ಹೋಗುವಾಗ ಟ್ರಾಫಿಕ್ ಜಾಮ್, ಬರುವಾಗ ಸಿಗ್ನಲ್ ಜಂಪ್ ಮಾಡಿದ ಸಿದ್ಧು

By Nagaraja

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಸಿದ್ಧರಾಮಯ್ಯ ಕರ್ನಾಟಕದ 28ನೇ ಮುಖ್ಯಮಂತ್ರಿಯಾಗಿ ಇನ್ನೇನು ಒಂದೆರಡು ದಿನಗಳೊಳಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಷ್ಟಕ್ಕೂ ಪಕ್ಷದ ಸಾಮಾನ್ಯ ಶಾಸಕನಾಗಿ ಕಚೇರಿಗೆ ಬಂದಿದ್ದ ಸಿದ್ದು, ಹೋರ ಬರುವ ಹೊತ್ತಿಗೆ ಪರಿಸ್ಥಿತಿಯೇ ಬದಲಾಗಿತ್ತು.

ಶನಿವಾರ ಕಾಂಗ್ರೆಸ್ ಪಕ್ಷದ ಕಚೇರಿಗೆ ಸಿದ್ದರಾಮಯ್ಯ ತೆರಳುವಾಗ ತುಂಬಾನೇ ಟ್ರಾಫಿಕ್ ಜಾಮ್ ಇತ್ತು. ಅವರು ಪಕ್ಷದ ಕಚೇರಿಗೆ ತೆರಳುವ ಹೊತ್ತಿಗೆ ಯಾವುದೇ ಸಿಎಂ ಪಟ್ಟ ಇರಲಿಲ್ಲ. ಹಾಗೆಯೇ ಒಬ್ಬ ಸಾಮಾನ್ಯ ಶಾಸಕನಾಗಿ ಟ್ರಾಫಿಕ್‌ನಲ್ಲಿ ಸಿಗ್ನಲ್ ಫಾಲೋ ಮಾಡುತ್ತಾ ಕಚೇರಿಗೆ ತೆರಳಿದ್ದರು.

ಆದರೆ ಸಂಜೆ ಹೊತ್ತಿಗೆ ನೂತನ ಸಿಎಂ ಆಗಿ ಘೋಷಣೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿಯವರ ಭದ್ರತಾ ಸಿಬ್ಬಂದಿಗಳು ಕಾಂಗ್ರೆಸ್ ಕಚೇರಿಗೆ ದೌಡಾಯಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಮುಂಗಾವಲು ವಾಹನ ಕೂಡಾ ಬಂದಿತ್ತು. ಆ ಬಳಿಕ ಕಚೇರಿಯಿಂದ ನಿವಾಸಕ್ಕೆ ತೆರಳುವಾಗ ಸಿಗ್ನಲ್ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕೊಡಲಾಗಿತ್ತು.

ಈ ಸಂದರ್ಭದಲ್ಲಿ ಟ್ರಾಫಿಕ್ ಸಂಪೂರ್ಣ ಪೊಲೀಸ್ ಅಧೀನತೆಯಲ್ಲಿತ್ತು. ಯಾವುದೇ ಟ್ರಾಫಿಕ್ ಸಮಸ್ಯೆಯಿಲ್ಲದೆ ಸಿದ್ಧರಾಮಯ್ಯ ವಾಹನಕ್ಕೆ ಹೋಗಲು ಅನುವು ಮಾಡಿಕೊಡಲಾಗಿತ್ತು. ಈ ಮೂಲಕ ಶುಕ್ರವಾರದಿಂದಲೇ ಭಾವಿ ಸಿಎಂಗೆ ಸಂಪೂರ್ಣ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ.

More from DriveSpark

Article Published On: Saturday, May 11, 2013, 14:17 [IST]
English summary
Congress Legislature Party (CLP) leader Siddaramaiah, who was yesterday elected as the Karnataka Chief Minister, will get the official security facilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+