ರೆನೊದಿಂದ ಸ್ಕಾಲಾ ಡೀಸೆಲ್ ವೆರಿಯಂಟ್ ಲಾಂಚ್
ರೆನೊ ಇಂಡಿಯಾ ಸಂಸ್ಥೆಯು ತನ್ನ ಪ್ರೀಮಿಯಂ ಸೆಡಾನ್ ಕಾರಾದ ಸ್ಕಾಲಾದ ಎಂಟ್ರಿ ಲೆವೆಲ್ ಡೀಸೆಲ್ ವೆರಿಯಂಟ್ ಲಾಂಚ್ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರವು 8.29 ಲಕ್ಷ ರು.ಗಳಾಗಿವೆ.
ನೂತನ ಸ್ಕಾಲಾ ಆರ್Xಇ ವೆರಿಯಂಟ್ ಗ್ರಾಹಕರಿಗೆ ಅತ್ಯುತ್ತಮ ಡೀಸೆಲ್ ಪ್ಯಾಕೆಜ್ ಪ್ರದಾನ ಮಾಡಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಡೀಸೆಲ್ ಹಾಗೂ ಪೆಟ್ರೇಲ್ ಸೇರಿದಂತೆ ಒಟ್ಟು ಆರು ವೆರಿಯಂಟ್‌ಗಳಲ್ಲಿ ಸ್ಕಾಲಾ ಲಭ್ಯವಿರುತ್ತದೆ. ಪೆಟ್ರೋಲ್ ವೆರಿಯಂಟ್ ದರಗಳು 7.19 ಲಕ್ಷ ರು.ಗಳಿಂದ ಆರಂಭವಾಗಿ 9.99 ಲಕ್ಷ ರು.ಗಳ ವರೆಗಿದೆ. ಹಾಗೆಯೇ ಡೀಸೆಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ದರ 8.79 ಲಕ್ಷ ರು.ಗಳಿಂದ ಆರಂಭವಾಗಿ 9.68 ಲಕ್ಷ ರು.ಗಳ ವರೆಗಿದೆ.
ನೂತನ ಎಂಟ್ರಿ ಲೆವೆಲ್ ಸ್ಕಾಲಾ ಡೀಸೆಲ್ ಆರ್xಇ ವೆರಿಯಂಟ್‌ನಲ್ಲಿ ಡ್ರೈವರ್ ಸೈಡ್ ಏರ್ ಬ್ಯಾಗ್, ಆಂಟಿ ಲಾಕ್ ಬ್ರೇಕ್ ಸಿಸ್ಟಂ ಹಾಗೂ ಎಲೆಕ್ಟ್ರಾನಿಕ್ ಬ್ರೇಕ್‌ಗಳಂತಹ ಫೀಚರ್ಸ್ ಹೊಂದಿರಲಿದೆ.


Click it and Unblock the Notifications









