಂದ ಹೋದ್ರಂತೆ. ಯಾಕೆಂದರೆ ಆಕೆಯ ದುಬಾರಿ ಕಾರು ಈ ಕಾರ್ಯಕ್ರಮದಲ್ಲಿ ಡ್ಯಾಮೇಜ್ ಆಗಿತ್ತು. ಹೀಗಾಗಿ ಈ ಸುದ್ದಿ ಡ್ರೈವ್ ಸ್ಪಾರ್ಕ್ ಪ್ರವೇಶಿಸಿದೆ.
ಈ ಟಾಕ್ ಶೋ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೀತಿ ಜಿಂಟಾ ಸುತ್ತ ಮಾಧ್ಯಮದವರು ಮುಗಿಬಿದ್ದರಂತೆ. ಸೆಲೆಬ್ರಿಟಿಗಳ ಮಾತಿನ ಮುತ್ತು ಪಡೆಯಲು ಲೆಕ್ಕವಿಲ್ಲದಷ್ಟು ಮಾಧ್ಯಮದವರು ಈಕೆಯ ಸುತ್ತ ಇದ್ದರು. ಇದರಿಂದ ಆಕೆಯ ಕಾರಿಗೆ ಸಾಕಷ್ಟು ಡ್ಯಾಮೇಜ್ ಆಗಿತ್ತು. ಸಾಕಷ್ಟು ಗೀರುಗಳು ಬಿದ್ದಿದ್ದವು. ಸೈಡ್ ಮಿರರ್ ಪುಡಿಯಾಗಿತ್ತು.
ಟ್ವಿಟ್ಟರಿನಲ್ಲಿ ತನ್ನ ಕೋಪ, ಹತಾಶೆಯನ್ನೇಲ್ಲ ಮಾಧ್ಯಮದವರ ಮೇಲೆ ಹರಿಯಬಿಟ್ಟಿದ್ದಾರೆ ಪ್ರೀತಿಜಿಂಟಾ. ಯಾರಾದರೂ ಪತ್ರಕರ್ತರ ಕಾರಿಗೆ ಇಂತಹ ಹಾನಿಯಾಗಿದ್ದರೆ ಇದು ದೊಡ್ಡ ಸುದ್ದಿಯಾಗುತ್ತಿತ್ತು. ನನ್ನ ಕಾರಿಗೆ ಇಷ್ಟು ಹಾನಿಯಾದರೂ ಯಾರೂ ಕ್ಯಾರೇ ಮಾಡಿಲ್ಲ. ಇದರಿಂದ ನನಗೆಷ್ಟು ನೋವಾಗಿದೆ ಗೊತ್ತಾ? ಎಂದು ಜಿಂಟಾ ಹೇಳಿದ್ದಾರೆ.
ಆಕೆಯ ಹತಾಶೆ ಇಷ್ಟಕ್ಕೆ ಮುಗಿಯುವುದಿಲ್ಲ. ಎರಡು ಪೊಲೀಸ್ ಮತ್ತು ಕಡಿಮೆಯೆಂದರೂ ಹತ್ತು ಭದ್ರತಾ ಸಿಬ್ಬಂದಿಗಳಿದ್ದರೂ ಈ ರೀತಿಯಾಗಿದೆ ಎಂದು ಅವಲತ್ತುಕೊಂಡಿದ್ದಾರೆ. ಸೆಲೆಬ್ರಿಟಿಗಳು ಕಾರುಗಳನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದು ಒಂದು ನಿದರ್ಶನ. ಸೆಲೆಬ್ರಿಟಿ ಕಾರುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಪ್ರೀತಿ ಜಿಂಟಾ ಮಾತ್ರವಲ್ಲದೇ ಶಾರೂಖ್ ಖಾನ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ ಮತ್ತು ಲಾರಾ ದತ್ತ ಕೂಡ ಈ ಕಾರ್ಯಕ್ರಮದಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮ ಮುಗಿಸಿದಾಗ ಇವರೆಲ್ಲರು ನಗು ಮುಖದಿಂದ ಇದ್ದರು. ಆದರೆ ತನ್ನ ಪ್ರೀತಿಯ ಕಾರಿಗೆ ಹಾನಿಯಾಗಿರೋದನ್ನು ನೋಡಿ ಪ್ರೀತಿ ಜಿಂಟಾ ಮುಖ ಮಾತ್ರ ಸುಟ್ಟ ಬದನೆಕಾಯಿಯಂತ್ತಿತ್ತು ಎಂದು ನಮ್ಮ ಬಾತ್ಮಿದಾರರು ಹೇಳಿದ್ದಾರೆ.


Click it and Unblock the Notifications








