2016ರಲ್ಲಿ ಸ್ಕೋಡಾದಿಂದ ಎಸ್‌ಯುವಿ ಲಾಂಚ್
ದೇಶದ ಮಾರುಕಟ್ಟೆ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಿರುವ ಸ್ಕೋಡಾ ವಾಹನ ತಯಾರಕ ಸಂಸ್ಥೆಯು, ನಿಕಟ ಭವಿಷ್ಯದಲ್ಲಿ ಭಾರತದಲ್ಲಿ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಲಾಂಚ್ ಮಾಡಲು ಯೋಜನೆ ಹೊಂದಿದೆ.
ಸದ್ಯ ಬಂದಿರುವ ವರದಿಗಳ ಪ್ರಕಾರ ಸ್ಕೋಡಾ ನೂತನ ಎಸ್‌ಯುವಿ 2016ರಲ್ಲಿ ಲಾಂಚ್ ಆಗಲಿದೆ. ಸ್ಕೋಡಾ ನೂತನ ಎಸ್‌ಯುವಿ ಫೋಕ್ಸ್‌ವ್ಯಾಗನ್ ಕ್ರಾಸ್‌ಬ್ಲ್ಯೂ ಕಾನ್ಸೆಪ್ಟ್ ತಲಹದಿಯಲ್ಲಿ ರೂಪುಗೊಳ್ಳಲಿದೆ. ಅಂದ ಹಾಗೆ ಫೋಕ್ಸ್‌ವ್ಯಾಗನ್ ಕ್ರಾಸ್‌ಬ್ಲೂ ಕಾನ್ಸೆಪ್ಟ್ 2015ನೇ ಇಸವಿಯಲ್ಲಷ್ಟೇ ಆಗಮನವಾಗಲಿದೆ.

4.6 ಮೀಟರ್ ಉದ್ದವಾಗಿರುವ ಸ್ಕೋಡಾ ಎಸ್‌ಯುವಿ ಐದು ಹಾಗೂ ಏಳು ಸೀಟುಗಳ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ. ಹಾಗೆಯೇ ಫ್ರಂಟ್ ಹಾಗೂ ಆಲ್ ವೀಲ್ ಡ್ರೈವ್ ಸೌಲಭ್ಯವಿರಲಿದೆ. ಫೋಕ್ಸ್‌ವ್ಯಾಗನ್ ಟೈಗೂನ್ ಮೇಲ್ದರ್ಜೆಯಲ್ಲಿ ಸ್ಕೋಡಾ ಗುರುತಿಸಿಕೊಳ್ಳಲಿದೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಈ ಕಾರಿನ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಸ್ಕೋಡಾ ತಾಂತ್ರಿಕ ವಿಭಾಗದ ಮುಖ್ಯಸ್ಥರ ಪ್ರಕಾರ ಬೇಸ್ ವೆರಿಯಂಟ್ 1.6 ಲೀಟರ್ ಟರ್ಬೊ ಡೀಸೆಲ್ ಅಂತೆಯೇ ಟಾಪ್ ವೆರಿಯಂಟ್ 2.0 ಲೀಟರ್ ಫೋರ್ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ. ಅಷ್ಟೇ ಅಲ್ಲದೆ ಹೈಬ್ರಿಡ್ ವೆರಿಯಂಟ್‌ನಲ್ಲೂ ಆಗಮನವಾಗಲಿದೆ.
ಪ್ರೀಮಿಯಂ ಎಸ್‌ಯುವಿ ಜತೆಗೆ ಚಿಕ್ಕದಾದ ಕ್ರೀಡಾ ಬಳಕೆಯ ವಾಹನವನ್ನು ಲಾಂಚ್ ಮಾಡುವ ಯೋಜನೆಯನ್ನು ಸ್ಕೋಡಾ ಹೊಂದಿದೆ. ಇದು ಯೆಟಿ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.


Click it and Unblock the Notifications