ಖಾಸಗಿ ಬಸ್ ಪ್ರಯಾಣ ದರ ಏರಿಕೆ; ಕನಿಷ್ಠ ದರ ರು. 7

ಇಂಧನ ಹಾಗೂ ಬಿಡಿಭಾಗಗಳ ದರ ಏರಿಕೆಯಿಂದಾಗಿ ಬಸ್ ದರ ಏರಿಕೆ ಮಾಡಲು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಸಂಘ ನಿರ್ಧರಿಸಿದೆ. ನೂತನ ಪ್ರಯಾಣ ದರ ಆಗಸ್ಟ್ 20 ಮಂಗಳವಾರದಿಂದಲೇ ಜಾರಿಗೆ ಬರಲಿದ್ದು, ಕನಿಷ್ಠ ದರ 6 ರು.ಗಳಿಂದ 7 ರು.ಗಳಿಗೆ ಹೆಚ್ಚಳಗೊಳಿಸಲಾಗಿದೆ.

ಖಾಸಗಿ ವೇಗದೂತ ಹಾಗೂ ನಗರ ಸಾರಿಗೆ (ಸಿಟಿ) ಬಸ್ಸುಗಳಲ್ಲಿ ಏಕರೂಪದಲ್ಲಿ ಪ್ರಯಾಣ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಇದರನ್ವಯ ಮಂಗಳೂರಿನಿಂದ ಉಡುಪಿಗೆ 50 ರುಪಾಯಿ ಇದ್ದ ದರ ಇನ್ನು ಮುಂದೆ 55 ರುಪಾಯಿ ಏರಿಕೆಯಾಗಲಿದೆ ಎಂದು ಬಸ್ ಮಾಲಕರ ಸಂಘ ತಿಳಿಸಿದೆ. ಹಾಗೆಯೇ ಉಡುಪಿಯಿಂದ ಕುಂದಾಪುರಕ್ಕೆ ಪ್ರಸ್ತುತ ದರ 34 ರು.ಗಳಿಂದ 38 ರು.ಗಳಿಗೆ ಏರಿಕೆ ಕಂಡುಬರಲಿದೆ.

ಪ್ರಸ್ತುತ ಶೇಕಡಾ 10ರಿಂದ ಶೇ. 15ರಷ್ಟು ದರ ಏರಿಕೆ ಮಾಡಲಾಗಿದೆ. ಕೇಂದ್ರ ಸರಕಾರದ ನೀತಿಯಂತೆ ಡೀಸೆಲ್ ದರಗಳಲ್ಲಿ ಪ್ರತಿ ತಿಂಗಳು ವರ್ಧನೆ ಕಂಡುಬರುತ್ತಿದೆ. ಇದರಿಂದ ಬಸ್ಸು ಪ್ರಯಾಣ ದರ ಏರಿಸುವುದು ಅನಿವಾರ್ಯವಾಗಿದೆ. ಹಾಗಿದ್ದರೂ ಕರ್ನಾಟಕ ಸರಕಾರ ಆದೇಶದಂತೆ ಕನಿಷ್ಠ ಪ್ರಮಾಣದಲ್ಲಿ ದರ ಏರಿಕೆಗೊಳಿಸಲಾಗುತ್ತಿದೆ ಎಂದು ಬಸ್ ಮಾಲಕರ ಸಂಘ ಸ್ಪಷ್ಟನೆ ನೀಡಿದೆ.

ಈ ನಡುವೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶೇ. 50 ರಿಯಾಯಿತಿ ದರ ಮುಂದವರಿಸಲು ನಿರ್ಧರಿಸಲಾಗಿದೆ. ಹಾಗೆಯೇ ಮುಂಗಡವಾಗಿ ಹಣ ಪಾವತಿಸಿ ಉಚಿತವಾಗಿ ಪ್ರಯಾಣಿಸುವ ಆರ್‌ಎಫ್‌ಐಡಿ ಸೌಲಭ್ಯವನ್ನು ಮುಂದುವರಿಸಿದೆ. ಹೊಸ ದರ ನೀತಿಯು ರಾಜ್ಯದಲ್ಲಿ ಸಂಚರಿಸುತ್ತಿರುವ 8,000 ಖಾಸಗಿ ಬಸ್ಸುಗಳಿಗೆ ಅನ್ವಯವಾಗಲಿದೆ.

More from DriveSpark

Article Published On: Monday, August 19, 2013, 12:40 [IST]
English summary
Private bus association announcing a 10 to 15 per cent hike in fares on Saturday. Under the revised fare, to be in place from August 20, the minimum rate for travel in city buses will be Rs. 7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+