ರೆನೊ ಪಲ್ಸ್ 'ವೋಯೆಜ್ ಎಡಿಷನ್'ನಲ್ಲಿ ಎಲ್ಲವೂ ಹೊಸತು
ಕಳೆಗುಂದಿರುವ ಮಾರಾಟಕ್ಕೆ ಉತ್ತೇಜನ ನೀಡುವುದರತ್ತ ಮುಂದಾಗಿರುವ ರೆನೊ ಇಂಡಿಯಾವು ವೋಯೆಜ್ ಎಡಿಷನ್‌ಗೆ ವಿಶೇಷ ಆವೃತ್ತಿಯನ್ನು ಮುಂದಿರಿಸಿದೆ. ನಿಮ್ಮ ಮಾಹಿತಿಗಾಗಿ, ಇದ್ಯಾವುದೇ ಸ್ಪೆಷಲ್ ಎಡಿಷನ್ ಅಲ್ಲ. ಬದಲಾಗಿ ಹೆಚ್ಚುವರಿ ಆಕ್ಸೆಸರಿ ಗಿಟ್ಟಿಸಿಕೊಳ್ಳುವಲ್ಲಿ ಗ್ರಾಹಕರಿಗೆ ನೆರವಾಗಲಿದೆ.
ಹೆಸರಲ್ಲೇ ಸೂಚಿಸಿರುವಂತೆಯೇ ವೋಯೆಜ್ ಅಂದರೆ ಪ್ರಯಾಣ. ಅಂತೆಯೇ ಈ ಪ್ರಯಾಣ ಎಡಿಷನ್‌ನಲ್ಲಿ ಟಚ್ ಸ್ಕ್ರೀನ್ ಮಾಹಿತಿ ಸಿಸ್ಟಂ ಜತೆ ನೇವಿಗೇಷನ್, ಸ್ಪೀಕರ್ಸ್, ಪಲ್ಸ್ ವೋಯೆಜ್ ಪ್ಯಾಕ್ ಲಭ್ಯವಾಗಲಿದೆ. ಇವೆಲ್ಲವೂ 58,000 ರು.ಗಳಷ್ಟು ದುಬಾರಿಯಾಗಲಿದೆ.

ಏತನ್ಮಧ್ಯೆ ರೆನೊವು ನಾಲ್ಕು ವರ್ಷಗಳ ರೋಡ್ ಸೈಡ್ ಅಸಿಸ್ಟಂಟ್, ಎರಡು ವರ್ಷಗಳ ಮುಂದುವರಿದ ವಾರಂಟಿ, ಎರಡು ವರ್ಷಗಳ ಉಚಿತ ವಿಮೆ ಸೌಲಭ್ಯಗಳನ್ನು ಒದಗಿಸುತ್ತಿದೆ.
ಮೊದಲ ತಲೆಮಾರಿನ ನಿಸ್ಸಾನ್ ಮೈಕ್ರಾದಿಂದ ರಿ ಬ್ಯಾಡ್ಜ್ ಪಡೆದುಕೊಂಡಿರುವ ನಿಸ್ಸಾನ್ ಮೈಕ್ರಾ ಹ್ಯಾಚ್‌ಬ್ಯಾಕ್ ಕಾರು 3 ಸಿಲಿಂಡರ್, 1.2 ಲೀಟರ್ ಪೆಟ್ರೋಲ್ (76ಅಶ್ವಶಕ್ತಿ, 104 ಎನ್‌ಎಂ ಟಾರ್ಕ್) ಹಾಗೂ 1.5 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ (64ಅಶ್ವಶಕ್ತಿ, 160 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡುತ್ತದೆ.


Click it and Unblock the Notifications








