ಡಸ್ಟರ್ ಹಿನ್ನಡೆ; ರೆನೊ ಇಂಡಿಯಾ ಮಾರಾಟ ಕುಸಿತ
ಜನಪ್ರಿಯ ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಕಾರು ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸಿರುವುದರಿಂದ ಆಗಸ್ಟ್ ತಿಂಗಳ ಮಾರಾಟದಲ್ಲಿ ರೆನೊ ಇಂಡಿಯಾ ಶೇಕಡಾ 4ರಷ್ಟು ಕುಸಿತ ಅನುಭವಿಸಿದೆ.
ರೆನೊ ಇಂಡಿಯಾ ಆಗಸ್ಟ್ ತಿಂಗಳಲ್ಲಿ 3,733 ಯುನಿಟ್ ಮಾರಾಟ ಕಂಡುಕೊಂಡಿದೆ. ಇದು ಕಳೆದ ವರ್ಷ ಇದೇ ಸಂದರ್ಭದಲ್ಲಿ 3,916ರಷ್ಟಿತ್ತು. ಹಣದುಬ್ಬರ, ಬಡ್ಡಿದರ ಏರಿಕೆ ಹಾಗೂ ಇಂಧನ ದರ ಹೆಚ್ಚಳಗೊಂಡಿರುವುದು ಮಾರಾಟವನ್ನು ಪ್ರತಿಕೂಲವಾಗಿ ಬಾಧಿಸಿದೆ.
ಪ್ರಸಕ್ತ ಸಾಲಿನಲ್ಲಿ ಸವಾಲುಗಳಿಂದ ಕೂಡಿದ್ದರೂ ಜನವರಿಯಿಂದ ಆಗಸ್ಟ್ ವರೆಗೆ 45,986 ಯುನಿಟ್ ಮಾರಾಟ ಕಂಡುಕೊಳ್ಳುವಲ್ಲಿ ರೆನೊ ಯಶಸ್ವಿಯಾಗಿದೆ.
ಡಸ್ಟರ್ ಹಿನ್ನಡೆ...
ಈ ನಡುವೆ ಇಕೊಸ್ಪೋರ್ಟ್‌ಗಳಂತಹ ಪ್ರತಿಸ್ಪರ್ಧಿಗಳು ಮಾರುಕಟ್ಟೆಯಲ್ಲಿ ಭರ್ಜರಿ ಬೇಟೆ ನಡೆಸಿರುವಂತೆಯೇ ಡಸ್ಟರ್ ಸೇಲ್ಸ್ ಹಿನ್ನಡೆ ಅನುಭವಿಸಿದೆ. ಜುಲೈ ತಿಂಗಳಲ್ಲಿ ಡಸ್ಟರ್ 2,967 ಯುನಿಟ್ ಮಾರಾಟವಾಗಿದೆ. ಉಳಿದಂತೆ ಸ್ಕಾಲಾ 340, ಪಲ್ಸ್ 405, ಫ್ಲೂಯನ್ಸ್ 11 ಕೋಲಿಸ್ 10 ಯುನಿಟ್ ಮಾರಾಟ ಕಂಡಿದೆ.


Click it and Unblock the Notifications









